Pushpa 2 : ಐಕಾನ್ ಸ್ಟಾರ್ ಖ್ಯಾತಿಯ ನಟ ಅಲ್ಲು ಅರ್ಜುನ್ (Allu Arjun) ಅಭಿನಯದ ಪುಷ್ಪ 2 (Pushpa 2)ಸಿನಿಮಾ ಬಿಡುಗಡೆಯ ದಿನಗಣನೆ ಆರಂಭವಾಗಿದೆ. ವಿಶ್ವದಾದ್ಯಂತ ಈ ಸಿನಿಮಾ ಡಿಸೆಂಬರ್ 5 ರಂದು ತೆರೆ ಕಾಣುತ್ತಿದ್ದು, ಅಭಿಮಾನಿಗಳು ಸಿನಿಮಾ ಬಿಡುಗಡೆಯ ದಿನಕ್ಕಾಗಿ ಕಾಯುತ್ತಿದ್ದಾರೆ. ಇವೆಲ್ಲವಗಳ ನಡುವೆ ಗುರುವಾರ ಸಿನಿಮಾ ಸೆನ್ಸಾರ್ ಆಗಿದೆ. ಸಿನಿಮಾದ ರನ್ ಟೈಮ್ ಎಷ್ಟು ಎನ್ನುವ ಮಾಹಿತಿ ಹೊರಬಂದಿದೆ.
ಪುಷ್ಪ 2 ಸಿನಿಮಾದ ತೆಲುಗು ವರ್ಷನ್ ಗುರುವಾರ ಸೆನ್ಸಾರ್ ಆಗಿದ್ದು, ಚಿತ್ರದ ರನ್ ಟೈಮ್ ಬರೋಬ್ಬರಿ 3 ಗಂಟೆ 20 ನಿಮಿಷ ಮತ್ತು 38 ಸೆಕೆಂಡುಗಳ ಕಾಲಾವಧಿಯನ್ನು ಹೊಂದಿದೆ. ಈ ಹಿಂದೆ ಚಿತ್ರದ ಅವಧಿಯು 3 ಗಂಟೆಗಳಿಗಿಂತ ಹೆಚ್ಚೆನ್ನುವ ಮಾತು ಕೇಳಿ ಬಂದಿತ್ತು. ಈಗ ಸಿನಿಮಾ ಸೆನ್ಸಾರತ ನಂತರ ಅದು ನಿಟವಾಗಿದೆ. ಸಿನಿಮಾ ರನ್ ಟೈಮ್ ಮೂರು ಗಂಟೆಗಳನ್ನು ಮೀರಿದೆ.
ಪುಷ್ಪ ಸಿನಿಮಾ 2021 ರಲ್ಲಿ ಬಿಡುಗಡೆಯಾಗಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿದ್ದ ಸಿನಿಮಾ ದೊಡ್ಡ ಜನಪ್ರಿಯತೆಯನ್ನು ಪಡೆದುಕೊಂಡು ನಟ ಅಲ್ಲು ಅರ್ಜುನ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆದರು. ಆಗ ಪುಷ್ಪ 2 ಸಿನಿಮಾದ ರನ್ ಟೈಮ್ 178 ಸೆಕೆಂಡ್ ಗಳಷ್ಟು ಇತ್ತು. ಆದರೆ ಈಗ ಎರಡನೇ ಭಾಗ ಅದಕ್ಕಿಂತ 21 ನಿಮಿಷ ಹೆಚ್ಚಾಗಿದೆ ಎನ್ನುವ ಮಾಹಿತಿ ಹೊರ ಬಂದಿದೆ.
ಸೆನ್ಸಾರ್ ಮಂಡಳಿಯಿಂದ ಸಿನಿಮಾಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಅಲ್ಲದೆ ಕೆಲವೊಂದು ಪದಗಳನ್ನು ಮ್ಯೂಟ್ ಮಾಡುವಂತೆ ಹಾಗೂ ದೃಶ್ಯ ಒಂದಕ್ಕೆ ಕತ್ತರಿ ಹಾಕುವುದಕ್ಕೆ ಸೆನ್ಸಾರ್ ಮಂಡಳಿ ಸೂಚನೆ ನೀಡಿತ್ತೆನ್ನಲಾಗಿದ್ದು, ಆ ಎಂದು ತ ಬದಲಾವಣೆಗಳ ನಂತರ ಚಿತ್ರಕ್ಕೆ ಪ್ರಮಾಣ ಪತ್ರವನ್ನು ನೀಡಲಾಗಿದೆ. ಈಗ ಎಲ್ಲರ ಗಮನ ಸಿನಿಮಾ ಬಿಡುಗಡೆಯ ನಂತರ ಯಾವ ರೀತಿ ಸದ್ದು ಮಾಡಲಿದೆ ಎನ್ನುವುದಷ್ಟೇ ಆಗಿದೆ.
Bigg Boss Kannada : ಚೈತ್ರ ಕೂಗಾಟ, ತ್ರಿವಿಕ್ರಮ್ ಆಕ್ರೋಶ, ಭವ್ಯ ಕ್ರೋಧಾಗ್ನಿ; ಬಿಗ್ ಬಾಸ್ ಮನೆ ಕದನ ರಂಗ