Bigg Boss Kannada : ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಈ ವಾರದ ಕ್ಯಾಪ್ಟನ್ಸಿ ಟಾಸ್ಕ್ ಶುರುವಾಗಿದೆ. ಇದ್ರಲ್ಲಿ ತಮ್ಮ ಸಹಾಯಕರ ಜೊತೆಗೆ ರೇಸ್ ನಲ್ಲಿರೋ ಸ್ಪರ್ಧಿಗಳು ಕಣಕ್ಕೆ ಇಳಿದಿದ್ದಾರೆ. ಹೆಚ್ಚು ಬಾಲುಗಳನ್ನು ಸಂಗ್ರಹಿಸೋ ಟಾಸ್ಕ್ ಅನ್ನ ಬಿಗ್ ಬಾಸ್ ನೀಡಿದ್ದು, ಇದರಲ್ಲಿ ಹೆಚ್ಚು ಬಾಲು ಸಂಗ್ರಹ ಮಾಡಿದ ಸ್ಪರ್ಧಿ ಕ್ಯಾಪ್ಟನ್ಸಿ ರೇಸ್ ನಿಂದ ತಮ್ಮಿಷ್ಟದ ಒಬ್ಬ ಸ್ಪರ್ಧಿಯನ್ನು ಹೊರಗೆ ಇಡುವ ಅವಕಾಶವನ್ನು ನೀಡಿದ್ದಾರೆ.
ಬಿಗ್ ಬಾಸ್ (BBK 11) ಕೊಟ್ಟ ಈ ಅವಕಾಶದಿಂದಲೇ ರಜತ್ (Rajath) ಮತ್ತು ಚೈತ್ರ (Chaithra Kundapura) ನಡುವೆ ಮಾತಿನ ಚಕಮಕಿ ನಡೆದಿದೆ. ಮೊದಲ ಸುತ್ತಿನಲ್ಲಿ ಹೆಚ್ಚು ಬಾಲುಗಳನ್ನು ಸಂಗ್ರಹಿಸಿದ ರಜತ್ ಗೆ ರೇಸ್ ನಿಂದ ಒಬ್ಬರನ್ನ ಹೊರಗಿರುವ ಅವಕಾಶ ಸಿಕ್ಕಿದ್ದು ಆಗ ರಜತ್ ಚೈತ್ರ ಅವರನ್ನು ಆಟದಿಂದ ಹೊರಗೆ ಇಟ್ಟಿದ್ದು ಇದರಿಂದ ಚೈತ್ರ ರೊಚ್ಚಿಗೆದ್ದಿದ್ದಾರೆ.
ಹೀಗೆ ಟಾಸ್ಕ್ ನಿಂದ ನನ್ನನ್ನ ಹೊರಗಿಟ್ಟಿದ್ದು ನಿಮ್ಮ ಆಲೋಚನೆ ಅಲ್ಲ ಬಿಡಿ ಅಂತ ಪರೋಕ್ಷವಾಗಿ ರಜತ್ ಗೆ ಸಹಾಯಕರಾಗಿದ್ದ ತ್ರಿವಿಕ್ರಮ್ ಬಗ್ಗೆ ಹೇಳಿದ್ದಾರೆ ಚೈತ್ರ. ರಜತ್ ಯಾವಾಗ ನೋಡಿದ್ರು ಗೋಳು ಈಯಮ್ಮಂದು. ಏನು ಈಯಮ್ಮನ ಆಚೇನೇ ಹಾಕಂಗಿಲ್ಲ ಅಂದಿದ್ದು, ಭುಜ ಭಲ ಮಾತ್ರ ಇರೋದು ಇಲ್ಲಿ ಇರಬೇಕಂತ ಇಲ್ಲ ಎಂದು ಚೈತ್ರ ಕೂಗಾಡಿದ್ದಾರೆ.
ನಂತರ ಚೈತ್ರ ಮತ್ತು ರಜತ್ ನಡುವೆ ಮಾತಿನ ಚಕಮಕಿ ಹೆಚ್ಚಾಗಿದ್ದು, ರಜತ್ ಚೈತ್ರ ಸೂಪರ್ ಅಂತೆಲ್ಲಾ ಹೇಳಿದ್ದು, ಕೊನೆಗೆ ಸಿಟ್ಟಾಗಿ ದಿನೇ ದಿನೇ ಚೈತ್ರಾಗೆ ಹುಚ್ಚು ಹೆಚ್ಚಾಗ್ತಿದೆ ಅನ್ನೋ ಮಾತನ್ನ ಹೇಳಿದ್ದು ಇದಕ್ಕೆ ತ್ರಿವಿಕ್ರಮ್ ಸಹಾ ಹೌದು ಅನ್ನೋ ಮಾತನ್ನ ಹೇಳಿದ್ದಾರೆ.
BBK 11 : ದೊಡ್ಡ ಬೆಲೆ ತೆರಬೇಕಾಗುತ್ತೆ, ಬಿಗ್ ಬಾಸ್ ಖಡಕ್ ಎಚ್ಚರಿಕೆ; ಈ ನಿರ್ಧಾರ ಸರಿ/ತಪ್ಪು ಶುರುವಾಯ್ತು ಚರ್ಚೆ