Bigg Boss Kannada : ಬಿಗ್ ಬಾಸ್ (Bigg Boss Kannada) ಮನೆಗೆ ಇಂದು ಸೀಸನ್ ಹತ್ತರ ಸ್ಪರ್ಧಿಗಳು ಬಂದಿದ್ದಾರೆ. ವಾಹಿನಿ ಶೇರ್ ಮಾಡಿರೋ ಪ್ರೊಮೊ ಈಗಾಗಲೇ ವೈರಲ್ ಆಗಿದೆ ಮತ್ತು ವೀಕ್ಷಕರು ಇವತ್ತಿನ ಎಪಿಸೋಡ್ ಗಾಗಿ ಕಾಯ್ತಾ ಇದ್ದಾರೆ. ಈಗ ವಾಹಿನಿ ಮತ್ತೊಂದು ಹೊಸ ಪ್ರೊಮೊ ಶೇರ್ ಮಾಡಿದ್ದು, ಈ ವಾರದ ನಾಮಿನೇಷನ್ ಪ್ರಕ್ರಿಯೆ ಹಳೆಯ ಸ್ಪರ್ಧಿಗಳ ಮುಂದೆ ನಡೆದಿದೆ.
ಬಿಗ್ ಬಾಸ್ (BBK 11) ಮನೆಯಲ್ಲಿ ನಡೆದ ನಾಮಿನೇಷನ್ ಪ್ರಕ್ರಿಯೆ ವೇಳೆ ಹನುಮಂತ (Hanumantha) ವೈಲ್ಡ್ ಕಾರ್ಡ್ ಎಂಟ್ರಿ ರಜತ್ (Rajath) ಅವರನ್ನ ನಾಮಿನೇಟ್ ಮಾಡಿರೋದು ಕಂಡಿದೆ ಮತ್ತು ರಜತ್ ಹನುಮಂತನ ಮಾತಿನಿಂದ ಸಿಟ್ಟಾಗಿರೋದು ಸಹಾ ಕಂಡಿದೆ.
ಹನುಮಂತ ಮಾತನಾಡ್ತಾ ಬಿಗ್ ಬಾಸ್ ಮನೆಯಲ್ಲಿ ರಜತ್ ಅಣ್ಣ ನನ್ನ ಮಾತಾಡಲ್ಲ ಅಂದ್ರು ಇನ್ಮುಂದೆ ಮಾತಾಡಿ ತೋರಿಸ್ತೀನಿ ಅಂತ ರಜತ್ ನ ನಾಮಿನೇಟ್ ಮಾಡಿದ್ದಾರೆ. ಆದರೆ ಈ ಕಾರಣ ರಜತ್ ಗೆ ಇಷ್ಟವಾಗಿಲ್ಲ.
ರಜತ್ ಇದಕ್ಕಿಂತ ದೊಡ್ಡ ರೀಸನ್ ಕೊಡೋಕೆ ಬದನೆಕಾಯಿ ನಿನ್ನ ಹತ್ರ ಏನೂ ಇರ್ಲಿಲ್ಲ, ನನಗಿದು ಇಷ್ಟ ಆಗಿಲ್ಲ ಅಂತ ಹೇಳಿದ್ದಾರೆ. ಹನುಮಂತ ಕೂಡಾ ಅವನಿಗೆ ಇಷ್ಟ ಆಗಬೇಕಂತ ಬಂದಿಲ್ಲ, ಜನಕ್ಕೆ ಇಷ್ಟ. ಆಗಬೇಕು ಅಂತ ಬಂದಿದ್ದೀನಿ ಅನ್ನೋ ಮಾತನ್ನ ಹೇಳಿದ್ದಾರೆ.