Actor Suriya: ಹಿರಿಯ ನಟನ ಮುಂದೆ ಶೋನಲ್ಲೇ ಕಣ್ಣೀರು ಹಾಕಿದ ನಟ ಸೂರ್ಯ; ಭಾವುಕರಾದ ಫ್ಯಾನ್ಸ್

Written by Soma Shekar

Published on:

---Join Our Channel---

Actor Suriya: ದಕ್ಷಿಣದ ಸ್ಟಾರ್ ನಟರಲ್ಲಿ ಒಬ್ಬರಾಗಿ, ಪ್ರತಿಭಾವಂತ ನಟನಾಗಿ ಗುರ್ತಿಸಿಕೊಂಡಿದ್ದಾರೆ ತ‌ಮಿಳು ನಟ ಸೂರ್ಯ (Actor Suriya). ತಮಿಳು ಸಿನಿಮಾ ರಂಗದಲ್ಲಿ ಮಾತ್ರವೇ ಅಲ್ಲದೇ ಈ ನಟ ತೆಲುಗಿನಲ್ಲಿಯೂ ಸಾಕಷ್ಟು ದೊಡ್ಡ ಮಟ್ಟದಲ್ಲಿ ಅಭಿಮಾನಿಗಳನ್ನು ಪಡೆದುಕೊಂಡಿರುವ ನಟ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಸೂರ್ಯ ನಾಯಕನಾಗಿ ತಮಿಳಿನಿಂದ ತೆಲುಗಿಗೆ ಡಬ್ ಆಗಿರುವ ಅವರ ಎಲ್ಲಾ ಸಿನಿಮಾಗಳು ಸಹಾ ಯಶಸ್ಸನ್ನು ಪಡೆದುಕೊಂಡಿದೆ. ಈಗ ನಟ ಬಹುನಿರೀಕ್ಷಿತ ಕಂಗುವ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.

ಕಂಗುವಾ ಸಿನಿಮಾದ ಪ್ರಚಾರ ಕಾರ್ಯದ ಭಾಗವಾಗಿ ಸಂದರ್ಶನಗಳಲ್ಲಿ ಭಾಗಿಯಾಗುತ್ತಿರುವ ನಟ ಸೂರ್ಯ ಅವರು ತೆಲುಗಿನ ಹಿರಿಯ ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರ ನಿರೂಪಣೆಯ ಅನ್ ಸ್ಟಾಪಬಲ್ ಸೀಸನ್ 4 ಕ್ಕೆ (The Unstoppable Season 4) ಆಗಮಿಸಿದ್ದರು. ಈ ವೇಳೆ ವೃತ್ತಿ ಮತ್ತು ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡ ನಟ ವೇದಿಕೆಯ ಮೇಲೆ ಭಾವುಕರಾಗಿದ್ದು ಉಂಟು.

ಸೂರ್ಯ ಅವರ ಹತ್ತು ಹಲವು ವಿಚಾರಗಳನ್ನು ಮಾತನಾಡುವಾಗ ಅವರ ಸೂರ್ಯ ಫೌಂಡೇಶನ್ ನ ಉಚಿತ ಶಿಕ್ಷಣ ಮತ್ತು ಮಕ್ಕಳ ವೀಡಿಯೋಗಳನ್ನು ಪ್ಲೇ ಮಾಡಲಾಯಿತು. ಆಗ ಆ ಹುಡುಗಿ ಹೇಳಿಕೊಂಡ ಕಷ್ಟದ ಮಾತುಗಳನ್ನ ಕೇಳಿ ಸೂರ್ಯ ಅವರು ಭಾವುಕರಾಗಿ ಕಣ್ಣೀರನ್ನು ಹಾಕಿದರು. ಶೋನಲ್ಲಿ ಸೂರ್ಯ ಅವರ ಕುರಿತಾಗಿ ಬಾಲಕೃಷ್ಣ ಅವರ ಸಹೋದರ ಕಾರ್ತಿ ಅವರ ಜೊತೆಗೂ ಒಂದಷ್ಟು ವಿಚಾರಗಳನ್ನು ಮಾತನಾಡಿದರು.

ಇದೇ ಕಾರ್ಯಕ್ರಮದಲ್ಲಿ ಸೂರ್ಯ ಅವರು ತಮ್ಮ ಪತ್ನಿ ಜ್ಯೋತಿಕಾ ಬಗ್ಗೆ ಮಾತನಾಡುತ್ತಾ, ಜ್ಯೋತಿಕಾ ಇಲ್ಲದೇ ಜೀವನವನ್ನು ಊಹೆ ಮಾಡಿಕೊಳ್ಳುವುದು ಸಾಧ್ಯವಿಲ್ಲ ಎನ್ನುವ ಮಾತನ್ನು ಸಹಾ ಹೇಳಿದ್ದಾರೆ. ಬಾಲಕೃಷ್ಣ ಅವರ ಅನ್ ಸ್ಟಾಪಬಲ್ ಸೀಸನ್ 4 ಸಿಕ್ಕಾಪಟ್ಟೆ ನಿರೀಕ್ಷೆಗಳನ್ನು ಹೊತ್ತು ತಂದಿದ್ದು, ಕಳೆದ ಮೂರು ಸೀಸನ್ ಗಳಂತೆ ಈ ಸೀಸನ್ ಕೂಡಾ ದೊಡ್ಡ ಸಕ್ಸಸ್ ಪಡೆಯಲಿದೆ ಎನ್ನುವುದು ಅಭಿಮಾನಿಗಳ ಮಾತಾಗಿದೆ.

BBK 11 : ಕ್ಯಾಪ್ಟನ್ ಆಗಿ ಬೇಸತ್ತ ಹನುಮಂತ; ಬೇರೆ ಅವ್ರಿಗೂ ಅವಕಾಶ ಕೊಡಿ ಬಿಗ್ ಬಾಸ್ ಮುಂದೆ ಹನುಮನ ಕೋರಿಕೆ

Leave a Comment