BBK 11 : ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಹಳೇ ಹುಲಿಗಳು, ವಿಶೇಷ ಮನವಿ ಮಾಡಿದ ಬಿಗ್ ಬಾಸ್

Written by Soma Shekar

Published on:

---Join Our Channel---

Bigg Boss Kannada : ಬಿಗ್ ಬಾಸ್ ನ (Bigg Boss Kannada) ವೀಕೆಂಡ್ ಎಪಿಸೋಡ್ ಗಳಲ್ಲಿ ನಿನ್ನೆ ಚೈತ್ರಾ ಕುಂದಾಪುರ (Chaithra Kundapura) ಅಥವಾ ಐಶ್ವರ್ಯಾ (Aishwarya ) ಈ ಇಬ್ಬರಲ್ಲಿ ಒಬ್ಬರು ಬಿಗ್​ ಬಾಸ್​ ಎಲಿಮಿನೇಟ್ ಆಗ್ತಾರೆ ಅನ್ನೋ ಹಾಗೆ ತೋರಿಸಲಾಗಿತ್ತು. ಆದ್ರೆ ಈ ವಾರ ಓಟಿಂಗ್ ಲೈನ್ ಗಳೇ ತೆರೆಯದ ಕಾರಣ ನೋ ಎಲಿಮಿನೇಷನ್ ಅನ್ನೋದು ಬಹಳಷ್ಟು ಜನ ಪ್ರೇಕ್ಷಕರಿಗೆ ಮೊದಲೇ ಗೊತ್ತಿತ್ತು. ಐಶ್ವರ್ಯ ನೇರವಾಗಿ ಮನೆಯೊಳಗೆ ಬಂದರೆ ಚೈತ್ರ ಅವರಿಗೆ ಮನೆ ಮಂದಿಯ ಮಾತನ್ನ ಕೇಳಲು ಸೀಕ್ರೆಟ್ ಆಗಿ ಕನ್ಫೆಷನ್ ರೂಮ್ ನಲ್ಲಿ ಇರಿಸಿದ್ದರು ಬಿಗ್ ಬಾಸ್ (BBK 11).

ಈಗ ಇವೆಲ್ಲವುಗಳ ನಂತರ ಬಿಗ್ ಬಾಸ್ ಮನೆಗೆ ಸೀಸನ್ ಹತ್ತರ ಸ್ಪರ್ಧಿಗಳು ಎಂಟ್ರಿಯನ್ನು ನೀಡಿದ್ದಾರೆ.‌ ಮನೆ ಮಂದಿಗೆ ಬಿಗ್ ಬಾಸ್ ಸರ್ಪ್ರೈಸ್ ಕೊಟ್ಟಿದ್ದು ಸೀಸನ್ ಹತ್ತರ ಸ್ಪರ್ಧಿಗಳು ಮನೆಯೊಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಬೆಂಕಿ ತನೀಷಾ (Tanisha Kuppanda) ಮೊದಲು ಎಂಟ್ರಿ ನೀಡಿದ್ದು, ನಂತರ ಪ್ರತಾಪ್ ಎಂಟ್ರಿ ಕೊಟ್ಟಿದ್ದಾರೆ.

ಚೈತ್ರ ಕುಂದಾಪುರ ಪ್ರತಾಪ್ ನ (Drone Prathap) ಪ್ರತಾಪಣ್ಣ ಅಂತ ಕರೆದಿದ್ದು, ಪ್ರತಾಪ್ ಆಗ ನನ್ನನ್ನ ಅಣ್ಣ ಅಂತ ಕರೀಬೇಡಿ ಅಂತ ಟಾಂಗ್ ನೀಡಿದ್ದಾರೆ. ಇನ್ನು ತುಕಾಲಿ ಸಂತು ಬಂದಿದ್ದು, ಮಾವ ಮಾವ ಅನ್ಕೊಂಡು ಮಾನಸಾನ ಹೊರಗೆ ಕಳಿಸಿಬಿಟ್ಟಲ್ವೋ ಅಂತ ಹನುಮಂತಗೆ ಹೇಳಿದ್ದಾರೆ.‌ ತುಕಾಲಿ ಸಂತೋಷ ಫುಲ್ ಜಾಲಿಯಾಗಿ ಇರುವಾಗ ಬಿಗ್ ಬಾಸ್ ವಿಶೇಷ ಮನವಿ ಮಾಡಿದ್ದಾರೆ.

ಸಂತು-ಪಂತು ಜೋಡಿ ಎತ್ತುಗಳು. ಇಬ್ಬರು ಇರದೆ ಹೋದರೇ ಅಪೂರ್ಣತೆ ಭಾವ ಕಾಡುತ್ತದೆ ಎಂದು ಬಿಗ್​ ಬಾಸ್ ಹೇಳುತ್ತಿದ್ದಂತೆ ಮೇನ್ ಡೋರ್​ನಿಂದ ವರ್ತೂರು ಸಂತೋಷ ಎರಡು ಕೈಯಲ್ಲಿ ಬ್ಯಾಗ್​ ಹಿಡಿದು ಎಂಟ್ರಿಯನ್ನು ನೀಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಹಿಂದಿನ ಸೀಸನ್ ಸ್ಪರ್ಧಿಗಳು ಮತ್ತು ಈಗಿನ ಸ್ಪರ್ಧಿಗಳು ಏನೆಲ್ಲಾ ಮಾಡಿದ್ರು ಅನ್ನೋದನ್ನ ಇವತ್ತಿನ ಎಪಿಸೋಡ್ ನಲ್ಲಿ ನೋಡಬೇಕಾಗಿದೆ.

Leave a Comment