Actress Rashmika : ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Actress Rashmika) ಮತ್ತು ವಿಜಯ ದೇವರಕೊಂಡ ನಡುವಿನ ಸ್ನೇಹದ ಕುರಿತಾಗಿ ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ. ಇವರ ಬಗ್ಗೆ ಎಷ್ಟೇ ಟ್ರೋಲ್ ಆದ್ರೂ, ಯಾರು ಏನೇ ಗಾಸಿಪ್ ಹರಡಿದರೂ ಕೂಡಾ ರಶ್ಮಿಕಾ ಅಥವಾ ವಿಜಯ್ (Vijaya Devarakonda) ಇಬ್ಬರೂ ಕೂಡಾ ತಲೆ ಕೆಡಿಸಿಕೊಳ್ಳುವುದಿಲ್ಲ. ಬದಲಾಗಿ ಅವರು ಎಲ್ಲವನ್ನೂ ಬಹಳ ಕೂಲಾಗಿಯೇ ನಿಭಾಯಿಸುತ್ತಾರೆ. ಇತ್ತೀಚಿಗೆ ಇವರಿಬ್ಬರೂ ಜೊತೆಯಾಗಿ ಔಟಿಂಗ್ ಹೋಗಿದ್ದ ಫೋಟೋ ಒಂದು ಭರ್ಜರಿ ಸದ್ದು ಮಾಡಿತ್ತು.
ರಶ್ಮಿಕಾ ಮತ್ತು ವಿಜಯ್ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುವಾಗಲೇ ರಶ್ಮಿಕಾ ಕೂಡಾ ಇದು ಎಲ್ಲರಿಗೂ ಗೊತ್ತಿರುವ ವಿಷಯ ಎನ್ನುವ ಮೂಲಕ ಹರಡಿರುವ ಸುದ್ದಿಗಳೇ ನಿಜ ಎನ್ನುವ ಹಾಗೆ ಸ್ಪಷ್ಟನೆಯನ್ನ ನೀಡಿರುವಂತೆ ಕಾಣುತ್ತಿದೆ. ರಶ್ಮಿಕಾ ಮಾತನಾಡಿರುವ ಒಂದು ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವೀಡಿಯೋ ಪುಷ್ಪ 2 (Pushpa 2) ಸಿನಿಮಾದ ಪ್ರಚಾರದ ಸಂದರ್ಭದ್ದಾಗಿದೆ. ಈ ವೇಳೆ ನಿರೂಪಕರು ನಟಿಯನ್ನ ನೀವು ಸಿನಿಮಾದವರನ್ನ ಮದುವೆಯಾಗ್ತೀರಾ ಅಥವಾ ಬೇರೆ ಕ್ಷೇತ್ರದವರನ್ನ ಮದುವೆಯಾಗ್ತೀರಾ ಎನ್ನುವ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ರಶ್ಮಿಕಾ ನಗುತ್ತಾ ಕೊಟ್ಟ ಉತ್ತರ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ ಹಾಗೂ ನಟಿ ಯಾವುದೋ ಸುಳಿವನ್ನು ನೀಡಿದಂತೆ ಕಂಡಿದೆ.
ಹೌದು, ರಶ್ಮಿಕಾ ಅವರನ್ನು ಮದುವೆ ವಿಚಾರವಾಗಿ, ಹುಡುಗನ ವಿಚಾರವಾಗಿ ಪ್ರಶ್ನೆಯನ್ನು ಮಾಡಿದಾಗ, ರಶ್ಮಿಕಾ ನಾನು ಮದುವೆ ಆಗೋ ಹುಡುಗನ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ ಎನ್ನುವ ಮಾತನ್ನ ಹೇಳಿದ್ದಾರೆ. ಈ ಮೂಲಕ ರಶ್ಮಿಕಾ ಪರೋಕ್ಷವಾಗಿ ವಿಜಯ ದೇವರಕೊಂಡ ಬಗ್ಗೆ ಸುಳಿವನ್ನು ನೀಡಿದರಾ ? ಎನ್ನುವ ಅನುಮಾನವೊಂದು ಎಲ್ಲರಿಗೂ ಮೂಡಿದೆ.