Mohini Dey : ಅವರೊಡನೆ ಎಂಟು ವರ್ಷ ಇದ್ದೆ, ಅವರು ನನಗೆ ; ರೆಹಮಾನ್ ಬಗ್ಗೆ ಮೌನ ಮುರಿದ ಮೋಹಿನಿ ಡೇ

Written by Soma Shekar

Published on:

---Join Our Channel---

Mohini Dey : ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ (A R Rehman) ಕೆಲವೇ ದಿನಗಳ ಹಿಂದೆಯಷ್ಟೇ ಪತ್ನಿಯಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ. 29 ವರ್ಷಗಳ ದಾಂಪತ್ಯ ಜೀವನವು ಕೊನೆಯಾಗಿದ್ದು, ರೆಹಮಾನ್ ಮತ್ತು ಅವರ ಪತ್ನಿ ಸಾಯಿರಾ ಬಾನು ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಚೇದನ ಪಡೆದುಕೊಂಡಿದ್ದಾರೆ. ಆದರೆ ಇವೆಲ್ಲವುಗಳ ನಡುವೆಯೇ ಈ ವಿಚ್ಚೇದನಕ್ಕೆ ಸಂಗೀತಗಾರ್ತಿ ಮೋಹಿನಿ ಡೇ (Mohini Dey) ಅವರು ಕಾರಣ ಎನ್ನುವ ಸುದ್ದಿಯೊಂದು ಹರಿದಾಡಿತ್ತು. ಈ ವಿಷಯ ಸುದ್ದಿಯಾದ ಮೇಲೆ ಮೋಹಿನಿ ಡೇ ಇದಕ್ಕೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ತನ್ನ ಬಗ್ಗೆ ಹರಡಿರುವ ವದಂತಿಗಳನ್ನು ನಿರಾಕರಿಸುತ್ತ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ಎ ಆರ್ ರೆಹಮಾನ್ ಅವರು ನನಗೆ ತಂದೆಯ ಸಮಾನರಾದ ವ್ಯಕ್ತಿ ಎಂದು ಹೇಳಿದ್ದಾರೆ ಮೋಹಿನಿ. ಅಮೆರಿಕ ತೆರಳುವ ಮುನ್ನ ಎ ಆರ್ ರೆಹಮಾನ್ ಅವರ ಜೊತೆಗೆ ಸುಮಾರು ಎಂಟೂವರೆ ವರ್ಷಗಳ ಕಾಲ ಬಾಸ್ ವಾದಕಿಯಾಗಿ ಕೆಲಸ ಮಾಡಿದ್ದೇನೆ. ಸಂಬಂಧಗಳು ಅವರವರ ವೈಯಕ್ತಿಕ ವಿಚಾರ. ಎಲ್ಲರೂ ದಯೆಯಿಂದ ವರ್ತಿಸಿ ಎಂದು ಹೇಳಿಕೊಂಡಿದ್ದಾರೆ.

ನಾನು ಪ್ರವಾಸದಲ್ಲಿ ಇದ್ದ ಕಾರಣ ತಡವಾಗಿ ಪ್ರತಿಕ್ರಿಯೆ ನೀಡುತ್ತಿದ್ದೇನೆ ಎಂದಿರುವ ಮೋಹಿನಿ ಡೇ ಅವರು, ಎ ಆರ್ ರೆಹಮಾನ್ ನನ್ನ ತಂದೆಗಿಂತ ಚಿಕ್ಕವರು. ಆದರೆ ಅವರ ಮಗಳು ಮತ್ತು ನಾನು ಒಂದೇ ವಾರಿಗೆಯವರು. ನನ್ನ ಮತ್ತು ರೆಹಮಾನ್ ವಿರುದ್ಧ ತಪ್ಪು ಮಾಹಿತಿ ಮತ್ತು ಆಧಾರ ರಹಿತ ಊಹಾಪೋಹದ ಮಾತುಗಳನ್ನು ಆಡಲಾಗುತ್ತಿದ್ದು, ಸಂಪೂರ್ಣವಾಗಿ ನಂಬಲು ಮಾತುಗಳಾಗಿದೆ. ನಾನು ಅವರೊಡನೆ ಎಂಟೂವರೆ ವರ್ಷಗಳ ಕಾಲ ಕೆಲಸ ಮಾಡಿದ್ದ ಆ ಸಮಯವನ್ನ ಗೌರವಿಸುತ್ತೇನೆ.

ಭಾವನಾತ್ಮಕ ವಿಷಯಗಳ ಬಗ್ಗೆ ಜನರಿಗೆ ಗೌರವ ಮತ್ತು ಸಹಾನುಭೂತಿ ಇಲ್ಲದೇ ಇರುವುದು ನಿರಾಶದಾಯಕವಾಗಿದೆ. ಜನರ ಮನಸ್ಥಿತಿಯನ್ನು ನೋಡಿ ಬೇಸರವಾಗುತ್ತಿದೆ. ಮಾಧ್ಯಮಗಳು ಈ ವಿಷಯವನ್ನು ಅ ಶ್ಲೀ ಲ ಗೊಳಿಸುತ್ತಿರುವುದು ಅಪರಾಧ ಎನಿಸುತ್ತದೆ ಎಂಬುದಾಗಿ ಒಂದು ಸುದೀರ್ಘ ಪೋಸ್ಟ್ ನಲ್ಲಿ ಮೋಹಿನಿ ಡೇ ಅವರು ಬರೆದುಕೊಳ್ಳುವ ಮೂಲಕ ಹರಡಿರುವ ಸುದ್ದಿಗಳಿಗೆ ಸ್ಪಷ್ಟನೆ ನೀಡುತ್ತಾ ಪೂರ್ಣ ವಿರಾಮವನ್ನು ಹಾಕಿದ್ದಾರೆ.

BBK 11 : ಮೋಕ್ಷಿತಾ ಯುವರಾಣಿ, ರೊಚ್ಚಿಗೆದ್ದ ರಾಜ ಮಂಜಣ್ಣ, ಬಾಡಿದ ಗೌತಮಿ ಮುಖ, ಆಕ್ರೋಶದ ಆಟ ಶುರು

Leave a Comment