Lawyer Jagadish: ಹೆಂಡ್ತಿ ಮಕ್ಕಳ ವಿಚಾರಕ್ಕೆ ಬಂದ್ರೆ ನನ್ನ ತಾಕತ್ತು ತೋರಿಸ್ತೀನಿ: ದರ್ಶನ್ ಗೆ ಜಗದೀಶ್ ಎಚ್ಚರಿಕೆ

Written by Soma Shekar

Published on:

---Join Our Channel---

Lawyer Jagadish: ಬಿಗ್ ಬಾಸ್ (Bigg Boss) ಮನೆಯಿಂದ ಹೊರ ಬಂದು ಡಿಕೆಡಿಗೂ ಎಂಟ್ರಿ ಕೊಟ್ಟ ಲಾಯರ್ ಜಗದೀಶ್ (Lawyer Jagadish) ಅವರಿಗೆ ನಟ ದರ್ಶನ್ ಅವರ ಅಭಿಮಾನಿಗಳು ಜೀವ ಬೆದರಿಕೆಯನ್ನು ಹಾಕಿದ್ದಾರೆನ್ನಲಾಗಿದೆ. ಕೊಡಿಗೆಹಳ್ಳಿ ಠಾಣೆ ಮೆಟ್ಟಿಲೇರಿರುವ ಜಗದೀಶ್ ಅವರು ನಟ ದರ್ಶನ್ ಮತ್ತು ಅವರ ಅಭಿಮಾನಿ ರಿಷಿ ವಿರುದ್ಧ ದೂರನ್ನ ದಾಖಲು ಮಾಡಿದ್ದಾರೆ. ಅಣ್ಣಾವ್ರ ಮಕ್ಕಳಿಗೆ ನೀನು ಹೋಲಿಕೆ ಮಾಡಿಕೊಳ್ತೀಯಾ, ಅಣ್ಣಾವ್ರ ಮಕ್ಕಳ ನಿನ್ನ ತರ ಜೈಲಿಗೆ ಹೋಗಿಲ್ಲ ಅಂತ ಜಗದೀಶ್ ಗುಡುಗಿದ್ದಾರೆ.

ಅಂದು ಅಣ್ಣಾವ್ರ ಫ್ಯಾಮಿಲಿ ಬಗ್ಗೆ ಮಾತಾಡ್ತಿದ್ದೆ. ನೀನು ಮತ್ತು ನಿನ್ನ ಪಟಾಲಂ ಚಿತ್ರರಂಗವನ್ನ GPA ಮಾಡ್ಕೊಂಡಿದ್ದೀರಾ ಎಂದು ಜಗದೀಶ್ ಪ್ರಶ್ನೆ ಮಾಡಿದ್ದಾರೆ. ನಿನ್ನ ಹೆಂಡತಿಗೆ ಮೇಸೇಜ್ ಮಾಡಿದ್ರು ಅಂತ ನಿನಗೆ ಕೋಪ ಬಂತು, ಹಾಗೇ ನನ್ನ ಹೆಂಡತಿ ಮಕ್ಕಳ ವಿಚಾರಕ್ಕೆ ಬಂದ್ರೆ ನಿನಗೆ ನನ್ನ ತಾಖತ್ ಏನಂತ ತೋರಿಸ್ತೀನಿ ಅಂತ ಜಗದೀಶ್ ಚಿಟಿಕೆ ಹೊಡೆದು ದರ್ಶನ್‌ ಗೆ ಎಚ್ಚರಿಸಿದ್ದಾರೆ.

ದರ್ಶನ್​ (Darshan) ಬಗ್ಗೆ ಯಾಕ್​ ಏಕವಚನದಲ್ಲಿ ಮಾತಾಡ್ತೀಯಾ, ಮರ್ಡರ್ ಆಗ್ತೀಯಾ ಅಂತೆಲ್ಲಾ ಮೆಸೆಜ್ ಗಳು ಬರ್ತಾ ಇದೆ. ನನಗೆ ನಿತ್ಯ ಸಾವಿರಾರು ಫೋನ್​ ಗಳು ಬರ್ತಿವೆ. ದರ್ಶನ್ ಹಾಗೂ ರಚಿತಾ ರಾಮ್​ ಬಗ್ಗೆ ಮಾತಾಡ್ತೀಯಾ, ಕನ್ನಡ ಸಿನಿಮಾ ಇಂಡಸ್ಟ್ರಿಗೆ ಹೇಗೆ ಕಾಲಿಡ್ತೀಯಾ ನೋಡೋಣ ಅಂತ ಬೆದರಿಕೆ ಹಾಕ್ತಿದ್ದಾರೆ ಎಂದು ಜಗದೀಶ್ ಅವರು ಹೇಳಿದ್ದಾರೆ.

ಏಕವಚನದಲ್ಲೇ ದರ್ಶನ್​ ವಿರುದ್ಧ ವಾಗ್ದಾಳಿಯನ್ನು ನಡೆಸಿರುವ ಜಗದೀಶ್ ಅವರು ‘ಕನ್ನಡ ಇಂಡಸ್ಟ್ರಿ ಬಾಸ್ ದರ್ಶನ್ ಅಂತೆ. ಮೆಡಿಕಲ್ ಬೇಲ್​ ಮೇಲೆ ಹೊರಗೆ ಇದ್ದಾನೆ ಅವನ ಹೆಸರು ಹೇಳಿಕೊಂಡು ನನಗೆ ಧಮ್ಕಿಯನ್ನು ಹಾಕ್ತಿದ್ದಾರೆ. ಅವನೇ (ದರ್ಶನ್​) ಮಾಡಿಸ್ತಿದ್ದಾನಾ ಅಥವಾ ದರ್ಶನ್ ಫ್ಯಾನ್ಸ್ ಮಾಡ್ತಿದ್ದಾರೋ ಗೊತ್ತಿಲ್ಲ.

ನಾನು ಬಿಗ್ ಬಾಸ್ ಶೋ ಮೂಲಕ ಫೇಮಸ್​ ಆಗಿ ಈಗ ಕನ್ನಡ ಇಂಡಸ್ಟ್ರಿಗೆ ಕಾಲನ್ನು ಇಡ್ತೀರೋದು ದರ್ಶನ್ ಬೆಂಬಲಿಗರಿಗೆ ಇಷ್ಟ ಇಲ್ಲ ಅನ್ಸುತ್ತೆ.‌ ಏನೇ ಆದ್ರು ಆಗ್ಲೀ ಆಗಿ ನಾನೀಗ ಪೊಲೀಸ್ ಠಾಣೆ ಮುಂದೆ ಇದ್ದೇನೆ. ದೂರು ಕೊಡ್ತಿದ್ದೇನೆ. ಮುಂದಿನ ವಿಚಾರದ ಬಗ್ಗೆ ಕಚೇರಿಯಲ್ಲಿ ಮಾತಾಡೋಣ ಎಂದಿದ್ದಾರೆ ಲಾಯರ್ ಜಗದೀಶ್.

Leave a Comment