Bigg Boss Kannada : ಬಿಗ್ ಬಾಸ್ ಮನೆಯಲ್ಲಿ (Bigg Boss Kannada) ಧರ್ಮ ಮತ್ತು ಅನುಷಾ ನಡುವೆ ಇದ್ದ ಒಡನಾಟ ಎಲ್ಲರಿಗೂ ತಿಳಿದೇ ಇದೆ. ಮೊನ್ನೆ ಕೆಂಪು ಗುಲಾಬಿ ನೀಡೋ ಸಮಯದಲ್ಲೂ ಧರ್ಮ (Dharma) ಅದನ್ನ ಅನುಷಾಗೆ (Anusha Rai) ನೀಡಿದ್ರು. ಆದರೆ ಅದಾದ ಕೆಲವೇ ಗಂಟೆಗಳಲ್ಲಿ ಬಿಗ್ ಬಾಸ್ (BBK 11) ಕೊಟ್ಟ ಹೊಸ ಟಾಸ್ಕ್ ನಿಂದಾಗಿ ಧರ್ಮ ಮತ್ತು ಅನುಷಾ ನಡುವೆ ವೈಮನಸ್ಸು ಉಂಟಾಗಿದೆ. ಬಿಗ್ ಬಾಸ್ ಮನೆಯಲ್ಲಿರೋ ಜೋಡಿಗಳೆಲ್ಲಾ ಚರ್ಚಿಸಿ ಒಮ್ಮತದಿಂದ ಒಂದು ಜೋಡಿಯನ್ನು ನೇರ ನಾಮಿನೇಟ್ ಮಾಡಬೇಕೆಂದರು. ಈ ವೇಳೆ ಎಲ್ಲರೂ ಟಾರ್ಗೆಟ್ ಮಾಡಿದ್ದ ಅನುಷಾ ಮತ್ತು ಗೋಲ್ಡ್ ಸುರೇಶ್ ಜೋಡಿಯನ್ನು.
ಈ ವೇಳೆ ಧರ್ಮ ಅನುಷಾನ ನಾಮಿನೇಟ್ ಮಾಡೋದಕ್ಕೆ, ಅನುಷಾ ಕಳೆದ ವಾರ ಕೊನೆಯ ಕ್ಷಣದಲ್ಲಿ ನಾಮಿನೇಷನ್ನಿಂದ ಪಾರಾದರು. ಇನ್ನೂ ಸ್ವಲ್ಪ ಕೂಲ್ ಆಗಿದ್ದಾರೆ. ಅಗ್ರೆಷನ್ ಸ್ವಲ್ಪ ಕಮ್ಮಿ ಇದೆ. ನುಗ್ಗಬೇಕು ಸ್ವಲ್ಪ ಮುಂದೆ ಎಂದು ಕಾರಣ ಕೊಟ್ಟರು. ಅನುಷಾಗೆ ಇದು ಸಿಟ್ಟನ್ನು ತರಿಸಿತು. ಅವರು ನೇರವಾಗಿ ಧರ್ಮ ನಿಮ್ಮಲ್ಲಿ ಎಷ್ಟು ಅಗ್ರೆಷನ್ ಇದೆ ಅಂತ ಪ್ರಶ್ನೆ ಮಾಡಿದರು. ಉಳಿದವರಿಗೂ ಅನುಷಾ ನೇರಾನೇರ ಪ್ರಶ್ನೆ ಮಾಡಿದರು.
ಇದಾದ ನಂತರ ಧರ್ಮ ಅನುಷಾ ಜೊತೆ ಮಾತನಾಡೋಕೆ ಸಾಕಷ್ಟು ಪ್ರಯತ್ನ ಪಟ್ಟರು. ಆದರೆ ಅನುಷಾ ಮಾತ್ರ ಧರ್ಮ ಅವರ ಮಾತನ್ನ ಕೇಳೋಕೆ ಸಿದ್ಧವೇ ಇರ್ಲಿಲ್ಲ. ಅಲ್ಲದೇ ನನಗೆ ಮಾತಾಡೋಕೆ ಇಷ್ಟ ಇಲ್ಲ, ನೀವು ಇಲ್ಲಿಂದ ಹೋಗಿ ಅಂತ ಧರ್ಮ ಅವರಿಗೆ ಹೇಳಿದ್ರು ಅನುಷಾ. ಅಲ್ಲದೇ ಸುರೇಶ್ ಹತ್ರ ಧರ್ಮಗೆ ಬೇರೆ ಅವರ ಹತ್ರ ಮಾತಾಡೋಕಾಗಲ್ಲ ನನ್ನ ಹತ್ರ ಬಂದಿದ್ದಾರೆ ಅಗ್ರೆಷನ್ ತೋರಿಸೋಕೆ ಎಂದಿದ್ದಾರೆ.
ಇಷ್ಟೆಲ್ಲಾ ಆದ್ರು ಧರ್ಮ ಗುಡ್ ನೈಟ್ ಹೇಳಿದ್ರು ಅನುಷಾ ಪ್ರತಿಕ್ರಿಯೆ ಕೊಡಲಿಲ್ಲ. ಮತ್ತೆ ಬೆಳಿಗ್ಗೆ ಧರ್ಮ ಒಂದು ವೇಳೆ ನಾನು ಮಾತನಾಡಿದ್ದೇ ತಪ್ಪಾಗಿದ್ರೆ ಕ್ಷಮಿಸಿ ಅಂತ ಕ್ಷಮಾಪಣೆ ಕೇಳಿದ್ರು ಅನುಷಾ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಧರ್ಮ ಮತ್ತು ಅನುಷಾ ನಡುವೆ ಇದ್ದ ಒಂದು ಸ್ನೇಹವನ್ನು ಒಂದೇ ಒಂದು ಟಾಸ್ಕ್ ಹಾಳು ಮಾಡಿದೆ ಎನ್ನುವುದಂತೂ ನಿನ್ನೆಯ ಎಪಿಸೋಡ್ ನಲ್ಲಿ ಸ್ಪಷ್ಟವಾಗಿ ಕಂಡಿದೆ.
Puttakkana Makkalu ರೆಬಲ್ ಆದ ಕಂಠಿ ಕೊಟ್ಟ ವಾರ್ನಿಂಗ್ ಕೇಳಿ ಬೆಚ್ಚಿ ಬಿದ್ದ ಪುಟ್ಟಕ್ಕ; ಕಥೆಯಲ್ಲಿ ಹೊಸ ಟ್ವಿಸ್ಟ್