Chandana Ananthakrishna: ದಾಂಪತ್ಯ ಜೀವನಕ್ಕೆ ಅಡಿಯಿಟ್ಟ ಚಿನ್ನು ಮರಿ; ಶುಭ ಹಾರೈಸಿದ್ದಾರೆ ಫ್ಯಾನ್ಸ್

Written by Soma Shekar

Published on:

---Join Our Channel---

Chandana Anantakrishna : ರಾಜಾ ರಾಣಿ, ಹೂಮಳೆ ಹಾಗೂ ಪ್ರಸ್ತುತ ಲಕ್ಷ್ಮೀ ನಿವಾಸ ಸೀರಿಯಲ್ ನ ಚಿನ್ನುಮರಿ ಖ್ಯಾತಿಯ ನಟಿ, ಬಿಗ್ ಬಾಸ್ ನ ಮಾಜಿ ಸ್ಪರ್ಧಿ ಚಂದನ ಅನಂತ ಕೃಷ್ಣ (Chandana Ananthakrishna) ಮೂರ್ತಿ ಅವರ ವಿವಾಹವು ಬಹಳ ಸಂಭ್ರಮದಿಂದ ನೆರವೇರಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ನಟಿಯ ಮದುವೆಯ ಫೋಟೋ ಗಳು ವೈರಲ್ ಆಗಿದ್ದು ಅಭಿಮಾನಿಗಳು ಮೆಚ್ಚುಗೆಗಳನ್ನು ನೀಡಿದ್ದಾರೆ.

ಚಂದನ ಅವರು ಪ್ರತ್ಯಕ್ಷ್ ಅವರ ಜೊತೆಗೆ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದು, ಇವರು ಕೆಲವು ವರ್ಷಗಳಿಂದ ಪ್ರೀತಿಯಲ್ಲಿದ್ದರು ಎನ್ನಲಾಗಿದೆ. ಮದುವೆ ದಿನಾಂಕ ಘೋಷಣೆ ಆಗುವವರೆಗೂ ಅವರು ತಮ್ಮ ಪ್ರೀತಿಯ ವಿಚಾರವನ್ನು ಹೊರಗೆ ಎಲ್ಲೂ ರಿವೀಲ್ ಮಾಡಿರಲಿಲ್ಲ.

ಚಂದನ ಮತ್ತು ಪ್ರತ್ಯಕ್ಷ್ ಅವರ ಮದುವೆ ಸಮಾರಂಭವು ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ ಇರುವ ಗುರು ನರಸಿಂಹ ಕಲ್ಯಾಣ ಮಂದಿರಲ್ಲಿ ಅದ್ಧೂರಿಯಾಗಿ ನಡೆದಿದೆ. ಮದುವೆಯಲ್ಲಿ ಸಿನಿಮಾ ಮತ್ತು ಕಿರುತೆರೆ ಸ್ನೇಹಿತರು ಭಾಗಿಯಾಗಿದ್ದರು.

ಮದುವೆಗೆಂದು ಸೊಗಸಾಗಿ ಸಿಂಗರಿಸಿಕೊಂಡಿದ್ದ ಚಂದನಾ ಅವರು ಮೊದಲು ಹಳದಿ ಬಣ್ಣದ ರೇಷ್ಮೆ ಸೀರೆಯಲ್ಲಿ ಕಾಣಿಸಿಕೊಂಡಿದ್ದು, ಅನಂತರ ಅವರು ನೀಲಿ ಮತ್ತು ಕೆಂಪು ಮಿಶ್ರಿತ ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ.

ಮದುವೆಯ ಮೆಹಂದಿ ಕಾರ್ಯಕ್ರಮವು ಚಂದನಾ ಅವರ ಮನೆಯಲ್ಲಿ ಸಂತೋಷದಿಂದ ನಡೆದಿತ್ತು. ಸಂಗೀತ್ ಕಾರ್ಯಕ್ರಮವನ್ನು ಮನೆಯಲ್ಲಿ ಅಲ್ಲದೇ ಬೇರೆಡೆ ಹಮ್ಮಿಕೊಂಡಿದ್ದು, ಚಂದನಾ ಅವರ ಫ್ರೆಂಡ್ಸ್ ಭಾಗಿಯಾಗಿದ್ದರು.

ಮದುವೆ ದಿನವೇ ಚಂದನ ಅವರು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಪ್ರೀ ವೆಡ್ಡಿಂಗ್ ಶೂಟ್ ನ ವೀಡಿಯೋವನ್ನು ಸಹಾ ಶೇರ್ ಮಾಡಿಕೊಂಡಿದ್ದರು. ಅದಕ್ಕೆ ಅಭಿಮಾನಿಗಳಿಂದ ಮೆಚ್ಚುಗೆಯ ಜೊತೆಗೆ ಮದುವೆಯ ಶುಭಾಶಯಗಳನ್ನು ತಿಳಿಸಿದ್ದಾರೆ.

BBK 10 : ಮೋಕ್ಷಿತ ದೂರ, ಗೌತಮಿ ಇನ್ನಷ್ಟು ಆತ್ಮೀಯ, ನಾಟಕೀಯ ನಗು; ಇದೇನಾ ಪಾಸಿಟಿವಿಟಿ ಎಂದ ಜನ

Leave a Comment