BBK 11 : ನಾಮಿನೇಷನ್ ನಲ್ಲಿ ಅಸಲಿ ಆಟ ಆಡಿ ಮನೆ ಮಂದಿಗೆ ಚಳಿ ಬಿಡಿಸಿದ ಬಿಗ್ ಬಾಸ್; ತ್ರಿವಿಕ್ರಮ್ ಗೆ ತೀವ್ರ ಮುಖ ಭಂಗ

Written by Soma Shekar

Published on:

---Join Our Channel---

Bigg Boss Kannada : ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಸ್ಪರ್ಧಿಗಳು ಜೋಡಿಗಳಾಗಿ ವಿಂಗಡಣೆ ಆಗಿದ್ದಾರೆ. ಜೊತೆಗೆ ಅವರಿಗೆ ಹೊಸ ಹೊಸ ಟಾಸ್ಕ್ ಗಳನ್ನು ನೀಡಲಾಗುತ್ತಿದೆ. ಇದೆ ವೇಳೆ ಬಿಗ್ ಬಾಸ್ (BBK 11) ಮನೆ ಮಂದಿಗೆ ಬಂದು ಶಾಕ್ ಅನ್ನು ನೀಡಿದ್ದಾರೆ. ಅಲ್ಲದೇ ಮನೆಯವರ ವರ್ತನೆಯ ಬಗ್ಗೆ ಬಿಗ್ ಬಾಸ್ ಸಿಟ್ಟು ಮತ್ತು ಬೇಸರ ಹೊರ ಹಾಕಿರುವುದು ಬಿಗ್ ಬಾಸ್ ಮನೆಯವರಿಗೆ ಹೇಳಿದ ಮಾತುಗಳಲ್ಲಿ ಬಹಳ ಸ್ಪಷ್ಟವಾಗಿ ಕಂಡಿದೆ. ಬಿಗ್ ಬಾಸ್ ಮನೆಯ ಪ್ರಮುಖ ನಿಯಮವನ್ನೇ ಮುರಿದ ಮನೆ ಮಂದಿಗೆ ಬಿಗ್ ಬಾಸ್ ಚಾತಿಯನ್ನು ಬೀಸಿದ್ದಾರೆ.

ಕಳೆದ ವಾರ ಕ್ಯಾಪ್ಟನ್ಸಿ ಟಾಸ್ಕ್ ವಿಚಾರವಾಗಿ ತ್ರಿವಿಕ್ರಮ್ (Trivikram) ಹಾಗೂ ಮನೆಯ ಕೆಲವೊಂದು ಸದಸ್ಯರ ನಡುವೆ ನಾಮಿನೇಟ್ ವಿಚಾರದಲ್ಲಿ ಒಂದಷ್ಟು ಚರ್ಚೆಗಳು ನಡೆದಿತ್ತು. ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ವಿಚಾರವಾಗಿ ಪೂರ್ವಭಾವಿಯಾಗಿ ಮಾತನಾಡುವುದು ಅಥವಾ ಚರ್ಚಿಸುವುದು ಮೂಲ ನಿಯಮದ ಉಲ್ಲಂಘನೆಯಾಗಿರುತ್ತದೆ. ಆದರೆ ಇಂತಹ ಒಂದು ಉಲ್ಲಂಘನೆ ಮನೆಯಲ್ಲಿ ನಡೆದಿದೆ.

ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ಅವರು ಕೂಡಾ ಈ ಬಗ್ಗೆ ಮಾತನಾಡಿ, ಹೇಗೆ ತ್ರಿವಿಕ್ರಮ್ ಮತ್ತು ಉಗ್ರಂ ಮಂಜು (Ugram Manju) ಫಿಕ್ಸಿಂಗ್ ಮಾಡಿಕೊಂಡಿದ್ದರು ಎನ್ನುವ ವಿಚಾರವನ್ನು ಬಹಿರಂಗಪಡಿಸಿದರು. ಈಗ ಇದೆಲ್ಲಾ ಆದ ಮೇಲೆ ಬಿಗ್ ಬಾಸ್ ಕೂಡಾ ಕ್ಯಾಪ್ಟನ್ ಮೇಲೆ ಕಠಿಣ ಕ್ರಮವನ್ನು ಜರುಗಿಸಿದ್ದಾರೆ. ಕ್ಯಾಪ್ಟನ್ ಗೆ ಇರುತ್ತಿದ್ದ ನೇರವಾಗಿ ನಾಮಿನೇಟ್ ಮಾಡುವ ವಿಶೇಷ ಅಧಿಕಾರವನ್ನು ಕ್ಯಾಪ್ಟನ್ ನಿಂದ ಬಿಗ್ ಬಾಸ್ ಕಿತ್ತುಕೊಂಡಿದ್ದು, ತ್ರಿವಿಕ್ರಮ್ ಗೆ ಅಭಿನಂದನೆಗಳನ್ನು ಹೇಳಿದ್ದಾರೆ.

ಅಷ್ಟು ಮಾತ್ರವಲ್ಲದೇ ಮನೆಯಲ್ಲಿರುವ ಜೋಡಿಗಳಿಗೆ ಒಂದು ಜೋಡಿಯನ್ನು ನಾಮಿನೇಟ್ ಮಾಡಲು ನೇರವಾಗಿ ಚರ್ಚಿಸಿ ನಾಮಿನೇಟ್ ಮಾಡಿ ಖುಷಿಪಡುವ ಅಧಿಕಾರವನ್ನು ನೀಡಿದ್ದಾರೆ. ಈ ಮೂಲಕ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳಿಗೆ ನಾಮಿನೇಷನ್ ಕೂಡಾ ಒಂದು ಟಾಸ್ಕ್ ಆಗಿ ನೀಡಿ ಅವರನ್ನ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಬಹಿರಂಗ ಚರ್ಚೆಯ ನಾಮಿನೇಷನ್ ಏನೆಲ್ಲಾ ಜಗಳಗಳಿಗೆ ಕಾರಣವಾಗುತ್ತೆ ಕಾದು ನೋಡಬೇಕಾಗಿದೆ.

Leave a Comment