BBK 11 : ನನ್ನನ್ನ ಹೊರಗೆ ಕಳಿಸಿ ಬಿಡಿ; ಹುಲಿಯಂತೆ ಬಂದ ಶೋಭಾ ಕಿಚ್ಚ ಸುದೀಪ್ ಮುಂದೆ ಕಣ್ಣೀರು; ಅರ್ಧಕ್ಕೆ ಶೋ ಬಿಟ್ರಾ ನಟಿ

Written by Soma Shekar

Published on:

---Join Our Channel---

Bigg Boss Kannada : ಬಿಗ್ ಬಾಸ್ ಕನ್ನಡ (Bigg Boss Kannada) ಸೀಸನ್ 11 ಕ್ಕೆ ಸಿಂಹಿಣಿಯ ಹಾಗೆ ಎಂಟ್ರಿ ಕೊಟ್ಟವರು ಶೋಭಾ ಶೆಟ್ಟಿ (Shobha Shetty). ಅಲ್ಲದೇ ಕೆಲವರ ಮುಖವಾಡ ಕಳಚುತ್ತೇನೆ ಎಂದಿದ್ದರು ಶೋಭಾ. ಅದು ಮಾತ್ರವೇ ಅಲ್ಲದೇ ಮನೆಯಲ್ಲಿ ಮೊದಲ ದಿನವೇ ತಮ್ಮ ಮಾತಿನ ಧಾಟಿಯಿಂದ ಮನೆ ಮಂದಿಗೆ ಶಾಕ್ ಕೊಟ್ಟಿದ್ದರು. ಇದನ್ನೆಲ್ಲಾ ನೋಡಿದ ವೀಕ್ಷಕರು ಸಹಾ ಶೋಭಾ ಬಿಗ್ ಬಾಸ್ (BBK 11) ಮನೆ ಮಂದಿಗೆ ಪ್ರಬಲ ಸ್ಪರ್ಧಿಯಾಗುತ್ತಾರೆ ಎನ್ನುವ ನಿರೀಕ್ಷೆಯಲ್ಲಿ ಇದ್ದರು. ಆದರೆ ಈಗ ಎಲ್ಲವೂ ಬದಲಾಗಿದೆ ಮತ್ತು ಇದು ಎಲ್ಲರಿಗೂ ಅಚ್ಚರಿಯನ್ನು ಸಹಾ ಮೂಡಿಸಿದೆ.

ಹೌದು, ಶೋಭಾ ಅವರು ಭಾನುವಾರದ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರ ಮುಂದೆ ಭಾವುಕರಾದ ಪ್ರೊಮೊವನ್ನು ವಾಹಿನಿ ಶೇರ್ ಮಾಡಿಕೊಂಡಿದ್ದು,ಇದನ್ನ ನೋಡಿದ ವೀಕ್ಷಕರು ಸಹಾ ಶಾಕ್ ಆಗಿದ್ದಾರೆ. ಶೋಭಾ ಅವರು ತಾನು ಬಿಗ್ ಬಾಸ್ ಮನೆಯ ಆಟವನ್ನು ಅರ್ಧಕ್ಕೇ ಬಿಟ್ಟು ಹೋಗುವ ತೀರ್ಮಾನವನ್ನು ಮಾಡಿರುವುದು ಕಂಡಿದೆ. ಅವರು ಮನೆಯಲ್ಲಿ ಉಳಿಯಲು ಇಷ್ಟ ಪಟ್ಟಿಲ್ಲ.

ಈ ವಾರ ಶೋಭಾ ನಾಮಿನೇಷನ್ ನಿಂದ ಸೇವ್ ಆಗಿದ್ದಾರೆ. ಆದರೂ ಅವರು ಸುದೀಪ್ ಅವರ ಮುಂದೆ ಕಣ್ಣೀರು ಹಾಕ್ತಾ ಇಲ್ಲಿ ಇರೋಕೆ ಆಗ್ತಿಲ್ಲ, ಜನರ ನಿರೀಕ್ಷೆಗಳನ್ನ ಪೂರ್ತಿ ಮಾಡೋಕೆ ಆಗ್ತಿಲ್ಲ ಎಂದು ಕಣ್ದೀರನ್ನ ಹಾಕಿದ್ದಾರೆ. ಸುದೀಪ್ ಅವರು ಸಹಾ ಶೋಭಾ ಅವರಿಗೆ ಕೆಲವೊಂದು ವಿಚಾರಗಳನ್ನ ಹೇಳು, ಅರ್ಥ ಮಾಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಕೊನೆಗೆ ಬಿಗ್ ಬಾಸ್ ಮನೆ ಮುಖ್ಯ ದ್ವಾರವನ್ನು ತೆರೆಯಲಾಗಿದೆ.

ಶೋಭಾ ಮಾತಿಗೆ ಮನೆ ಮಂದಿ ಸಹಾ ಶಾಕ್ ಆಗಿದ್ದಾರೆ. ಶಿಶಿರ್ ಮತ್ತು ಚೈತ್ರ ಶೋಭಾ ಅವರಿಗೆ ಸಮಾಧಾನ ಮಾಡುವ ಕೆಲಸವನ್ನು ಮಾಡಿದ್ದಾರೆ. ಶೋಭಾ ಮನೆಯಲ್ಲಿ ಇರ್ತಾರಾ? ಅಥವಾ ತಮ್ಮ ಜರ್ನಿಯನ್ನು ಇಷ್ಟಕ್ಕೇ ಬಿಟ್ಟು ಹೊರಗೆ ಬರ್ತಾರಾ ಅನ್ನೋದನ್ನ ಇಂದಿನ ಎಪಿಸೋಡ್ ನಲ್ಲಿ ನೋಡಬೇಕಾಗಿದೆ. ಏನೇ ಆದರೂ ಶೋಭಾ ಅವರ ಇಂತಹ ರೂಪವನ್ನು ಯಾರೂ ಸಹಾ ನಿರೀಕ್ಷೆ ಮಾಡಿರಲಿಲ್ಲ ಎನ್ನುವುದು ಮಾತ್ರ ಸತ್ಯ.

Leave a Comment