Actress Samantha : ನಾಗಚೈತನ್ಯ 2ನೇ ಮದುವೆ ಬಗ್ಗೆ ಮೊದಲ ಪ್ರತಿಕ್ರಿಯೆ ಕೊಟ್ಟ ಸಮಂತಾ; ನಟಿಯ ಪೋಸ್ಟ್ ವೈರಲ್

Written by Soma Shekar

Published on:

---Join Our Channel---

Actress Samantha : ನಾಗ ಚೈತನ್ಯ (Nagachaitanya) ಮತ್ತು ಶೋಭಿತ ಧೂಳಿಪಾಳ (Sobhita Dhulipala) ಶೀಘ್ರದಲ್ಲೇ ಸಪ್ತಪದಿಯನ್ನು ತುಳಿಯಲು ಸಜ್ಜಾಗಿದ್ದಾರೆ. ಈಗ ಅವರ ವಿವಾಹಕ್ಕೂ ಮೊದಲು ಅವರ ಮಾಜಿ ಪತ್ನಿ, ಸ್ಟಾರ್ ನಟಿ ಸಮಂತಾ ತಮ್ಮ instagram ಖಾತೆಯಲ್ಲಿ ಕವಿತೆಯೊಂದನ್ನು ಶೇರ್ ಮಾಡಿಕೊಂಡಿದ್ದು, ಸಮಂತಾ ಶೇರ್ ಮಾಡಿದ ಹೊಸ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುವುದರ ಜೊತೆಗೆ ಬಹಳಷ್ಟು ಜನರು ಅದಕ್ಕೆ ಪ್ರತಿಕ್ರಿಯೆಗಳನ್ನು ನೀಡುತ್ತಾ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಾಗೂ ಹೊಸ ಪ್ರಾಜೆಕ್ಟ್ ಗಳ ಕುರಿತಾಗಿ ಆಗಾಗ ಪೋಸ್ಟ್ ಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಆದರೆ ಈಗ ನಾಗಚೈತನ್ಯ ಮತ್ತು ಶೋಭಿತಾ ಮದುವೆಯ ವಿಚಾರಗಳು ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ಸಮಂತಾ (Actress Samantha) ಮಾಡಿರುವ ಒಂದು ಪೋಸ್ಟ್ ಈಗ ಎಲ್ಲರ ವಿಶೇಷ ಗಮನ ಸೆಳೆಯುತ್ತಿದೆ. ಹಾಗಾದ್ರೆ ನಟಿ ಮಾಡಿದ ಪೋಸ್ಟ್ ನಲ್ಲಿ ಅಂತದ್ದೇ‌ನಿದೆ ತಿಳಿದುಕೊಳ್ಳೋಣ ಬನ್ನಿ.

ಈ ಕವಿತೆ ಯಾವಾಗಲೂ ದಾರಿ ದೀಪವಾಗಿದೆ. ಅದಕ್ಕಾಗಿ ನಾನು ಅದನ್ನ ಇಂದು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ ಎಂದು ಶೀರ್ಷಿಕೆಯನ್ನು ಬರೆದುಕೊಂಡು, ಶಾಂತವಾಗಿ ಉಳಿಯುವ ಶಕ್ತಿಯನ್ನು ಪಡೆಯುವುದು, ಆ ಶಕ್ತಿಯನ್ನು ಹೇಗೆ ಕಾಪಾಡಿಕೊಳ್ಳುವುದು ಎನ್ನುವುದು ತರ್ಕಬದ್ದ ಚಿಂತನೆ. ಅಂದರೆ ನಿಮ್ಮ ಸುತ್ತಲಿರುವ ವಿಷಯದ ಮೇಲೆ ನಿಯಂತ್ರಣ ಅಥವಾ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳುವುದಿಲ್ಲ ಎನ್ನುವುದನ್ನು ಈ ಕವನವು ಸಾರಿ ಹೇಳುತ್ತದೆ ಎಂದಿದ್ದಾರೆ.

ಈ ಕವಿತೆ ತಾಳ್ಮೆಯ ಮೌಲ್ಯಗಳ ಬಗ್ಗೆ ಮಾತನಾಡುತ್ತದೆ. ಕೋಪದಲ್ಲಿ ಶಾಂತವಾಗಿರುವುದು ಮತ್ತು ಪ್ರಾಮಾಣಿಕವಾಗಿರುವುದು, ಗೆಲುವುಗಳನ್ನು ಸಮಾನವಾಗಿ ಕಾಣಲು ಮತ್ತು ಸವಾಲುಗಳನ್ನು ಧೈರ್ಯದಿಂದ ಎದುರಿಸಲು ಪ್ರೋತ್ಸಾಹಿಸುತ್ತದೆ ಎಂದು ಅಂತ ಬರೆದುಕೊಂಡಿದ್ದು, ನಾಗಚೈತನ್ಯ ಅವರ ಮದುವೆ ಹಿನ್ನೆಲೆಯಲ್ಲಿ ಸಮಂತಾ ಇಂತಾ ಒಂದು ಪೋಸ್ಟ್ ಮಾಡಿದ್ದಾರೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.

BBK 11 : ಮನೆಯ ರಾಜನಾಗಿ ಅಬ್ಬರಿಸಿದ ಉಗ್ರಂ ಮಂಜು; ಕೈಕಟ್ಟಿ ನಿಂತು ಗಡಗಡ ನಡುಗಿದ ಮನೆ ಮಂದಿ

Leave a Comment