Bigg Boss Kannada : ಬಿಗ್ ಬಾಸ್ ಕನ್ನಡ (Bigg Boss Kannada) ಸೀಸನ್ 11ರ ಈ ವಾರದ ನಾಮಿನೇಷನ್ ಪ್ರಕ್ರಿಯೆ ಇಂದಿನ ಎಪಿಸೋಡ್ ನಲ್ಲಿ ನಡೆಯಲಿದೆ. ವಾಹಿನಿ ಇದರ ಕುರಿತಾಗಿ ಹೊಸ ಪ್ರೊಮೋ ಒಂದನ್ನ ಶೇರ್ ಮಾಡಿಕೊಂಡಿದ್ದು, ಈ ಪ್ರೊಮೋ ಎಲ್ಲರ ವಿಶೇಷ ಗಮನವನ್ನು ಸೆಳೆಯುತ್ತಿದೆ.ಈ ವಾರ ಬಿಗ್ ಬಾಸ್ ಮನೆ ಬಿಗ್ ಬಾಸ್ (BBK 11) ಸಾಮ್ರಾಜ್ಯವಾಗಿ ಬದಲಾಗಿದ್ದು, ಮನೆಯ ಕ್ಯಾಪ್ಟನ್ ಆಗಿರೋ ಉಗ್ರಂ ಮಂಜು ಮನೆಯಲ್ಲಿ ರಾಜನ ಸ್ಥಾನವನ್ನು ಅಲಂಕರಿಸಿದ್ದು, ಉಳಿದವರೆಲ್ಲ ಪ್ರಜೆಗಳಾಗಿದ್ದಾರೆ. ಈಗ ರಾಜನ ಮುಂದೆ ನಾಮಿನೇಷನ್ ಪ್ರಕ್ರಿಯೆ ಜೋರಾಗಿ ನಡೆದಿದೆ.
ನಾಮಿನೇಷನ್ ಪ್ರಕ್ರಿಯ ವೇಳೆಯಲ್ಲಿ ಮೋಕ್ಷಿತಾ (Mokshitha) ತ್ರಿವಿಕ್ರಂ (Trivikram) ಮತ್ತು ಗೌತಮಿಯವರ ನಡುವೆ ಮಾತಿನ ಚಕಮಕಿ ನಡೆದಿರುವುದು ಪ್ರೊಮೊದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಮೋಕ್ಷಿತಾ ಕೆಲವೇ ದಿನಗಳ ಹಿಂದೆ ಮಂಜಣ್ಣ ಮತ್ತು ಗೌತಮಿಯವರ ಗುಂಪಿನಿಂದ ದೂರವಾಗಿ ಸ್ವಂತ ಆಟವನ್ನು ಆಡೋದಕ್ಕೆ ಪ್ರಾರಂಭ ಮಾಡಿದ್ದಾರೆ. ಅವರ ಎದುರಾಳಿ ತಂಡದಲ್ಲಿ ಇದ್ದು ಟಾಸ್ಕ್ ಗಳನ್ನು ಮಾಡಿ ಮನೆ ಮಂದಿಯಿಂದ ಉತ್ತಮವನ್ನ ಕೂಡಾ ಪಡೆದುಕೊಂಡಿದ್ದಾರೆ.
ಈಗ ನಾಮಿನೇಷನ್ ಪ್ರಕ್ರಿಯೆಯಲ್ಲಿ ಮೋಕ್ಷಿತ ತ್ರಿವಿಕ್ರಮ್ ಹೆಸರನ್ನು ಹೇಳಿದ್ದು ಅವರು ಮಂಜಣ್ಣನ (Ugram Manju) ಬಗ್ಗೆ ತನ್ನ ಹತ್ತಿರ, ಮಂಜಣ್ಣ ಇಲ್ಲಿ ಇಷ್ಟು ಬಿಲ್ಡಪ್ ಕೊಡ್ತಾನೆ, ಆಚೆ ಅವರೇನು ಅಲ್ಲ ಅಂತ ಹೇಳ್ತಾರೆ ಅಂತ ಹೇಳಿದ್ದಾರೆ. ಇನ್ನು ತ್ರಿವಿಕ್ರಮ್ ಕೂಡಾ ಮೋಕ್ಷಿತಾ ಹೆಸರನ್ನು ಹೇಳ್ತಾ ಇವರು ನಾನು ಮ್ಯಾನಿಪುಲೇಟ್ ಮಾಡ್ತೀನಿ ಅಂತ ಹೇಳ್ತಾರೆ, ಆಕ್ಚುಯಲಿ ಅವರು ಮ್ಯಾನಿಪುಲೇಟ್ ಮಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಮೋಕ್ಷಿತಾ, ಗೌತಮಿ ಅವರು ನಾವಂದುಕೊಂಡಷ್ಟು ಪಾಸಿಟಿವಿಟಿ ಅಲ್ಲ, ಅದು ಇದು ಅಂತ ಕೂಡಾ ಮಾತಾಡಿಕೊಂಡಿದ್ದಾರೆ, ನನ್ನನ್ನ ಗೋಮುಖ ವ್ಯಾಘ್ರ ಅಂತ ಕರೀತಾರೆ ಆದರೆ ಅಸಲಿಗೆ ಮೋಕ್ಷಿತಾ ಎರಡು ತಲೆ ನಾಗರಹಾವು ಅನ್ನೋ ಮಾತನ್ನ ತ್ರಿವಿಕ್ರಮ್ ಹೇಳಿದ್ದಾರೆ. ಒಟ್ಟಿನಲ್ಲಿ ನಾಮಿನೇಷನ್ ಪ್ರಕ್ರಿಯೆಯಲ್ಲಿ ಮೋಕ್ಷಿತಾ ಮತ್ತು ತ್ರಿವಿಕ್ರಂ ನಡುವೆ ವಾಗ್ಯುದ್ಧವೇ ನಡೆದುಹೋಗಿದೆ.