Drone Prathap : ಬಿಗ್ ಬಾಸ್ ನ (Bigg Boss) ಮಾಜಿ ಸ್ಪರ್ಧಿ ಡ್ರೋನ್ ಪ್ರತಾಪ್ (Drone Prathap) ಸೋಷಿಯಲ್ ಮೀಡಿಯಾಗಳಲ್ಲಿ ಸಕ್ರಿಯರಾಗಿದ್ದಾರೆ. ಆಗಾಗ ಸೈನ್ಸ್ ವೀಡಿಯೋಗಳು ಅಂತ ಕೆಲವೊಂದು ವೀಡಿಯೋಗಳನ್ನು ಶೇರ್ ಮಾಡುತ್ತಾರೆ. ಈಗಲೂ ಅವರು ಅಂತದೊಂದು ಹೊಸ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಇದನ್ನ ನೋಡಿ ಸಾರ್ವಜನಿಕರು ಸಿಟ್ಟಾಗಿದ್ದಾರೆ. ಪ್ರತಾಪ್ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುತ್ತಿದ್ದಾರೆ.
ಈಗ ಡ್ರೋನ್ ಪ್ರತಾಪ್ ಮಾಡಿದ ಎಡವಟ್ಟು ನೀರಿನೊಳಗೆ ಕೆಮಿಕಲ್ಸ್ ಹಾಕಿ ಬ್ಲಾಸ್ಟ್ ಮಾಡಿರೋದು. ಸೋಶಿಯಲ್ ಮೀಡಿಯಾದಲ್ಲಿ ವೀವ್ಸ್ ಗೋಸ್ಕರ ಎಂತೆಂತ ವೀಡಿಯೋ ಬೇಕಾದ್ರು ಕೆಲವರು ಮಾಡ್ತಾರೆ. ಈಗ ಡ್ರೋನ್ ಪ್ರತಾಪ್ ಕೂಡಾ ಹಾಗೆ ಮಾಡಿದ್ದಾರೆ ಅಂತ ಜನ ಸಿಟ್ಟಾಗಿದ್ದಾರೆ.
ಸೈನ್ಸ್ ವೀಡಿಯೋ ಹೆಸರಲ್ಲಿ ಕೆಮಿಕಲ್ ನ ನೀರಿಗೆ ಹಾಕಿ ಪ್ರತಾಪ್ ನೀರಿನಾಳದಲ್ಲಿ ಬ್ಲಾಸ್ಟ್ ಮಾಡಿದ್ದು, ನಂತರ ಬೆಂಕಿ ಕೂಡಾ ಕಾಣಿಸಿದೆ. ಈ ಬ್ಲಾಸ್ಟ್ ಬಗ್ಗೆ, ಬಳಸಿದ ಕೆಮಿಕಲ್ ಬಗ್ಗೆ ಪ್ರತಾಪ್ ಅವರು ಖುಷಿಯಿಂದ ಹೇಳಿರೋದು ಸಹಾ ಕಾಣಿಸಿದೆ. ಇದನ್ನ ನೋಡಿದ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ.
ಪ್ರತಾಪ್ ಮಾಡಿದ ಕೆಲಸಕ್ಕೆ ಅನೇಕರು ಸಿಟ್ಟಾಗಿದ್ದಾರೆ. ಅಲ್ಲದೇ ಇದು ಕಾನೂನು ಬಾಹಿರ ಎಂದಿದ್ದು, ಆ ರೀತಿ ಕೆಮಿಕಲ್ಸ್ ಬಳಿಸಿ ಬ್ಲಾಸ್ಟ್ ಮಾಡೋಕೆ ಅವರಿಗೆ ಅನುಮತಿ ನೀಡಿದ್ದು ಯಾರು? ನೀರನ್ನು ಮಲಿನಗೊಳಿಸುವ ಅವಶ್ಯಕತೆ ಏನಿದೆ? ಎಂದು ಪ್ರಶ್ನೆ ಮಾಡಿದ್ದಾರೆ ನೆಟ್ಟಿಗರು, ಪ್ರತಾಪ್ ಮೇಲೆ ಸೂಕ್ತ ಕ್ರಮ ಜರುಗಿಸಬೇಕಂತ ಕೆಲವರು ಹೇಳಿದ್ದಾರೆ.