Sonu Srinivas Gowda ಶೀಘ್ರದಲ್ಲೇ ನಿಶ್ಚಿತಾರ್ಥ ಅಂತ ಮದುವೆಯಾಗೋ ಹುಡುಗನ ಬಗ್ಗೆ ಸೋನು ಓಪನ್ ಟಾಕ್

Written by Soma Shekar

Published on:

---Join Our Channel---

Sonu Srinivas Gowda : ಬಾಸ್ ಕನ್ನಡ ಒಟಿಟಿ ಸೀಸನ್ 1ರಿಂದ (Bigg Boss Kannada OTT 1) ಜನಪ್ರಿಯತೆ ಪಡೆದ ಸೋಶಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರು ವೈವಾಹಿಕ ಜೀವನಕ್ಕೆ ಅಡಿಯಿಡಲು ಸಿದ್ಧತೆಗಳನ್ನು ನಡೆಸಿದ್ದಾರೆ.‌ ಸೋನು ತಾವು ಮದುವೆ ಆಗುತ್ತಿರುವ ಹುಡುಗನ ಕುರಿತಾಗಿ ಮಾದ್ಯಮವೊಂದಕ್ಕೆ ಮಾಹಿತಿಯನ್ನು ಶೇರ್ ಮಾಡಿಕೊಂಡಿದ್ದಾರೆ.

ಸೋನು, ನಾನು ಮದುವೆಯಾಗುತ್ತಿರುವ ವಿಚಾರ ನಿಜ ನಾನು ಮುಂದಿನ ವರ್ಷ ಮದುವೆಯಾಗುವ (Wedding) ಪ್ಲಾನ್ ಮಾಡುತ್ತಿದ್ದೇನೆಂದು ಸೋನು ಓಪನ್ ಆಗಿ ಹೇಳಿಕೊಂಡಿದ್ದಾರೆ. ಇತ್ತೀಚಿಗೆ ಸೋನು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಮದುವೆ ಬಗ್ಗೆ ಮಾತನಾಡಿ ಗಮನ ಸೆಳೆದಿದ್ದರು. ಎಲ್ಲರ ಮದುವೆ ನೋಡಿ ನೋಡಿ ನನಗೂ ಮದುವೆ ಆಗಬೇಕು ಅನಿಸಿದೆ. ಸದ್ಯದಲ್ಲೇ ಮದುವೆ ಬಗ್ಗೆ ಹೇಳ್ತೀನಿ ಎಂದಿದ್ದರು.

ಈಗ ಖುದ್ದಾಗಿ ಸೋನು ಅವರೇ ಮದುವೆ ಬಗ್ಗೆ ಮಾತನಾಡಿದ್ದಾರೆ. ಕುಟುಂಬಸ್ಥರು ನಿಶ್ಚಯಿಸಿದ ಮದುವೆ ಇದಾಗಿದೆ. ಹುಡುಗನ ಕುಟುಂಬದವರು ನಮ್ಮಮ್ಮ ಅಪ್ರೋಚ್ ಮಾಡಿದ್ದರು. ಒಳ್ಳೆಯ ಹುಡುಗ, ಒಳ್ಳೆಯ ಸಂಬಂಧ ಇದಾಗಿದ್ದು ನನ್ನ ತಾಯಿ ಸಮ್ಮತಿ ಸೂಚಿಸಿದರು ಹಾಗೂ ಅದಕ್ಕೆ ನಾನು ಕೂಡಾ ಮದುವೆಗೆ ಒಪ್ಪಿಕೊಂಡಿದ್ದೇನೆ ಎಂದಿದ್ದಾರೆ ಸೋನು ಗೌಡ.

ಒಳ್ಳೆಯ ಸಂಬಂಧ ಎಂದರೆ ಯಾಕೆ ಒಪ್ಪಿಕೊಳ್ಳಬಾರದು ಎನಿಸಿತು. ಕುಟುಂಬದವರು ನಿರ್ಧರಿಸಿದ್ದಾರೆ ಎಂದರೆ ಅದು ಸರಿಯಾದ ನಿರ್ಣಯವೇ ಆಗಿರುತ್ತದೆ ಎಂದು ತಮ್ಮ ಮದುವೆಯ ಬಗ್ಗೆ ಹೇಳಿದ್ದಾರೆ ಸೋನು. ಸೋನು ಮದುವೆ ಆಗುತ್ತಿರುವ ಹುಡುಗ ಮೂಲತಃ ಬೆಂಗಳೂರಿನವರು, ವಿದೇಶದಲ್ಲಿ ವೃತ್ತಿ ಮಾಡುತ್ತಿದ್ದು, ಸದ್ಯದಲ್ಲೇ ‌‌ನಿಶ್ಚಿತಾರ್ಥ ಮತ್ತು ಮುಂದಿನ ವರ್ಷ ಮದುವೆ ಎಂದಿದ್ದಾರೆ ಸೋನು.

BBK 11 : ಸುರೇಶ್, ಸುರೇಶ್, ಎಲ್ಲದಕ್ಕೂ ನಾನೇನಾ? ಮನೆ ಮಂದಿ ಮೇಲೆ ರೊಚ್ಚಿಗೆದ್ದ ಗೋಲ್ಡ್ ಸುರೇಶ್

Leave a Comment