Bigg Boss : ಚೈತ್ರ ಮತ್ತೆ ಜೈಲಿಗೆ, ಹೊಸ ದಾಖಲೆ ಬರೆದ ಚೈತ್ರ; ಮನೆ ಮಂದಿಗೆ ಖಡಕ್ ಮಾತು ಹೇಳಿದ ಚೈತ್ರಕ್ಕ

Written by Soma Shekar

Published on:

---Join Our Channel---

Bigg Boss Kannada: ಬಿಗ್ ಬಾಸ್ (Bigg Boss Kannada) ಮನೆಯ ಆಟ ಮತ್ತೊಂದು ವೀಕೆಂಡ್ ಗೆ ಸಮೀಪವಾಗಿದೆ. ಈ ವಾರದ ಎಲ್ಲಾ ಟಾಸ್ಕ್ ಗಳು ಮುಗಿದಾಗಿದೆ. ಇನ್ನು ಕ್ಯಾಪ್ಟನ್ಸಿ ಟಾಸ್ಕ್ ಒಂದು ಬಾಕಿ ಇದೆ. ಆದರೆ ವಾಹಿನಿ ಶೇರ್ ಮಾಡಿದ ಹೊಸ ಪ್ರೊಮೊದಲ್ಲಿ ಈ ವಾರದ ಕ್ಯಾಪ್ಟನ್ ಯಾರಾಗಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಾಗಿದೆ. ಹೊಸ ಪ್ರೊಮೊದಲ್ಲಿನ ದೃಶ್ಯಗಳಿಂದಲೇ ಇದು ಎಲ್ಲರಿಗೂ ಅರ್ಥವಾಗಿದೆ.

ಈ ವಾರ ಬಿಗ್ ಬಾಸ್ ಮನೆಯಲ್ಲಿ ಭವ್ಯ ಗೌಡ (Bhavya Gowda) ಅವರು ಮನೆಯ ಹೊಸ ಕ್ಯಾಪ್ಟನ್ ಆಗಿದ್ದಾರೆ. ಇನ್ನು ಕ್ಯಾಪ್ಟನ್ಸಿ ಟಾಸ್ಕ್ ಗೆ ಆಯ್ಕೆಯಾಗಿದ್ದ ಐಶ್ವರ್ಯ ಮತ್ತು ಭವ್ಯ ಅವರಿಗೆ ಬಿಗ್ ಬಾಸ್ ಎಂತಾ ಟಾಸ್ಕ್ ಕೊಟ್ಟಿದ್ರು ಅನ್ನೋದನ್ನ ಇವತ್ತಿನ ಎಪಿಸೋಡ್ ನಲ್ಲಿ ನೋಡಬೇಕಾಗಿದೆ.

ಇದೇ ವೇಳೆ ಈ ವಾರದ ಕಳಪೆಯ ವಿಚಾರದಲ್ಲಿ ರಜತ್ ಅವರ ಇಡೀ ತಂಡ ಚೈತ್ರ (Chaithra) ಅವರ ಹೆಸರನ್ನ ತಗೊಂಡು ತಮ್ಮ ತಮ್ಮ ಕಾರಣ ಕೊಟ್ಟಿದ್ದಾರೆ. ಆದ್ರರೆ ಚೈತ್ರ ತಮಗೆ ಕಳಪೆ ಕೊಟ್ಟಿದ್ದಕ್ಕೆ, ಕುಣಿಲಾರದವ್ರಿಗೆ ನೆಲಡೊಂಕು ಅನ್ನೋ ಹಾಗೆ ಆಡೋಕಾಗದೇ ಇರೋರು ಉಸ್ತುವಾರಿ ಮೇಲೆ ಹಾಕ್ತಾ ಇದ್ದೀರಾ ಅಂತ ಹೇಳಿದ್ದಾರೆ.

ಇನ್ನು ಈ ವಾರದ ಉತ್ತಮ ಯಾರಿಗೆ ಸಿಕ್ತು ಅನ್ನೋದನ್ನ ಕೂಡಾ ಇವತ್ತಿನ ಎಪಿಸೋಡ್ ನಲ್ಲೇ ನೋಡಬೇಕಾಗಿದೆ. ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಸಲ ಕಳಪೆ ಪಡೆದು ಜೈಲು ಸೇರುವ ಸ್ಪರ್ಧಿಯಾಗಿ ದಾಖಲೆಯನ್ನು ಬರೆಯುತ್ತಿದ್ದಾರೆ ಚೈತ್ರ ಕುಂದಾಪುರ ಅವರು.

Leave a Comment