Peacock Feather : ವಾಸ್ತು ಶಾಸ್ತ್ರದ (Vastu Shastra) ಪ್ರಕಾರ ಮನೆಯಲ್ಲಿ ನವಿಲು ಗರಿಯನ್ನು (Peacock Feather) ಇಡುವುದು ಶುಭ ಫಲವನ್ನು ನೀಡುತ್ತದೆ ಎನ್ನಲಾಗುತ್ತದೆ. ನವಿಲು ಗರಿಯನ್ನು ಮನೆಯಲ್ಲಿಟ್ಟರೆ ಶ್ರೀಕೃಷ್ಣನ ಕೃಪೆ ಕೂಡಾ ಮನೆಯ ಮೇಲಿರುತ್ತದೆ ಎಂದು ಹೇಳಲಾಗುತ್ತದೆ. ನವಿಲುಗರಿ ಮನೆಯಲ್ಲಿದ್ದರೆ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸಹಾ ಸುಧಾರಣೆ ಕಾಣುತ್ತದೆ ಎನ್ನಲಾಗಿದ್ದು, ಅದೇ ವೇಳೆ ನವಿಲು ಗರಿಯನ್ನು ಸರಿಯಾದ ಜಾಗದಲ್ಲಿ ಇಡದೇ ಹೋದರೆ ಪ್ರತಿಕೂಲ ಪರಿಸ್ಥಿತಿ ಉಂಟಾಗುತ್ತದೆ. ಹಾಗಾದರೆ ಮನೆಯಲ್ಲಿ ನವಿಲು ಗರಿಯನ್ನು ಎಲ್ಲಿ ಇಡಬಾರದು ಎನ್ನುವುದರ ಬಗ್ಗೆ ಮಾಹಿತಿಯನ್ನು ತಿಳಿಯೋಣ ಬನ್ನಿ.
ವಾಸ್ತು ಶಾಸ್ತ್ರದ ಅನ್ವಯ, ಮನೆಯ ಈಶಾನ್ಯ ದಿಕ್ಕಿನಲ್ಲಿ ನವಿಲು ಗರಿಗಳನ್ನು ಇರಿಸಿದರೆ, ನಿಮ್ಮ ಮನೆಯಲ್ಲಿ ಅದು ನಕಾರಾತ್ಮಕತೆಯನ್ನು ಉಂಟು ಮಾಡುವುದಲ್ಲದೇ. ಆರ್ಥಿಕ ನಷ್ಟವನ್ನು ಸಹಾ ಉಂಟು ಮಾಡುತ್ತದೆ. ಆದ್ದರಿಂದಲೇ ಮನೆಯಲ್ಲಿ ಯಾವುದೇ ಕಾರಣದಿಂದಲೂ ಈಶಾನ್ಯ ದಿಕ್ಕಿನಲ್ಲಿ ನವಿಲು ಗರಿಗಳನ್ನು ಇಡಬೇಡಿ.
ನವಿಲು ಗರಿಗಳನ್ನು ಯಾವುದೇ ಕಾರಣಕ್ಕೂ ನಿಮ್ಮ ಪರ್ಸ್ ನಲ್ಲಿ ಇಡಬೇಡಿ. ಇದರಿಂದಾಗಿ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಅಂದರೆ ಧನಹಾನಿಯ ಸಂಭಾವ್ಯತೆ ಹೆಚ್ಚಾಗಿರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ನವಿಲು ಗರಿಯನ್ನು ಮುಚ್ಚಿ ಇಡಬಾರದು ಎಂದು ಹೇಳಲಾಗಿದೆ.
ಮನೆಯಲ್ಲಿ ಬೆಲೆ ಬಾಳುವ ವಸ್ತುಗಳು, ಹಣ ಇಡುವ ಜಾಗ ಅಥವಾ ಲಾಕರ್ ಗಳಲ್ಲಿ ಯಾವುದೇ ಕಾರಣಕ್ಕೂ ನವಿಲು ಗರಿಯನ್ನು ಇಡಬೇಡಿ. ಹಣ ಇಡೋ ಜಾಗದಲ್ಲಿ ನವಿಲು ಗರಿಯನ್ನು ಇಟ್ಟರೆ ಇದರಿಂದ ಧನಹಾನಿ ಆಗುವ ಜೊತೆಗೆ ಒಂದಷ್ಟು ಅಶುಭ ಫಲಗಳು ಸಹಾ ಎದುರಾಗುವುದು ಎನ್ನಲಾಗಿದೆ.
ನವಿಲುಗರಿಯನ್ನು ಅಡುಗೆ ಮನೆಯಲ್ಲಿ ಇಟ್ಟರೆ ಅದರಿಂದಲೂ ನಕಾರಾತ್ಮಕ ಪರಿಣಾಮಗಳು ಉಂಟಾಗುತ್ತದೆ ಎನ್ನಲಾಗಿದೆ. ಅಲ್ಲದೇ ಅದು ನವಿಲುಗರಿಗೆ ಅವಮಾನ ಮಾಡಿದಂತೆ ಎನ್ನಲಾಗಿದೆ. ಅಡುಗೆ ಮನೆಯಲ್ಲಿ ನವಿಲು ಗರಿಗೆ ಒಗ್ಗರಣೆ ಹೊಗೆ, ಎಣ್ಣೆ ಇತ್ಯಾದಿ ತಗುಲಿದರೆ ಇಡೀ ಮನೆಯಲ್ಲಿ ನಕಾರಾತ್ಮಕತೆ ಹರಡುತ್ತದೆ ಎನ್ನಲಾಗಿದೆ.
BBK 11 : ಹೊರಗೆ ಹೋಗೋಕೆ ಒಂದು ಬಾಗಿಲು ಇದೆ; ವೀಕೆಂಡ್ ನಲ್ಲಿ ರಜತ್ ಗೆ ಕಿಚ್ಚನ ಕೊನೆಯ ಎಚ್ಚರಿಕೆ