Bigg Boss Kannada : ಬಿಗ್ ಬಾಸ್ ಕನ್ನಡ (Bigg Boss Kannada) ಸೀಸನ್ 11 ರ ಮತ್ತೊಂದು ವೀಕೆಂಡ್ ಬಂದಿದೆ. ಈ ವಾರ ಬಿಗ್ ಬಾಸ್ (BBK 11) ಮನೆಯಿಂದ ಹೊರಗೆ ಹೋಗಲು ಒಟ್ಟು ಏಳು ಜನರು ನಾಮಿನೇಟ್ ಆಗಿದ್ದಾರೆ. ಶೋಭಾ ಶೆಟ್ಟಿ, ಶಿಶಿರ್, ಗೋಲ್ಡ್ ಸುರೇಶ್, ತ್ರಿವಿಕ್ರಮ್, ಭವ್ಯ, ಚೈತ್ರ ಮತ್ತು ಐಶ್ವರ್ಯ ನಾಮಿನೇಟ್ ಆಗಿರುವ ಸ್ಪರ್ಧಿಗಳಾಗಿದ್ದಾರೆ. ಇವರಲ್ಲಿ ಯಾರು ಮನೆಗೆ ಹೋಗ್ತಾರೆ? ಯಾರ ಜರ್ನಿ ಈ ವೀಕೆಂಡ್ ನಲ್ಲಿ ಮುಗಿಯುತ್ತೆ ಅನ್ನೋ ಚರ್ಚೆಗಳು ಸೋಶಿಯಲ್ ಮೀಡಿಯಾಗಳಲ್ಲಿ ನಡೀತಿದೆ.
ಬಿಗ್ ಬಾಸ್ ಮನೆಯಿಂದ ಯಾರು ಹೊರಗೆ ಹೋಗ್ತಾರೆ ಅನ್ನೋ ಚರ್ಚೆಗಳು ನಡೆಯುವಾಗಲೇ ಈಗ ಹೊಸದೊಂದು ಸುದ್ದಿ ಹರಿದಾಡಿದೆ. ಅದೇನೆಂದ್ರೆ ಈ ವಾರ ಬಿಗ್ ಬಾಸ್ ಜರ್ನಿ ಮುಗಿಸಿ ಹೊರಗೆ ಬಂದಿರೋ ಸ್ಪರ್ಧಿ ಗೋಲ್ಡ್ ಸುರೇಶ್ ಅಂತ. ಹೌದು ಸಾಮಾಜಿಕ ಜಾಲತಾಣಗಳಲ್ಲಿ ಗೋಲ್ಡ್ ಸುರೇಶ್ ಎಲಿಮಿನೇಟ್ ಆಗಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ.
ಗೋಲ್ಡ್ ಸುರೇಶ್ (Gold Suresh) ಈಗಾಗಲೇ ಒಮ್ಮೆ ಕಿಚ್ಚನ ಚಪ್ಪಾಳೆಯನ್ನು ಪಡೆದಿದ್ದಾರೆ. ಕಳೆದ ವಾರ ಅವರ ಆಟದ ಬಗ್ಗೆ ಅವರ ತಂಡದಲ್ಲಿ ಸ್ವಲ್ಪ ಅಸಮಾಧಾನ ಕಂಡಿತ್ತು. ಈ ವಾರ ಕ್ಯಾಪ್ಟನ್ಸಿ ರೇಸ್ ನಲ್ಲೂ ಇದ್ದ ಗೋಲ್ಡ್ ಸುರೇಶ್ ಅವರ ಬದಲಾಗಿ ಮನೆ ಮಂದಿ ಧನರಾಜ್ ಅವರನ್ನು ಟಾಸ್ಕ್ ನಲ್ಲಿ ಗೆಲ್ಲಿಸಿ ಮನೆಯ ಕ್ಯಾಪ್ಟನ್ ಮಾಡಿದ್ದಾರೆ.
ಎಂಟು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದ ಸುರೇಶ್ ಅವರ ಬಿಗ್ ಬಾಸ್ ಜರ್ನಿ ಈ ವಾರಕ್ಕೆ ಮುಗಿದಿದೆ ಎನ್ನುವುದು ಸುದ್ದಿಗಳಾಗಿದೆಯಾದರೂ, ಇದರ ಬಗೆಗಿನ ಸ್ಪಷ್ಟವಾದ ಮಾಹಿತಿ ನಾಳಿನ ಎಪಿಸೋಡ್ ನಲ್ಲಿ ತಿಳಿಯಲಿದೆ. ಆದರೆ ಪ್ರತಿ ವಾರವೂ ವೀಕೆಂಡ್ ಎಪಿಸೋಡ್ ಗೆ ಮೊದಲೇ ಎಲಿಮಿನೇಟ್ ಯಾರಾಗಿದ್ದಾರೆಂದು ಹರಿದಾಡುವ ಸುದ್ದಿಗಳೂ ನಿಜವಾಗುತ್ತದೆ ಎನ್ನುವುದು ಸಹಾ ವಾಸ್ತವ.