BBK 11 : ನಿಂದು ನರಿ ಕಣ್ಣೀರು, ರೊಚ್ಚಿಗೆದ್ದ ಮಂಜಣ್ಣ, ಕಿಚ್ಚು ಹೊತ್ತಿಸಿದ ಮೋಕ್ಷಿತಾ; ಧಗ ಧಗ ಉರಿದ ಮಾತಿನ ಜ್ವಾಲೆ

Written by Soma Shekar

Published on:

---Join Our Channel---

Bigg Boss Kannada : ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ರಾಜ ಮತ್ತು ಯುವರಾಣಿಯ ನಡುವೆ ಅಧಿಕಾರಕ್ಕಾಗಿ ಕಿತ್ತಾಟವೇ ನಡೆದಿದೆ. ಸ್ನೇಹಿತರಂತೆ ಇದ್ದವರ ನಡುವೆಯೇ ಮಾತಿನ ಚಕಮಕಿ ನಡೆದಿದೆ. ಒಬ್ರು ಮತ್ತೊಬ್ಬರ ಮೇಲೆ ಮಾತಿನ ಕತ್ತಿಯನ್ನು ಮಸೆದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ (BBK 11) ಈ ವಾರ ಉಗ್ರಂ ಮಂಜು (Ugram Manju) ರಾಜನಾಗಿದ್ದು ಮನೆ ಮಂದಿ ಅವರ ಮಾತನ್ನೇ ಕೇಳಬೇಕಾಗಿದೆ. ಅಲ್ಲದೇ ರಾಜನಾದ ಅವರು ಮನೆಯಲ್ಲಿ ಮನೆ ಕೆಲಸದಿಂದ ಹಿಡಿದು ನಾಮಿನೇಷನ್ ವರೆಗೆ ತಮಗೆ ನೀಡಲಾದ ವಿಶೇಷವಾದ ಅಧಿಕಾರವನ್ನು ಬಳಸಿಕೊಂಡು ಆಟವಾಡಿದ್ದಾರೆ.

ಆದರೆ ಇವೆಲ್ಲವುಗಳ ನಡುವೆಯೇ ರಾಜನ ಅಧಿಕಾರ ಕಿತ್ತುಕೊಳ್ಳಲು ಯುವರಾಣಿಯ ಎಂಟ್ರಿ ಆಗಿದೆ. ಮೋಕ್ಷಿತಾ (Mokshitha) ಮಹಾರಾಣಿಯಾಗಿ ಬಂದಾಗ ಅವರ ಎದುರು ಎಲ್ಲರೂ ತಲೆ ಬಾಗಬೇಕು ಎಂದು ಹೇಳಿದಾಗ ಗೌತಮಿ ಅವರು ನಾವು ತಲೆ ಬಾಗೋದಿಲ್ಲ. ಹಾಗೆ ತಲೆ ಬಾಗಿದರೆ ಅವರನ್ನ ಒಪ್ಪಿಕೊಂಡ ಹಾಗಾಗುತ್ತೆ ಎಂದಿದ್ದಾರೆ. ಇನ್ನು ಮೋಕ್ಷಿತಾ ಆಟದಿಂದ ಉಗ್ರಂ ಮಂಜು ಬೆಂಕಿಯಾಗಿದ್ದಾರೆ.

ನಾಲಗೆಗೆ ಮೆತ್ತಿಕೊಂಡು, ನರಿ ಕಣ್ಣೀರು ಹಾಕಿಕೊಂಡು ಆಡಿದ್ದಲ್ಲ, ನಾನು ಕೊಟ್ಟಿರುವ ಭಿಕ್ಷೆ, ಯಾರ ಯೋಗ್ಯತೆ ಏನು ಅಂತ ನನಗೆ ಗೊತ್ತಿದೆ ಮಂಜು ಮೋಕ್ಷಿತಾ ಮೇಲೆ‌ ಸಿಟ್ಟು ಹೊರಹಾಕಿದ್ದಾರೆ ಮತ್ತು ಮೋಕ್ಷಿತಾ ಹಾಡಿದ್ದ ಹಾಡನ್ನು ಹಾಡಿ ವ್ಯಂಗ್ಯ ಕೂಡಾ ಮಾಡಿದ್ದು, ಭವ್ಯ ಹಾಗೂ ಗೌತಮಿ ಅದನ್ನು ನೋಡುತ್ತಾ ನಗುತ್ತಾ ಕುಳಿತುಕೊಂಡಿದ್ದಾರೆ.

ಮೋಕ್ಷಿತಾ ಕೂಡಾ ಸಿಟ್ಟಾಗಿದ್ದು, ನೀವು ಕೊಟ್ಟ ಭಿಕ್ಷೆಯಲ್ಲ ಇದು ಬಿಗ್ ಬಾಸ್ ಕೊಟ್ಟಿರೋದು ಎಂದು ಹೇಳಿದ್ದಾರೆ. ಅಲ್ಲದೇ ಮಂಜು ಹಾಡನ್ನು ಹಾಡುತ್ತಾ ವ್ಯಂಗ್ಯ ಮಾಡಿದ್ದನ್ನು ನೋಡಿ ಥೂ ಎಂದಿದ್ದಾರೆ ಮೋಕ್ಷಿತಾ. ಒಟ್ಟಿನಲ್ಲಿ ಅಧಿಕಾರದ ಕಿಚ್ಚು ಬಿಗ್ ಬಾಸ್ ಮನೆಯಲ್ಲಿ ಮಾತಿನ ಜ್ವಾಲೆಯನ್ನು ಹೊತ್ತಿಸಿದೆ. ಈ ಆಟದಲ್ಲಿ ಇನ್ನೂ ಏನೇನು ಆಗುತ್ತೋ ಅನ್ನೋದನ್ನ ಇವತ್ತಿನ ಎಪಿಸೋಡ್ ನಲ್ಲಿ ನೋಡಬೇಕಾಗಿದೆ.

Lakshmi Nivasa : ಭಾವನಾ ಅದೃಷ್ಟ ದೇವತೆ, ಜವರೇ ಗೌಡ ಖುಷ್, ನೀಲೂಗೆ ಶಾಕ್ ಕೊಟ್ಟ ಗುರುಗಳ ಭವಿಷ್ಯವಾಣಿ

Leave a Comment