BBK 11 : ಮನೆಯ ರಾಜನಾಗಿ ಅಬ್ಬರಿಸಿದ ಉಗ್ರಂ ಮಂಜು; ಕೈಕಟ್ಟಿ ನಿಂತು ಗಡಗಡ ನಡುಗಿದ ಮನೆ ಮಂದಿ

Written by Soma Shekar

Published on:

---Join Our Channel---

Bigg Boss Kannada : ಬಿಗ್ ಬಾಸ್ (Bigg Boss Kannada) ಮನೆಯ ಮತ್ತೊಂದು ಹೊಸ ವಾರ ಶುರುವಾಗಿದೆ. ನಿನ್ನೆ ಧರ್ಮ ಕೀರ್ತಿರಾಜ್ (Dharma Kirtiraj) ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಇನ್ನು ಈಗ ಈ ವಾರದ ಆಟ ಆರಂಭವಾಗಿದ್ದು, ವಾಹಿನಿ ಶೇರ್ ಮಾಡಿದ ಹೊಸ ಪ್ರೊಮೋ ಗಮನ ಸೆಳೆದಿದೆ. ಬಿಗ್ ಬಾಸ್ ಮನೆ ಈ ವಾರ ಬಿಗ್ ಬಾಸ್ (BBK 11) ಸಾಮ್ರಾಜ್ಯವಾಗಿ ಬದಲಾಗ್ತಿದೆ. ಈ ಸಾಮ್ರಾಜ್ಯಕ್ಕೆ ಅಧಿಪತಿಯಾಗಿದ್ದಾರೆ ಈ ವಾರ ಮನೆಯ ಕ್ಯಾಪ್ಟನ್ ಆಗಿರುವ ಉಗ್ರಂ ಮಂಜು (Ugram Manju) ಅವರು.

ಮನೆಯಲ್ಲಿ ರಾಜನ ಸ್ಥಾನವನ್ನು ಪಡೆದಿರುವ ಮಂಜು ಅವರಿಗೆ ಪಟ್ಟಾಭಿಷೇಕವನ್ನು ಮಾಡಲಾಗಿದೆ. ಮಹಿಳಾ ಸ್ಪರ್ಧಿಗಳು ಅವರಿಗೆ ಆರತಿ ಮಾಡಿ, ತಿಲಕ ಇಟ್ಟು ಕಿರೀಟವನ್ನು ತೊಡಿಸಿದ್ದಾರೆ. ಇದೇ ವೇಳೆ ಮನೆಯಲ್ಲಿ ಕೆಲವು ಸ್ಪರ್ಧಿಗಳು ನೃತ್ಯ ಮಾಡಿ ಮಹಾದಾಜನನ್ನು ಸಂತೋಷ ಪಡಿಸುವ ಕೆಲಸವನ್ನು ಸಹಾ ಮಾಡಿರುವುದು ಕಂಡಿದೆ.

ರಾಜನಾಗಿ ವಿಶೇಷ ಅಧಿಕಾರವನ್ನು ಪಡೆದುಕೊಂಡಿರುವ ಮಂಜು ಅವರು ಮನೆ ಮಂದಿಗೆ ಕಠಿಣ ಶಿಕ್ಷೆಗಳನ್ನು ಸಹಾ ನೀಡಿದ್ದಾರೆ ಮತ್ತು ಮನೆಯವರಿಗೆ ತಾವು ಹೇಳಿದಂತೆ ನಡೆದುಕೊಳ್ಳುವ ಆಜ್ಞೆಗಳನ್ನು ಸಹಾ ನೀಡುತ್ತಿರುವುದು ಪ್ರೊಮೋದಲ್ಲಿ ಕಂಡಿದೆ. ಚೈತ್ರಾಗೆ ಬಾಯಿ ಮುಚ್ಚುವಂತೆ ಮಾಡಿರುವುದು ಕಂಡಿದೆ.

ಇದಲ್ಲದೇ ಹನುಮಂತ, ಧನರಾಜ್ ಅವರಿಗೂ ಶಿಕ್ಷೆಯಾಗಿರೋದು ಕಂಡಿದೆ. ಧನರಾಜ್ ಹನುಮಂತನ ಬಳಿ ತಮ್ಮ ಬೇಸರವನ್ನು ಹೊರ ಹಾಕಿರುವುದು ಸಹಾ ಕಂಡಿದೆ. ಇನ್ನು ರಾಜನ ಅಧಿಕಾರ ಪಡೆದಿರೋ ಉಗ್ರಂ ಮಂಜು ಏನೆಲ್ಲಾ ಮಾಡ್ತಾರೆ, ಮನೆಯಲ್ಲಿ ಅವರಿಂದ ಯಾರಾದ್ರೂ ಟ್ರಿಗರ್ ಆಗ್ತಾರಾ ಅನ್ನೋದನ್ನ ಕಾದು ನೋಡಬೇಕಾಗಿದೆ.

Leave a Comment