Salman Khan : ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಮದುವೆ ಆಗದಿದ್ದರೂ ಅವರ ಡೇಟಿಂಗ್ ವಿಚಾರಗಳು ಮಾತ್ರ ಸಖತ್ ಸುದ್ದಿ ಮಾಡಿದ್ದವು. ಆ ವಿಚಾರಗಳು ಈಗಲೂ ಆಗೊಮ್ಮೆ ಈಗೊಮ್ಮೆ ಸುದ್ದಿಯಾಗುತ್ತಲೇ ಇರುತ್ತದೆ. 1990 ರ ಅವಧಿಯಲ್ಲಿ ಸಲ್ಮಾನ್ ಖಾನ್ ಮತ್ತು ನಟಿ ಸೋಮಿ ಆಲಿ (Somy Ali) ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಆದರೆ ಅನಂತರ ಸಲ್ಮಾನ್ ರಿಂದ ಸೋಮಿ ಆಲಿ ಸಹಾ ದೂರಾದರು. ಅಲ್ಲದೇ ಈ ನಟಿ ಆಗಾಗ ಸಲ್ಮಾನ್ ಬಗ್ಗೆ ಶಾಕಿಂಗ್ ವಿಚಾರಗಳನ್ನು ತಿಳಿಸುತ್ತಲೇ ಇರುತ್ತಾರೆ.
ಸೋಮಿ ಈಗಾಗಲೇ ಸಲ್ಮಾನ್ ಮೇಲೆ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ಸಲ್ಮಾನ್ ಖಾನ್ ರಿಂದ ಸೋಮಿ ದೂರ ಆಗಿದ್ದೇಕೆ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸೋಮಿ, ಸಲ್ಮಾನ್ ಖಾನ್ ಅವರ ಒಂದಲ್ಲಾ ಎರಡಲ್ಲಾ ಎಂಟು ನೈಟ್ ಸ್ಟ್ಯಾಂಡ್ ಗಳಿಂದ ನಾನು ಅಸಹ್ಯ ಪಟ್ಟುಕೊಂಡಿದ್ದೆ. ಅವರು ನನ್ನನ್ನ ಪ್ರತಿದಿನ ನಿಂದನೆ ಮಾಡುವ ಜೊತೆಗೆ ನನ್ನನ್ನು ಹೊಡೆಯುತ್ತಿದ್ದರು ಎಂದು ಸಹಾ ಹೇಳಿದ್ದಾರೆ.
ಸಲ್ಮಾನ್ ಖಾನ್ ದೈಹಿಕವಾಗಿ ತೊಂದರೆ ನೀಡಿದ್ರಾ ಎನ್ನುವ ಪ್ರಶ್ನೆಗೆ ಕೂಡಾ ಸೋಮಿ ಹೌದು ಎನ್ನುವ ಮಾತನ್ನ ಹೇಳಿದ್ದಾರೆ. ಇನ್ನು ಸೋಮಿ ಅವರನ್ನು ಸಲ್ಮಾನ್ ಖಾನ್ ಮತ್ತು ಐಶ್ವರ್ಯ ನಡುವಿನ ಡೇಟ್ ಬಗ್ಗೆ ಸಹಾ ಪ್ರಶ್ನೆಯನ್ನು ಮಾಡಲಾಗಿದ್ದು ಸೋಮಿ ಅದಕ್ಕೂ ತನ್ನ ಉತ್ತರ ನೀಡುತ್ತಾ ಐಶ್ವರ್ಯ ರೈ (Aishwarya Rai) ತುಂಬಾ ಒಳ್ಳೆಯವರು. ಆದರೆ ಸಲ್ಮಾನ್ ಜೊತೆ ರಿಲೇಶನ್ ಶಿಪ್ ನಲ್ಲಿದ್ದಾಗ ಏನಾಯ್ತು ಅದರ ಬಗ್ಗೆ ನನಗೆ ವಿಶಾದವಿದೆ ಎಂದಿದ್ದಾರೆ.
ಸೋಮಿ ಆಲಿ ಮತ್ತು ಸಲ್ಮಾನ್ ಖಾನ್ ಸುಮಾರು ಏಳೆಂಟು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು. ಅನಂತರ ಇಬ್ಬರೂ ಬ್ರೇಕಪ್ ಮಾಡಿಕೊಂಡು ದೂರವಾದರು. ಸಲ್ಮಾನ್ ಖಾನ್ ರಿಂದ ದೂರವಾದ ಮೇಲೆ ಸೋಮಿ ನಟನ ಮೇಲೆ ಸಾಕಷ್ಟು ಆರೋಪಗಳನ್ನು ಮಾಡುತ್ತಲೇ ಬಂದಿದ್ದಾರೆ. ಸಲ್ಮಾನ್ ಖಾನ್ ರಿಂದ ತನಗೆ ಆದ ನೋವನ್ನು ನಟಿ ಈ ಹಿಂದೆಯೂ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು.
BBK 11: ಮಂಜು ವಿರುದ್ಧ ಸಿಡಿದೆದ್ದ ಮೋಕ್ಷಿತಾ, ಗೌತಮಿ; ಒಂದು ಟಾಸ್ಕ್ ನಿಂದ ಗೆಳೆತನ ಹಗೆತನ ಆಯ್ತು