Bigg Boss Kannada : ಬಿಗ್ ಬಾಸ್ ಮನೆಯಲ್ಲಿ (Bigg Boss Kannada) ಈ ವಾರದ ನಾಮಿನೇಷನ್ ಪ್ರಕ್ರಿಯೆ ರಾಜ ಉಗ್ರಂ ಮಂಜು ಮುಂದೆ ಬಹಳ ಜೋರಾಗಿಯೇ ನಡೆದಿದೆ. ವಾಹಿನಿ ಹಂಚಿಕೊಂಡಿದ್ದ ಮೊದಲ ಪ್ರೊಮೊದಲ್ಲಿ ತ್ರಿವಿಕ್ರಮ್ ಮತ್ತು ಮೋಕ್ಷಿತಾ ನಡುವೆ ಮಾತಿನ ಚಕಮಕಿ ನಡೆದು ತ್ರಿವಿಕ್ರಮ್ ಮೋಕ್ಷಿತಾರನ್ನ ಎರಡು ತಲೆ ನಾಗರಹಾವು ಅಂತ ಕರೆದಿದ್ರು. ಈಗ ವಾಹಿನಿ ಬಿಗ್ ಬಾಸ್ ನ (BBK 11) ಇಂದಿನ ಎಪಿಸೋಡ್ ನ ಮತ್ತೊಂದು ಪ್ರೊಮೊ ಶೇರ್ ಮಾಡಿದ್ದು, ಇದರಲ್ಲಿ ರಜತ್ ಮತ್ತು ಚೈತ್ರ ಕುಂದಾಪುರ ಅವರ ನಡುವೆ ನಡೆದಿರುವ ಸಂಭಾಷಣೆ ಮನೆ ಮಂದಿಯನ್ನು ನಗಾಡುವ ಹಾಗೆ ಮಾಡಿದೆ.
ಚೈತ್ರ (Chaithra Kundapura) ಅವರು ನಾಮಿನೇಷನ್ ನಲ್ಲಿ ಬಿಡ್ಡಿಂಗ್ ಮಾಡುವಾಗ ತನ್ನ ಹೆಸರನ್ನು ಕೂಗದೇ ಇದ್ದ ವಿಚಾರ ಮಾತನಾಡಿ ಕೆಲವರ ಹೆಸರು ಹೇಳಿದಾಗ ರಾಜ ಮಂಜು ಇಡೀ ಟೀಮ್ ನ ನಾಮಿನೇಟ್ ಮಾಡ್ತಿದ್ದೀರಾ ಅಂತ ಚೈತ್ರ ಕಾಲೆಳೆದಿದ್ದಾರೆ. ನಂತರ ಚೈತ್ರ ಗೌತಮಿ ಮತ್ತು ಐಶ್ವರ್ಯ ಹೆಸರನ್ನ ಹೇಳಿದಾಗಲೂ ಮತ್ತೊಮ್ಮೆ ಅದು ನಗೆಪಾಟಲಿಗೆ ಕಾರಣವಾಗಿದೆ. ಇದಾದ ಮೇಲೆ ರಜತ್ ನ ನಾಮಿನೇಟ್ ಮಾಡುತ್ತಾ ಚೈತ್ರ ಕಾರಣವನ್ನು ನೀಡಿದ್ದಾರೆ.
ರಜತ್ (Rajath) ನನ್ನನ್ನ ಪ್ರತಿ ಬಾರಿ ಬಾಸು ಬಾಸು ಅಂತ ಕರೆದಾಗಲೂ ಅದ್ರಲ್ಲೊಂದು ವ್ಯಂಗ್ಯ ಕಾಣುತ್ತೆ ಎಂದಿದ್ದಾರೆ. ಆಗ ರಜತ್ ಇವಾಗ್ಲೂ ಹೇಳ್ತೀನಿ ನಮ್ಮ ಬಾಸು ಎಂದಿದ್ದಾರೆ. ಬಾಸು ಎಂದಿದ್ದಕ್ಕೆ ಮನೆಯಿಂದ ಆಚೆ ಕಳಿಸ್ತಾರಂತೆ ಇದಕ್ಕೆ ನಮ್ಮ ಬಾಸು ಅಂತ ಚೈತ್ರ ಅವರನ್ನು ತೋರಿಸಿದ್ದಾರೆ ರಜತ್. ಚೈತ್ರ ಅವರು ರಜತ್ ಹೊರಗಡೆ ಹೋಗೋದಕ್ಕೆ ತಯಾರಾಗಿದ್ದಾರೆ ಅನ್ನೋದನ್ನ ಒಪ್ಕೊಂಡಿದ್ದಾರೆ ಅಂತ ಹೇಳಿದ್ದಾರೆ.
ಆಗ ರಜತ್ ಬಾಸ್ ನಾನು ಇವಾಗ್ಲೂ ಹೇಳ್ತಾ ಇದ್ದೀನಿ ಕೇಳಿಸಿಕೊಳ್ರಿ ನಿಮ್ಮನ್ನ ಮನೆಗೆ ಕಳಿಸೋವರೆಗೂ ನಾನು ಹೋಗಲ್ಲ ಬಾಸ್ ಅಂತ ಹೇಳಿದ್ದಾರೆ. ರಜತ್ ಅವರ ಈ ಮಾತಿಗೆ ಮನೆಯಲ್ಲಿ ಒಂದಷ್ಟು ಜನ ಸಿಕ್ಕಾಪಟ್ಟೆ ನಗುತ್ತಾ ಎಂಜಾಯ್ ಮಾಡಿದ್ದಾರೆ. ಚೈತ್ರ ರಜತ್ ಮಾತಿಗೆ ಇನ್ನೂ ಏನೆಲ್ಲಾ ಹೇಳಿದ್ರು ಅನ್ನೋದನ್ನ ಇವತ್ತಿನ ಎಪಿಸೋಡ್ ನಲ್ಲಿ ನೋಡಬೇಕಾಗಿದೆ.
SeethaRama : ಸಿಹಿ ನೆನಪಲ್ಲಿ ಹುಚ್ಚಿ ಆದ ಸೀತಾ; ನೋಡೋರು ಹುಚ್ಚರಾಗಬೇಕಷ್ಟೇ ಎಂದು ಸಿಟ್ಟಾದ ನೆಟ್ಟಿಗರು