Bigg Boss Kannada : ಈ ಇಡೀ ವಾರ ಬಿಗ್ ಬಾಸ್ ಮನೆ (Bigg Boss Kannada) ಬಿಗ್ ಬಾಸ್ ಸಾಮ್ರಾಜ್ಯವಾಗಿ ಬದಲಾಗಿದೆ. ಮನೆಗೆ ಉಗ್ರಂ ಮಂಜು ರಾಜನಾದರೆ, ಮೋಕ್ಷಿತಾ ಯುವರಾಣಿ ಆಗಿದ್ದಾರೆ. ಮನೆಯಲ್ಲಿ ರಾಜ ಮತ್ತು ಯುವರಾಣಿಯ ನಡುವಿನ ವೈಮನಸ್ಸಿನಿಂದಾಗಿ ಮನೆ ಮಂದಿ ಪರದಾಡುವಂತೆ ಆಗಿದೆ. ಮನೆ ಮಂದಿಯ ಶ್ರಮಕ್ಕೆ ಬೆಲೆ ಇಲ್ಲದಂತೆ ಆಗಿದೆ. ಇವೆಲ್ಲವುಗಳ ನಂತರ ಬಿಗ್ ಬಾಸ್ (BBK 11) ಈ ಆಟದಲ್ಲಿ ಮತ್ತೆ ಹೊಸ ತಿರುವನ್ನು ನೀಡಿದ್ದಾರೆ. ಎಲ್ಲರ ಮೇಲೆ ಅಧಿಕಾರ ಚಲಾಯಿಸುತ್ತಿದ್ದ ರಾಜ ಮತ್ತು ಯುವರಾಣಿಯನ್ನು ಈಗ ಬಂಧನದಲ್ಲಿ ಇರಿಸಲಾಗಿದೆ.
ಬಿಗ್ ಬಾಸ್ ರಾಜ ಮತ್ತು ಯುವರಾಣಿಯನ್ನ ಬಂಧನ ಮಾಡಿ ಆದೇಶವನ್ನು ನೀಡಿದ್ದಾರೆ. ಅಲ್ಲದೇ ಮಹಾರಾಜ ಮತ್ತು ಯುವರಾಣಿಯನ್ನು ಬಂಧನದಿಂದ ಬಿಡುಗಡೆ ಮಾಡಲು ಎರಡೂ ತಂಡದವರಿಗೆ ಒಂದು ಟಾಸ್ಕ್ ಅನ್ನ ಸಹಾ ನೀಡಲಾಗಿದೆ. ಬಿಗ್ ಬಾಸ್ ನಕ್ಷೆಯ ತುಂಡುಗಳನ್ನ ಜೋಡಿಸುವ, ಸರಿಯಾಗಿ ಜೋಡಿಸಿದ ನಂತರ ಕೀಲಿಕೈ ತಂದು ಬಂಧನದಲ್ಲಿ ಇರುವವರನ್ನು ಬಿಡಿಸಲು ಸೂಚನೆ ನೀಡಿದ್ದಾರೆ.
ಅದಕ್ಕಾಗಿ ನಕ್ಷೆ ಜೋಡಿಸುವ ಸ್ಪರ್ಧಿಯ ಕಣ್ಣಿಗೆ ಬಟ್ಟೆ ಕಟ್ಟಲಾಗಿದೆ. ಅವರ ಸಹಾಯಕ ಹೇಳುವ ಹಾಗೆ ನಕ್ಷೆ ಜೋಡಿಸಬೇಕು. ಸಹಾಯಕ ನಕ್ಷೆಯ ತುಂಡುಗಳನ್ನು ಟಚ್ ಮಾಡಿದ್ರೆ ಐದು ಸೆಕೆಂಡ್ ಗಳ ಪಾಸ್ ಅನ್ನು ಮಾಡಬೇಕು. ಟಾಸ್ಕ್ ಶುರುವಾದ ಮೇಲೆ ಭವ್ಯ (Bhavya), ತ್ರಿವಿಕ್ರಮ್ (Trivikram) ಮೇಲೆ ಚೈತ್ರ ಕುಂದಾಪುರ (Chaithra Kundapura) ಕೂಗಾಡಿದ್ದು, ತ್ರಿವಿಕ್ರಮ್ ಮತ್ತು ಭವ್ಯ ಆಕ್ರೋಶವನ್ನು ಹೊರ ಹಾಕಿದ್ದಾರೆ. ಮಾತಿಗೆ ಮಾತು ಬೆಳೆಸಿದ್ದಾರೆ.
ಟಾಸ್ಕ್ ನಲ್ಲಿ ಕಾರ್ಡ್ ಗಳಿಗೆ ತ್ರಿವಿಕ್ರಮ್ ಕೈ ಟಚ್ ಆಯ್ತು ಎಂದು ಚೈತ್ರ ಪದೇ ಪದೇ ಫೌಲ್ ಕೊಟ್ಟು, ಅರಚಿದ್ದಾರೆ. ಇದರಿಂದ ಭವ್ಯ ಆಕ್ರೋಶಗೊಂಡು ತಾನು ಅರಚಿದ್ದಾರೆ. ಅಸಮಾಧಾನದಿಂದ ಟೇಬಲ್ ಅನ್ನು ಕುಟ್ಟಿದ್ದಾರೆ. ನಿನ್ನೆ ಆದ ಹಾಗೆ ಇವತ್ತೂ ಕೂಡಾ ಏನಾದ್ರು ಈ ಟಾಸ್ಕ್ ರದ್ದಾಗುತ್ತಾ ಅನ್ನೋದನ್ನ ಕಾದು ನೋಡಬೇಕಾಗಿದೆ.