BBK 11 : ಶಿಶಿರ್ ಮುಂದೆ ಮಂಡಿಯೂರಿ ಕೆಂಗುಲಾಬಿ ನೀಡಿದ ಐಶ್ವರ್ಯ; ಶಿಶಿರ್ ನ ಹಾಡಿ ಹೊಗಳಿ ಸ್ನೇಹಮಯಿ ಎಂದ ಐಶ್ವರ್ಯ

Written by Soma Shekar

Published on:

---Join Our Channel---

Bigg Boss Kannada : ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ನಿನ್ನೆ ಬಿಗ್ ಬಾಸ್ (BBK 11) ಮನೆ ಮಂದಿಗೆ ಒಂದು ವಿಶೇಷವಾದ ಟಾಸ್ಕ್ ಅನ್ನು ನೀಡಿದ್ದರು. ಇದು ಸ್ಪರ್ಧಿಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವ ಟಾಸ್ಕ್ ಆಗಿತ್ತು. ಸ್ಪರ್ಧಿಗಳು ತಮ್ಮ ಪ್ರೀತಿ ಪಾತ್ರರಿಗೆ ಕೆಂಪು ಗುಲಾಬಿಯನ್ನು ಮತ್ತು ಅಸಮಾಧಾನ ಇರುವವರ ಬಗ್ಗೆ ಕಪ್ಪು ಗುಲಾಬಿಯನ್ನು ನೀಡುವಂತೆ ಸೂಚನೆಯನ್ನು ನೀಡಿದ್ದಾರೆ. ಇದರಲ್ಲಿ ಮನೆ ಮಂದಿ ತಮ್ಮ ಆಯ್ಕೆಯ ಅನುಸಾರ ಬೇಕಾದವರಿಗೆ ಕೆಂಪು ಗುಲಾಬಿ, ಮತ್ತೊಬ್ಬರಿಗೆ ಕಪ್ಪು ಗುಲಾಬಿಯನ್ನು ನೀಡಿದ್ದಾರೆ.

ಈ ಟಾಸ್ಕ್ ವೇಳೆ ಯಾರು ಯಾರಿಗೆ ಕೆಂಪು ಗುಲಾಬಿಯನ್ನು ನೀಡ್ತಾರೆ ಅನ್ನೋದನ್ನ ಪ್ರೇಕ್ಷಕರು ಮೊದಲೇ ಊಹೆ ಮಾಡಿದ್ದರು ಅನ್ನೋದು ಸುಳ್ಳಲ್ಲ. ಆದರೆ ಮನೆ ಮಂದಿಯಿಂದ ಅತಿ ಜೆಚ್ಚು ಕಪ್ಪು ಗುಲಾಬಿಯನ್ನು ಪಡೆದಿದ್ದು ಮಾತ್ರ ಸುರೇಶ್ ಅವರು ಎನ್ನುವುದು ನೋಡಿದಾಗ ಮನೆ ಮಂದಿಗೆ ಸುರೇಶ್ (Gold Suresh) ಮೇಲೆ ಎಷ್ಟು ಅಸಮಾಧಾನ ಇದೆ ಅನ್ನೋದಂತೂ ಸ್ಪಷ್ಟವಾಗಿದೆ.

ಈ ಟಾಸ್ಕ್ ನಲ್ಲಿ ಐಶ್ವರ್ಯ (Aishwarya) ಅವರ ಸುತ್ತು ಬಂದಾಗ ಅವರು ಖಚಿತವಾಗಿ ಶಿಶಿರ್ ಗೆ ಕೆಂಪು ಗುಲಾಬಿಯನ್ನು ಕೊಡ್ತಾರೆ ಅನ್ನೋದು ಗೊತ್ತಾಗಿತ್ತು. ಆದರೆ ಐಶ್ವರ್ಯ ಗುಲಾಬಿಯನ್ನು ಕೊಟ್ಟ ವಿಧಾನ ಮಾತ್ರ ಸಾಕಷ್ಟು ಅಚ್ಚರಿಯನ್ನು ಮೂಡಿಸುವ ಹಾಗಿತ್ತು. ಬಿಗ್ ಬಾಸ್ ಮನೆಯಲ್ಲಿ ಶಿಶಿರ್ (Shishir) ಮತ್ತು ಐಶ್ವರ್ಯ ನಡುವೆ ಒಂದು ಅತ್ಯುತ್ತಮ ಸ್ನೇಹ ಮೂಡಿದೆ ಎನ್ನುವುದು ಎಲ್ಲರಿಗೂ ತಿಳಿದೇ ಇದೆ.

ಐಶ್ವರ್ಯ ಶಿಶಿರ್ ಅವರಿಗೆ ಮಂಡಿಯೂರಿ ಗುಲಾಬಿಯನ್ನು ನೀಡಿದ್ದು, ಫ್ರೆಂಡ್ ಶಿಪ್ ಅಂದ್ರೆ ಸಂತೋಷದ ಸಮಯದಲ್ಲಿ ಮಾತ್ರ ಇರೋದಲ್ಲ. ದುಃಖದಲ್ಲಿದ್ದಾಗ ಕರೆದುಕೊಂಡು ಹೋಗುವವರು ನಿಜವಾದ ಸ್ನೇಹಿತರು. ಮಾನವೀಯ ಗುಣ ಹಾಗೂ ತುಂಬಾನೇ ಮುಖ್ಯ. ಆ ಗುಣ ಅವರಲ್ಲಿ ಇದೆ ಎಂದರು. ಇನ್ನು ಶಿಶಿರ್ ಸಹಾ ತಮ್ಮ ಸರತಿಯಲ್ಲಿ ಐಶ್ವರ್ಯಗೆ ಕೆಂಪು ಗುಲಾಬಿ ನೀಡಿ ಐಶ್ವರ್ಯ ಸ್ನೇಹವನ್ನು ಹಾಡಿ ಹೊಗಳಿದ್ದರು.

BBK 11 : ನಾಮಿನೇಷನ್ ನಲ್ಲಿ ಅಸಲಿ ಆಟ ಆಡಿ ಮನೆ ಮಂದಿಗೆ ಚಳಿ ಬಿಡಿಸಿದ ಬಿಗ್ ಬಾಸ್; ತ್ರಿವಿಕ್ರಮ್ ಗೆ ತೀವ್ರ ಮುಖ ಭಂಗ

Leave a Comment