Bigg Boss Kannada : ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಈ ವಾರದ ಟಾಸ್ಕ್ ಗಳಿಗಾಗಿ ಮನೆ ಮಂದಿಯನ್ನು ಎರಡು ಗ್ರೂಪ್ ಗಳಾಗಿ ವಿಭಜಿಸಲಾಗಿದೆ. ಅದರಲ್ಲಿ ಟಾಸ್ಕ್ ನಲ್ಲಿ ಗೆದ್ದ ತಂಡದವರು ಕ್ಯಾಪ್ಟನ್ಸಿ ರೇಸ್ ಗೆ ಅರ್ಹತೆ ಪಡೀತಾರೆ ಅಂತ ಬಿಗ್ ಬಾಸ್ ಹೇಳಿದ್ರು. ಈಗ ಅದರಲ್ಲೂ ಬಿಗ್ ಬಾಸ್ (BBK 11) ಒಂದು ಹೊಸ ಟ್ವಿಸ್ಟನ್ನು ನೀಡಿದ್ದಾರೆ. ಈ ಟ್ವಿಸ್ಟ್ ನಿಂದಾಗಿ ಕೆಲವರಿಗೆ ಬೇಸರವಾಗಿದೆ.
ಬಿಗ್ ಬಾಸ್ ಕ್ಯಾಪ್ಟನ್ಸಿ ರೇಸ್ ನಲ್ಲಿ ಭಾಗವಹಿಸುವವರು ಎದುರಾಳಿ ತಂಡದಿಂದ ಒಬ್ಬರನ್ನು ತಮ್ಮ ಸಹಾಯಕರಾಗಿ ಆಡುವಂತೆ ಮನವೊಲಿಸಬೇಕೆಂದು ಸೂಚಿಸಿ ಯಾರು ಯಾರ ಮನವೊಲಿಸಬೇಕೆಂದು ತಿಳಿಸಿದ್ದು. ಇದರಲ್ಲಿ ಮೋಕ್ಷಿತಾ (Mokshitha) ಗೌತಮಿ ಅವರ ಮನವೊಲಿಸಬೇಕೆಂದು ಸೂಚಿಸಿದ್ದಾರೆ.
ಆದರೆ ಮೋಕ್ಷಿತಾ ಅವರಿಗೆ ಇದು ಒಪ್ಪಿಗೆಯಾಗಿಲ್ಲ. ಅವರು ನಾನಂತೂ ಗೌತಮಿ (Gouthami) ಅವರ ಹತ್ರ ಹೋಗಿ ಕೇಳಲ್ಲ. ಇವ್ರಿಂದ ನಾನು ಕ್ಯಾಪ್ಟನ್ ಆಗಬೇಕು ಅನ್ನೋದಾದ್ರೆ ನಾನು ಆಡೋದೇ ಇಲ್ಲ ಎಂದಿದ್ದಾರೆ ಮೋಕ್ಷಿತಾ. ನನ್ನ ಸೆಲ್ಫ್ ರೆಸ್ಪೆಕ್ಟ್ ಗಿಂತ ಯಾವುದೂ ಮುಖ್ಯವಲ್ಲ.
ಬೇಕಾದ್ರೆ ನಾಳೆನೇ ನನ್ನ ಕಳಿಸಿದ್ರೂ ಹೋಗ್ತೀನಿ ಎಂದಿದ್ದಾರೆ. ಇದಾದ ನಂತರ ಬಿಗ್ ಬಾಸ್ ಮೋಕ್ಷಿತಾಗೆ ಎಚ್ಚರಿಕೆಯನ್ನು ನೀಡಿದ್ದಾರೆ. ದೊಡ್ಡ ದೊಡ್ಡ ನಿರ್ಧಾರಗಳ ಜೊತೆ ದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ನೀಡಿದ್ದು, ಮುಂದೇನಾಯ್ತು ಅನ್ನೋದನ್ನ ಇವತ್ತಿನ ಎಪಿಸೋಡ್ ನಲ್ಲಿ ನೋಡಬೇಕಾಗಿದೆ.