Actress Samantha : ಸಿದ್ಧಾರ್ಥ್ ಅಥವಾ ನಾಗಚೈತನ್ಯ ಅಲ್ಲ, ಫಸ್ಟ್ ಕ್ರಶ್ ಬಗ್ಗೆ ರಿವೀಲ್ ಮಾಡಿದ ಸಮಂತಾ, ಫ್ಯಾನ್ಸ್ ಶಾಕ್

Written by Soma Shekar

Published on:

---Join Our Channel---

Actress Samantha : ಸಮಂತಾ (Actress Samantha) ತಮ್ಮ ವೈಯುಕ್ತಿಕ ಜೀವನದಲ್ಲಿ ಇಬ್ಬರ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದರು. ನಾಗಚೈತನ್ಯ ಗಿಂತಲೂ ಮೊದಲು ಸಮಂತಾ ತಮಿಳು ನಟ ಸಿದ್ಧಾರ್ಥ್ (Siddharth) ಅವರನ್ನು ಪ್ರೀತಿಸುತ್ತಿದ್ದರೆನ್ನುವ ಸುದ್ದಿಗಳು ಸಾಕಷ್ಟು ಸದ್ದನ್ನು ಮಾಡಿದ್ದವು. ಆದರೆ ನಾಗಚೈತನ್ಯ (Nagachaitanya) ಜೊತೆಗಿನ ಪ್ರೀತಿ, ಮದುವೆ ಹೆಚ್ಚು ಗಮನ ಸೆಳೆಯಿತು. ಆದರೆ ವಿಚ್ಚೇದನದ ಮೂಲಕ ಆ ಪ್ರೀತಿಯು ಸಹಾ ಸಮಂತಾ ಅವರಿಂದ ದೂರವಾಯಿತು ಅನ್ನೋದು ಈಗ ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಸಿದ್ಧಾರ್ಥ್ ಜೊತೆ ಬ್ರೇಕಪ್ ಆದ ಮೇಲೆ ಆ ನಟ ಸಮಂತಾ ಬಗ್ಗೆ ಕೆಲವೊಮ್ಮೆ ನೆಗೆಟಿವ್ ಆಗಿ ಫೊಸ್ಟ್ ಸಹಾ ಹಾಕುತ್ತಿದ್ದರು ಎನ್ನುವುದು ಕೂಡಾ ಸುದ್ದಿಯಾಗಿತ್ತು.

ಹೀಗೆ ಸಮಂತಾ ಸುತ್ತಾ ಎರಡೆರಡು ಪ್ರೇಮ ಕಥೆಗಳು ಇರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಆದರೆ ಇವೆರಡಕ್ಕೂ ಮೊದಲು ಅಂದರೆ ಸಮಂತಾ ಇಂಟರ್ ಮೀಡಿಯಟ್ ಓದುವಾಗ ಆಗಿದ್ದ ತಮ್ಮ ಮೊದಲ ಕ್ರಶ್ ಕುರಿತಾಗಿ ಮನಬಿಚ್ಚಿ ಮಾತನಾಡುವ ಮೂಲಕ ಅಭಿಮಾನಿಗಳಿಗೆ ಒಂದು ಹೊಸ ವಿಷಯವನ್ನು ತಿಳಿಸಿದ್ದಾರೆ. ಹಾಗಾದರೆ ಏನಿದು ಕಥೆ ತಿಳಿಯೋಣ ಬನ್ನಿ.

ಇಂಟರ್ ಮೀಡಿಯಟ್ ನಲ್ಲಿ ಇರೋವಾಗ ಸಮಂತಾ ಬಹಳ ಚುರುಕಾದ ಹುಡುಗಿಯಾಗಿದ್ರಂತೆ. ಹುಡುಗಿಯರ ಗ್ಯಾಂಗ್ ಸಹಾ ಮೈಂಟೇನ್ ಮಾಡ್ತಾ ಇದ್ರಂತೆ. ಆ ದಿನಗಳಲ್ಲಿ ಒಬ್ಬ ಹುಡುಗ ಸಮಂತಾ ಅವ್ರನ್ನ ಎರಡು ವರ್ಷಗಳ ಕಾಲ ಹಿಂದೆ ಬಿದ್ದಿದ್ದನಂತೆ. ಸಮಂತಾ ಹಿಂದೆ ಹಿಂದೆ ಬರ್ತಾ ಇದ್ನಂತೆ. ನಟಿ ಬಸ್ಸಿಳಿದು ನಡೆದುಕೊಂಡು ಹೋಗುವಾಗ ಅವರ ಹಿಂದೆ ಬರ್ತಾ ಇದ್ನಂತೆ.

ಇದನ್ನ ನೋಡಿ ಏನೇನೋ ಊಹಿಸಿಕೊಂಡಿದ್ದ ಸಮಂತಾ ಒಂದು ದಿನ ಅವನನ್ನ ಯಾಕೆ ತನ್ನ ಹಿಂದೆ ಬರ್ತೀಯಾ ಅಂತ ಕೇಳಿದನಂತೆ. ಆಗ ಅವನು ನಾನು ಹಿಂದೆ ಬರ್ತಾ ಇದ್ದೀನಿ ಯಾರು ಹೇಳಿದ್ದು ಅಂತ ಕೇಳಿ ಶಾಕ್ ಕೊಟ್ನಂತೆ. ಇದರಿಂದ ಸಮಂತಾಗೆ ನಿರಾಶೆಯಾಯ್ತಂತೆ. ಅವನು ಇಷ್ಟಪಟ್ಟಿದ್ನಾ, ಇಲ್ವಾ, ಇಷ್ಟಪಟ್ಟು ಹೇಳೋಕೆ ಆಗ್ಲಿಲ್ವಾ ಗೊತ್ತಾಗ್ಲಿಲ್ಲ. ಅದೊಂದು ವಿಚಿತ್ರ ಅನುಭವ ಎಂದಿದ್ದಾರೆ ಸಮಂತಾ.

Pushpa 2 : ಪುಷ್ಪರಾಜ್ ಜೊತೆ ಕಿಸ್ಸಿಕ್ ಸಾಂಗ್ ಗೆ ಕಿಸ್ ಬೆಡಗಿ ಪಡೆದ್ರು ಭಾರೀ ಸಂಭಾವನೆ; ಸಮಂತಾನ ಮರೆಸ್ತಾರಾ ಶ್ರೀಲೀಲಾ

Leave a Comment