Bigg Boss Kannada : ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಈ ವಾರದಲ್ಲಿ ನಡೆದ ಒಂದಷ್ಟು ಘಟನೆಗಳಲ್ಲಿ ರಜತ್ (Rajath) ಮತ್ತು ಧನರಾಜ್ (Dhanraj) ಅವರ ನಡುವೆ ನಡೆದಂತಹ ಮಾತಿನ ಚಕಮಕಿ ಕೂಡಾ ಒಂದಾಗಿತ್ತು. ಅದು ಮನೆಯಲ್ಲಿ ಕಳಪೆ ಕೊಡೋವಾಗಲಂತೋ ಇನ್ನೊಂದು ಹಂತಕ್ಕೆ ತಲುಪಿತ್ತು. ರಜತ್ ಕೋಪದಲ್ಲಿ ಧನರಾಜ್ ಮೇಲೆ ಕೈ ಮಾಡೋದಕ್ಕೆ ಸಹಾ ಮುಂದಾಗಿದ್ದರು. ಈಗ ಇದೇ ವಿಚಾರ ವೀಕೆಂಡ್ ನಲ್ಲಿ ಸಹಾ ಚರ್ಚೆಗೆ ಬಂದಿರೋದು ಕಂಡಿದೆ.
ಈವಾರದ ವೀಕೆಂಡ್ ಪಂಚಾಯ್ತಿಯ ಹೊಸ ಪ್ರೊಮೊದಲ್ಲಿ ಸುದೀಪ್ (Sudeep) ಅವ್ರು ಧನರಾಜ್ ಮತ್ತು ರಜತ್ ಗೆ ಕ್ಲಾಸ್ ತಗೊಂಡಿರೋದು ಬಹಳ ಸ್ಪಷ್ಟವಾಗಿ ಕಂಡಿದೆ. ಸುದೀಪ್ ಅವರು ನೀವು ಹುಲಿ ಸಿಂಹ ಆಗೋಕೆ ಹೋಗಿದ್ದೀರಾ ಮನುಷ್ಯರಾಗಿ ಇರೋಕೆ ಹೋಗಿರೋದಾ ಅಂತ ಪ್ರಶ್ನೆ ಮಾಡಿದ್ದಾರೆ.
ಧನರಾಜ್ ಅವರನ್ನ ಪ್ರಶ್ನೆ ಮಾಡಿದ ಸುದೀಪ್ ಅವ್ರು ರಜತ್ ಕೆನ್ನೆ ಮುಟ್ಟಿ ಪ್ರವೋಕ್ ಮಾಡೋ ಅವಶ್ಯಕತೆ ನಿಮಗೆ ಏನಿತ್ತು ಅಂತ ಕೇಳಿದ್ದಾರೆ. ಅಲ್ಲದೇ ರಜತ್ ಗೆ ಮಾತಿನ ಮೇಲೆ ನಿಗಾ ಇರಲಿ ಅಂತ ವಾರ್ನ್ ಸಹಾ ಮಾಡಿದ್ದಾರೆ. ರಜತ್ ಅವ್ರು ನಾನೇನು ಕೆಟ್ಟ ಮಾತು ಹೇಳಿಲ್ಲ ಎಂದು ಸಮರ್ಥನೆ ನೀಡಿದ್ದಾರೆ.
ಆಗ ಸುದೀಪ್ ಅವರು ರಜತ್ ಗೆ ನಿಮ್ಮ ಪ್ರಕಾರ ಕೆಟ್ಟ ಮಾತು ಅಂದ್ರೆ ಏನೇನು ಹೇಳಿ ನಾವು ಬುಕ್ ಮಾಡ್ಕೊಳ್ತೀವಿ ಅಂತ ಸಿಟ್ಟಾಗಿದ್ದಾರೆ ಅಲ್ಲದೇ ಫಿಸಿಕಲ್ ಫೈಟ್ ಗೆ ಅವಕಾಶ ಕೊಡ್ತೀವಿ ಮಾಡ್ತೀರಾ ಎಂದಿದ್ದಾರೆ. ಇನ್ನು ರಜತ್ ಗೆ ಶಿಕ್ಷೆಯಾಗಿ ಪಂಜರದಲ್ಲಿ ಇರಿಸಲಾಗಿದ್ದು, ಅವ್ರು ಎಲ್ಲಿಗೇ ಹೋಗಬೇಕಾದ್ರು ಧನರಾಜ್ ಪಂಜರ ಎಳ್ಕೊಂಡು ಹೋಗಬೇಕು ಅಂತ ಹೇಳಿದ್ದಾರೆ.