Bigg Boss : ಬಗ್ಗಲ್ಲ, ಕುಗ್ಗಲ್ಲ ಅಂತ ಹೇಳಿ ಜೈಲು ಸೇರಿದ ಹನುಮಂತ; ಕಳಪೆ ಕೊಟ್ಟು ಮನೆ ಮಂದಿ ಹೇಳಿದ್ದೇನು

Written by Soma Shekar

Published on:

---Join Our Channel---

Bigg Boss Kannada: ಬಿಗ್ ಬಾಸ್ ಕನ್ನಡ (Bigg Boss Kannada) ಸೀಸನ್ ಹನ್ನೊಂದು ಮತ್ತೊಂದು ವೀಕೆಂಡ್ ಗೆ ಹತ್ತಿರುವಾಗುತ್ತಿರುವ ವೇಳೆಯಲ್ಲೇ ಈ ವಾರ ಬಿಗ್ ಬಾಸ್ (Bigg Boss) ಮನೆಯ ಕಳಪೆ ಯಾರು ಅನ್ನೋ ವಿಚಾರಕ್ಕೆ ತೆರೆ ಬಿದ್ದಿದೆ. ವಾಹಿನಿ ಶೇರ್ ಮಾಡಿರುವ ಹೊಸ ಪ್ರೊಮೊದಲ್ಲಿ ಮನೆ ಮಂದಿಯಿಂದ ಕಳಪೆ ಪಡೆದವರು ಯಾರು ಅನ್ನೋದು ಬಹಿರಂಗವಾಗಿದೆ.

ಈ ವಾರ ಬಿಗ್ ಬಾಸ್ ಮನೆಯಲ್ಲಿ ಮನೆ ಮಂದಿಯ ಬಹುಮತದ ಆಯ್ಕೆಯೊಂದಿಗೆ ಕಳಪೆಯನ್ನು ಪಡ್ಕೊಂಡು ಜೈಲು ಸೇರಿರುವುದು ಹನುಮಂತ (Hanumantha). ಮನೆ ಮಂದಿ ಬಹುತೇಕ ಹನುಮಂತನನ್ನೇ ಕಳಪೆಗೆ ಆಯ್ಕೆ ಮಾಡಿದ್ದಾರೆ ಮತ್ತು ಹನುಮಂತ ಯಾಕೆ ಕಳಪೆ ಅನ್ನೋದಕ್ಕೆ ತಮ್ಮ ಕಾರಣವನ್ನು ನೀಡಿದ್ದಾರೆ.

ರೆಸಾರ್ಟ್ ಟಾಸ್ಕ್ ನಲ್ಲಿ ಹನುಮಂತ ಸಿಬ್ಬಂದಿಯಾಗಿದ್ದ ವೇಳೆಯಲ್ಲಿ ಅವರು ಶುಚಿತ್ವವನ್ನು ಸರಿಯಾಗಿ ನಿಭಾಯಿಸಲಿಲ್ಲ ಅನ್ನೋದು ಚೈತ್ರ (Chaithra Kundapura) ಅವರು ನೀಡಿದ ಕಾರಣವಾಗಿದೆ. ಬೇರೆ ಅವ್ರ ಹನುಮಂತ ಕೂಡಾ ನನಗೆ ಕೆಲಸ ಕೊಟ್ರು ಅಂತ ಗೌತಮಿ ಕಾರಣ ನೀಡಿದ್ದಾರೆ.

ಧನರಾಜ್ ತಪ್ಪು ಅಂತ ಕಾಣ್ಸಿದ್ದು ಹನುಮಂತು ಎಂದು ಹೇಳಿದರೆ, ಎಲ್ಲೋ ಒಂದು ಕಡೆ ಕಿರಿಕಿರಿ ಆಯ್ತು ಅಂತ ಮಂಜಣ್ಣ ಹೇಳಿದ್ದಾರೆ. ಇನ್ನು ಕಳಪೆ ಪಡೆದ ಹನುಮಂತ ಇದ್ರಿಂದ ನಾನು ಬಗ್ಗೋದು ಇಲ್ಲ, ಕುಗ್ಗೋದು ಇಲ್ಲ ಅಂತ ಹೇಳಿ ಜೈಲಿಗೆ ಹೋಗಿದ್ದಾರೆ. ನಿಮ್ಮ ಪ್ರಕಾರ ಈ ವಾರ ಯಾರು ಕಳಪೆ ಆಗಬೇಕಿತ್ತು ಕಾಮೆಂಟ್ ಮಾಡಿ ತಿಳಿಸಿ.

Leave a Comment