BBK 10 : ಮೋಕ್ಷಿತ ದೂರ, ಗೌತಮಿ ಇನ್ನಷ್ಟು ಆತ್ಮೀಯ, ನಾಟಕೀಯ ನಗು; ಇದೇನಾ ಪಾಸಿಟಿವಿಟಿ ಎಂದ ಜನ

Written by Soma Shekar

Published on:

---Join Our Channel---

Bigg Boss Kannada : ಬಿಗ್ ಬಾಸ್ ಮನೆಯಲ್ಲಿ (Bigg Boss Kannada) ಉಗ್ರಂ ಮಂಜು (Ugram Manju) ರಾಜನಾಗಿ ಭರ್ಜರಿ ಹವಾ ಮೇಂಟೇನ್ ಮಾಡುವಾಗ್ಲೇ ಬಿಗ್ ಬಾಸ್ (BBK 11) ಸಾಮ್ರಾಜ್ಯಕ್ಕೆ ಯುವರಾಣಿಯ ಎಂಟ್ರಿ ಆಗಿದೆ. ಇದರಿಂದಾಗಿ ದೊಡ್ಮನೆಯಲ್ಲಿ ಮಾತಿನ ಚಕಮಕಿ ಜೋರಾಗಿದೆ, ರಾಜನ ಆಕ್ರೋಶ ಹೆಚ್ಚಾಗಿದೆ. ನಿನ್ನೆಯ ಎಪಿಸೋಡ್ ನಲ್ಲಿ ಹೆಚ್ಚು ಹೈಲೈಟ್ ಆದವರು ಉಗ್ರಂ ಮಂಜು, ಮೋಕ್ಷಿತಾ (Mokshitha) ಮತ್ತು ಗೌತಮಿ (Gouthami) ಅನ್ನೋದ್ರಲ್ಲಿ ಡೌಟೇ ಇಲ್ಲ. ಆದ್ರೆ ಇದನ್ನೆಲ್ಲಾ ನೋಡಿದ ಮೇಲೆ ನೆಟ್ಟಿಗರು ಗೌತಮಿ ಅವರ ಪಾಸಿಟಿವಿಟಿ ಕುರಿತಾಗಿ ಮಾತನಾಡೋಕೆ ಶುರುವಿಟ್ಟುಕೊಂಡಿದ್ದಾರೆ.

ಮೋಕ್ಷಿತಾ ದೂರ ಆಗ್ತಾ ಇದ್ದ ಹಾಗೆ ಗೌತಮಿ ಮಂಜು ಜೊತೆ ಮೊದಲಿಗಿಂತ ಹೆಚ್ಚು ಆತ್ಮೀಯರಾಗಿದ್ದಾರೆ. ಇನ್ನು ಯುವರಾಣಿ ಮೋಕ್ಷಿತಾ ಅವರು ಮನೆಯಲ್ಲಿ ಒಂದಷ್ಟು ನಿಯಮಗಳನ್ನು ಮಾಡಿದಾಗಲೂ ಗೌತಮಿ ಅದನ್ನ ಫಾಲೋ ಮಾಡೋದಿಲ್ಲ ಎಂದಿದ್ದಾರೆ. ಅಲ್ಲದೇ ಸುರೇಶ್ ಅವರು ಬಂದು ಯುವರಾಣಿ ಬಂದಾಗ ತಲೆ ಬಾಗಿಸಿ ನಮಸ್ಕಾರ ಮಾಡಬೇಕು ಅಂದಾಗಲೂ ಗೌತಮಿ ಇಲ್ಲ ನಾನು ಹಾಗೆಲ್ಲ ತಲೆಬಾಗೋದಿಲ್ಲ.

ಯಾವತ್ತು ನಾನು ಅವರಿಗೆ ತಲೆ ಬಾಗ್ತೀನೋ, ಅವತ್ತು ನಾನು ಅವರು ಹೇಳಿದ್ದನ್ನು ಕೇಳಿದೆ ಅಂತ ಆಗುತ್ತೆ. ಆ ಕಾರಣಕ್ಕಾಗಿ ನಾನು ತಲೆ ಬಾಗೋದಿಲ್ಲ ಎನ್ನುವ ಮಾತನ್ನ ಅವರು ಹೇಳಿದ್ದಾರೆ. ಅಲ್ಲದೇ ಆಟದಲ್ಲಿ ಗೌತಮಿ ಮಂಜು ಕಡೆ ಅನ್ನೋದು ಸ್ಪಷ್ಟವಾಗಿ ಕಂಡಿದೆ. ಅವರು ಹೆಚ್ಚು ಸಮಯವನ್ನು ಸಹಾ ಕ್ಯಾಪ್ಟನ್ ರೂಮ್ ನಲ್ಲಿ ರಾಜ ಮಂಜು ಜೊತೆ ಮಾತನಾಡುತ್ತಾ ಕರೆದಿರುವುದು ಸಹಾ ಕಂಡಿದೆ.

ಸೋಶಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರು ಗೌತಮಿ ಯಾಕೋ ಸೀರಿಯಲ್ ವಿಲನ್ ಗಳ ತರ ಆಡ್ತಿದ್ದಾರೆ. ಸುಮ್ಮನೆ ನಗೋದು, ನಾಟಕೀಯ ಹಾವ ಭಾವ ವ್ಯಕ್ತಪಡಿಸೋದು, ಇದೆಲ್ಲವನ್ನೂ ನೋಡೋಕೆ ಆಗ್ತಿಲ್ಲ ಅಂತ ಕಾಮೆಂಟ್ ಗಳನ್ನು ಪಾಸ್ ಮಾಡುತ್ತಿದ್ದಾರೆ. ಮೋಕ್ಷಿತಾ ಮಂಜು ಮತ್ತು ಗೌತಮಿ ಅವರಿಂದ ದೂರಾದ ಮೇಲೆ ತಮ್ಮ ಆಟದ ವಿಚಾರವಾಗಿ ಮನೆಯಿಂದ ಉತ್ತಮ ಕೂಡಾ ಪಡೆದುಕೊಂಡಿದ್ದಾರೆ.

BBK 11 : ನಿಂದು ನರಿ ಕಣ್ಣೀರು, ರೊಚ್ಚಿಗೆದ್ದ ಮಂಜಣ್ಣ, ಕಿಚ್ಚು ಹೊತ್ತಿಸಿದ ಮೋಕ್ಷಿತಾ; ಧಗ ಧಗ ಉರಿದ ಮಾತಿನ ಜ್ವಾಲೆ

Leave a Comment