BBK 11 : ಕಳಪೆಗೆ ಹೆದರಿ ಪ್ರಜ್ಞೆ ತಪ್ಪುವ ನಾಟಕ; ಚೈತ್ರಾ ಕುಂದಾಪುರ ಮೇಲೆ ನೆಟ್ಟಿಗರ ಅಸಮಾಧಾನ, ಸಿಟ್ಟು

Written by Soma Shekar

Published on:

---Join Our Channel---

Bigg Boss Kannada : ಬಿಗ್ ಬಾಸ್ ಮನೆಯ (Bigg Boss Kannada) ಬಾತ್ರೂಮ್ ಏರಿಯಾದಲ್ಲಿ ಚೈತ್ರ ಕುಂದಾಪುರ (Chaithra Kundapura) ಅವರು ಇದ್ದಕ್ಕಿದ್ದ ಹಾಗೆ ಕುಸಿದು ಬಿದ್ದಿದ್ದಾರೆ. ಬಾತ್ರೂಮ್ ಏರಿಯಾದಲ್ಲಿ ಚೈತ್ರ ಒಬ್ಬರೇ ಇದ್ದ ವೇಳೆಯಲ್ಲಿ ಅವರು ನೆಲದ ಮೇಲೆ ಕುಸಿದು ಬಿದ್ದು ಪ್ರಜ್ಞೆ ತಪ್ಪಿದ್ದಾರೆ. ಕೂಡಲೇ ಬಿಗ್ ಬಾಸ್ (BBK 11) ಗೌತಮಿ ಮತ್ತು ಮೋಕ್ಷಿತಾ ಅವರಿಗೆ ಚೈತ್ರಾಗೆ ಸಹಾಯ ಮಾಡುವಂತೆ ಸೂಚನೆ ಕೊಟ್ಟರು. ಮರು ಕ್ಷಣದಲ್ಲಿ ಗೌತಮಿ ಮತ್ತು ಮೋಕ್ಷಿತಾ ಇಬ್ಬರೂ ಕೂಡಾ ಬಾತ್ರೂಮ್ ಏರಿಯಾಗೆ ಓಡಿ ಹೋಗಿದ್ದಾರೆ. ಚೈತ್ರಾಗೆ ಆರೈಕೆಯನ್ನು ಮಾಡಲು ಮುಂದಾಗಿದ್ದಾರೆ. ಆಗ ಉಳಿದವರು ಸಹಾ ಬಾತ್ರೂಮ್ ಏರಿಯಾಗೆ ಓಡಿ ಬಂದಿದ್ದಾರೆ.

ಮನೆ ಮಂದಿ ಚೈತ್ರ ಅವರನ್ನು ಎಬ್ಬಿಸುವ ಪ್ರಯತ್ನವನ್ನು ಮಾಡಿದರೂ ಸಹಾ ಅವರಿಗೆ ಪ್ರಜ್ಞೆ ಬರಲಿಲ್ಲ. ನಂತರ ಬಿಗ್ ಬಾಸ್ ಚೈತ್ರ ಅವರನ್ನು ಕನ್ಫೆಷನ್ ರೂಮಿಗೆ ಕರೆ ತರುವಂತೆ ಸೂಚನೆ ನೀಡಿದರು. ಬಿಗ್ ಬಾಸ್ ಸೂಚನೆಯ ಮೇರೆಗೆ ತ್ರಿವಿಕ್ರಮ್ (Trivikram) ಅವರು ಮನೆ ಮಂದಿಯ ಸಹಾಯದಿಂದ ಚೈತ್ರ ಅವರನ್ನು ಎತ್ತಿಕೊಂಡು ಹೋಗಿ ಕನ್ಫೆಷನ್ ರೂಮ್ ನಲ್ಲಿ ಮಲಗಿಸಿ ಬಂದರು.

ಈ ಘಟನೆ ನಂತರ ಸೋಶಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರು ಇದ್ದಕ್ಕಿದ್ದ ಹಾಗೆ ಚೈತ್ರಾಗೆ ಏನಾಯ್ತು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಜೋಡಿ ಟಾಸ್ಕ್ ವೇಳೆ ಚೈತ್ರ ಮತ್ತು ಶಿಶಿರ್ (Shishir) ನಡುವೆ ದೊಡ್ಡ ವಾಕ್ಸಮರವೇ ನಡೆದಿತ್ತು. ಈ ವೇಳೆ ಬಹಳಷ್ಟು ಜನ ಚೈತ್ರ ಅವರನ್ನು ಟೀಕೆ ಮಾಡಿದ್ದರು. ಜೋಡಿ ಟಾಸ್ಕ್ ಮುಗಿದ ಮೇಲೆ ಚೈತ್ರ ಪ್ರಜ್ಞಾಹೀನರಾಗಿದ್ದಾರೆ. ಈಗ ಚೈತ್ರ ಆರೋಗ್ಯದ ಬಗ್ಗೆ ಚರ್ಚೆಗಳು ಆರಂಭವಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ಈ ವಿಚಾರಕ್ಕೆ ಮಿಶ್ರ ಪ್ರತಿಕ್ರಿಯೆಗಳು ಹರಿದು ಬರುತ್ತಿದೆ. ಕೆಲವರು ಅವರಿಗೆ ಆರೋಗ್ಯ ಸಮಸ್ಯೆ ಆದಂತಿದೆ ಎಂದರೆ ಇನ್ನೂ ಕೆಲವರು ಕಳಪೆ ಪಟ್ಟದಿಂದ ತಪ್ಪಿಸಿಕೊಳ್ಳೋಕೆ ಈ ನಾಟಕ ಆಡಿದ್ದಾರೆ ಅಂತ ಕೂಡಾ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಚೆನ್ನಾಗಿ ಇದ್ದಿದ್ರೆ ಅವರು ಆಡಿದ ಆಟಕ್ಕೆ ಈ ವಾರ ಕಳಪೆ ಕೊಡ್ತಾ ಇದ್ರು ಅದಕ್ಕೆ ಹೀಗೆ ಮಾಡಿದ್ದಾರೆ ಅಂತ ಕೂಡಾ ಕಾಮೆಂಟ್ ಗಳನ್ನು ಮಾಡಿದ್ದಾರೆ.

Leave a Comment