Bigg Boss Kannada : ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಈ ವಾರ ನಡೆದ ಮಹಾರಾಜ ಮತ್ತು ಯುವರಾಣಿ (BBK 11) ನಡುವಿನ ಟಾಸ್ಕ್ ನಲ್ಲಿ ಸಾಕಷ್ಟು ವಿಚಾರಗಳು ನಡೆದಿದೆ. ಒಂದಷ್ಟು ಭಾವನೆಗಳ ಜೊತೆಗೂ ಆಟ ನಡೆದರೆ, ಸಂಬಂಧಗಳ ನಡುವಿನ ಲೆಕ್ಕಾಚಾರ ಏರುಪೇರಾಗಿದೆ. ಕೆಲವರು ಮನಸ್ಸಿಗೆ ಬಂದ ಹಾಗೆ ಆಟ ಆಡಿದ್ದಾರೆ. ಆದ್ದರಿಂದಲೇ ವೀಕ್ಷಕರು ವೀಕೆಂಡ್ ಎಪಿಸೋಡ್ ಗಳಿಗಾಗಿ ಕಾಯುತ್ತಿದ್ದರು. ಕಿಚ್ಚ ಸುದೀಪ್ ಯಾರಿಗೆ ಬುದ್ಧಿ ಹೇಳ್ತಾರೆ ಅನ್ನೋದನ್ನ ನೋಡುವ ಕಾತುರದಲ್ಲಿ ಇದ್ದರು.
ಈಗ ವಾಹಿನಿ ಶೇರ್ ಮಾಡಿರುವ ಹೊಸ ಪ್ರೊಮೋದಲ್ಲಿ ಕಿಚ್ಚ ಸುದೀಪ್ ಈ ವಿಚಾರವನ್ನು ಮಾತನಾಡಿರುವುದು ಕಂಡಿದೆ. ಸುದೀಪ್ (Kichcha Sudeep) ಅವರು ಮಂಜು ಮತ್ತು ಮೋಕ್ಷಿತಾ ಪರ್ಸನಲ್, ಪರ್ಸನಲ್ ಆಗಿತ್ತು ನಿಮ್ಮದು ಎಂದಿದ್ದಾರೆ. ಮೋಕ್ಷಿತಾ ಅವರ ಕೆಲವೊಂದು ಮಾತುಗಳು ನನಗೆ ಹರ್ಟ್ ಆಗಿದೆ. ಹರ್ಟ್ ಆದ್ಮೇಲೇನೆ ನಾನು ಆ ರೀತಿ ರಿಯಾಕ್ಟ್ ಮಾಡಿದ್ದು ಎಂದಿದ್ದಾರೆ.
ಪ್ರೊಮೊದಲ್ಲಿ ಕಿಚ್ಚ ಗೌತಮಿಯವರನ್ನ (Gouthami) ಸಹಾ ಪ್ರಶ್ನೆ ಮಾಡಿದ್ದಾರೆ. ಯುವರಾಣಿ ಅವ್ರ ಕಣ್ಣಲ್ಲಿ ಕಣ್ಣಿಟ್ಟು ನೋಡಬಾರದು ಅಂದಾಗ ನೀವು ನಿರಾಕರಿಸ್ತೀರಾ ಅಂದಾಗ ಗೌತಮಿ ಅದಕ್ಕೆ ತಮ್ಮ ಸಮರ್ಥನೆ ನೀಡೋದಕ್ಕೆ ಮುಂದಾಗಿದ್ದಾರೆ. ನಂತರ ಕಿಚ್ಚ ಮಹಾರಾಜ ಆಗಿ ಬೇರೆ ಅವ್ರಿಗೆ ಆದೇಶ ಕೊಟ್ಟ ಹಾಗೆ ಗೌತಮಿಗೂ ಕೊಡಬೇಕಿತ್ತು ಎಂದು ಮಂಜು (Ugram Manju) ಅವರನ್ನ ಪ್ರಶ್ನೆ ಮಾಡಿದ್ದಾರೆ.
ಪ್ರಜೆ ಮಾತಾಡ್ತಾ ಇದ್ರೆ ಗೌತಮಿ ಮಾತಾಡ್ತಾ ಇದ್ರು ಎಂದು ಗರಂ ಆಗಿದ್ದಾರೆ ಕಿಚ್ಚ. ಸಂಬಂಧ, ಸಂಬಂದ , ಸಂಬಂಧ ಅಂತೀರಾ ಆಮೇಲೆ ನನಗೆ ಮೋಸ ಆಯ್ತು, ನಂಬಿಕೆ ದ್ರೋಹ ಆಯ್ತು ಅಂತೀರಾ? ಯಾರು ಹೇಳಿದ್ರು ನಂಬಿ ಅಂತ ಎನ್ನೋ ಮಾತುಗಳನ್ನ ಕಿಚ್ಚ ಹೇಳಿದ್ದು ಮುಂದೆ ಏನೆಲ್ಲಾ ನಡೀತು ಅನ್ನೋದನ್ನ ಇವತ್ತಿನ ಎಪಿಸೋಡ್ ನಲ್ಲಿ ನೋಡಬೇಕಾಗಿದೆ.
BBK 11 : ಬಿಗ್ ಬಾಸ್ ಮನೆಯಿಂದ ಶಾಕಿಂಗ್ ಎಲಿಮಿನೇಷನ್ ; ಈ ವಾರ ಹೊರ ಬಂದ ಸ್ಪರ್ಧಿ ಇವರೇ