BBK 11 : ಏರು ದನಿಯಲ್ಲಿ ಚೈತ್ರಾಗೆ ಕಿಚ್ಚನ ಖಡಕ್ ಕ್ಲಾಸ್; ಸುದೀಪ್ ಮಾತಿಗೆ ಕಕ್ಕಾಬಿಕ್ಕಿಯಾಗಿ ಕಣ್ಣೀರು ಹಾಕಿದ ಚೈತ್ರಾ

Written by Soma Shekar

Published on:

---Join Our Channel---

Bigg Boss Kannada : ಬಿಗ್ ಬಾಸ್ ಮನೆಯಲ್ಲಿ (Bigg Boss Kannada) ಈ ವೀಕೆಂಡ್ ನಲ್ಲಿ ಕಿಚ್ಚ ತಮ್ಮದೇ ಆದ ರೀತಿಯಲ್ಲಿ ಮನೆ ಮಂದಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಆದರೂ ವೀಕೆಂಡ್ ನ ಮೊದಲ ಎಪಿಸೋಡ್ ಬಹುತೇಕ ಚೈತ್ರ ಕುಂದಾಪುರ (Chaithra Kundapura) ಅವರ ವಿಷಯಗಳ ಮೇಲೆ ಕೇಂದ್ರೀಕೃತವಾಗಿತ್ತು ಅನ್ನೋದು ಸತ್ಯವಾಗಿದೆ. ತಲೆ ತಿರುಗಿ ಬಿದ್ದಿದ್ದ ಚೈತ್ರ ಚಿಕಿತ್ಸೆಗಾಗಿ ಹೊರಗೆ ಹೋಗಿ ಬಂದ ಚೈತ್ರ ಅವರು ಮನೆಯಲ್ಲಿ ಆಡಿದ ಮಾತುಗಳು ಬಿಗ್ ಬಾಸ್ ನ (BBK 11) ನಿಯಮ ಉಲ್ಲಂಘನೆ ಎನ್ನುವ ಕಾರಣಕ್ಕೆ ಕಿಚ್ಚ ಸುದೀಪ್ ಅವರು ಚೈತ್ರ ಅವರಿಗೆ ಖಡಕ್ ಆಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.

ಆಸ್ಪತ್ರೆಯಲ್ಲಿ ಏನೆಲ್ಲಾ ಆಯ್ತು ಎಂದು ಸುದೀಪ್ (Kichcha Sudeep) ಅವರು ಚೈತ್ರ ಅವರನ್ನು ಕೇಳಿದ್ದಾರೆ. ಅದಕ್ಕೆ ಚೈತ್ರ ಅವರು, ಡಾಕ್ಟರ್ ಬಳಿ ಶೋ ವಿಚಾರವಾಗಿ ಒಂದಷ್ಟು ಮಾತುಗಳನ್ನು ಆಡಿದ್ದಾಗಿ ಹೇಳಿದ್ದಾರೆ. ಅಲ್ಲದೇ ಡಾಕ್ಟರ್ ಅವರನ್ನ ಶೋ ಬಗ್ಗೆ ಕೇಳಿದಾಗ ಅವರು ಮನರಂಜನೆ ಇಲ್ಲ ಬರೀ ಫೈಟ್ ಬಗ್ಗೆ ಹೇಳಿದ್ರು. ನಿಮ್ಮ ನೆಚ್ಚಿನ ಸ್ಪರ್ಧಿ ಯಾರು ಅಂತ ಕೇಳಿದ್ದಕ್ಕೆ ಶಿಶಿರ್ ಮತ್ತು ಹನುಮಂತು ಹೆಸರು ಹೇಳಿದ್ರು ಎಂದು ಚೈತ್ರಾ ಹೇಳಿದ್ದಾರೆ.

ಇನ್ನು ಕಿಚ್ಚ ಸುದೀಪ್ ಅವರು ಬೇರೆ ಅವರ ಜೊತೆ ಮಾತನಾಡುವಾಗಲೂ ಚೈತ್ರಾ ಮಧ್ಯೆ ಮಾತನಾಡಿದ್ದು, ಪದೇ ಪದೇ ಅದೇ ತಪ್ಪನ್ನು ಮಾಡಿದ್ದು ಕಿಚ್ಚ ಸುದೀಪ್ ಅವರಿಗೆ ಕೋಪವನ್ನು ತರಿಸಿತ್ತು. ಸಿಟ್ಟಿನಿಂದ ಸುದೀಪ್ ಅವರು, ನನ್ನ ಮಾತಿಗೆ ಗೌರವನೇ ಇಲ್ಲ. ಕೈ ಎತ್ತಿ ಮಾತನಾಡಿ. ನಿಮಗೆ ನನ್ನ ಬಗ್ಗೆ ಏನ್ರಿ ಗೊತ್ತು. ಮನುಷ್ಯತ್ವ, ಮಾನವೀಯತೆ, ಹೃದಯ ಈ ಮೂವರ ಬಗ್ಗೆ ಬಾಳಿ ಬದುಕುತ್ತಿರುವವನು ನಾನು.

ನನ್ನನ್ನು ಮಾನವನಾಗಿ ಬದುಕಲು ಬಿಡಿ. ನಿಮಗೆ ಗೌರವ ಕೊಟ್ಟು ಮಾತನಾಡಿಸುತ್ತೇನೆ. ನನಗೆ ಗೌರವ ಕೊಡಿ ಎಂದು ಕಿಚ್ಚ ಹೇಳಿದ್ದಾರೆ. ಅನಂತರ ಕಿಚ್ಚ ಸುದೀಪ್ ಅವರು ನಿಮ್ಮ ಜೊತೆ ಏರು ದನಿಯಲ್ಲಿ ಮಾತನಾಡಿದ್ದಕ್ಕೆ ಕ್ಷಮೆ‌ ಇರಲಿ ಎಂದಿದ್ದು, ಯಾರ ಹತ್ರನೂ ನಾನು ಈ ರೀತಿ ಮಾತನಾಡಲ್ಲಮ್ಮ,‌ ಅಲ್ಲಿಯವರೆಗೆ ಹೋಗೋದು ಬೇಡ ಎಂದು ಕಿಚ್ಚ ಹೇಳಿದ್ದಾರೆ. ಒಟ್ಟಿನಲ್ಲಿ ಇಂದಿನ ಎಪಿಸೋಡ್ 90% ಚೈತ್ರ ಅವರಿಗೆ ಸುದೀಪ್ ಅವರು ಬುದ್ಧಿ ಮಾತು ಹೇಳುವುದರಲ್ಲಿ ಕಳೆದು ಹೋಯಿತು.

Bigg Boss Kannada : ಚೈತ್ರಾಗೆ ಬಿಗ್ ಬಾಸ್ ಖಡಕ್ ಎಚ್ಚರಿಕೆ; ಹೊರಗಿಂದ ಬಂದು ನಿಯಮ ಮುರಿದ್ರಾ ಚೈತ್ರಾ

Leave a Comment