Bigg Boss Kannada : ವೀಕೆಂಡ್ ಎಂದರೆ ಈಗ ಸದ್ಯಕ್ಕೆ ಕಿರುತೆರೆಯ ಪ್ರೇಕ್ಷಕರ ಗಮನ ಹೊರಡುವುದು ಬಿಗ್ ಬಾಸ್ ನ (Bigg Boss Kannada) ಕಿಚ್ಚನ ಪಂಚಾಯ್ತಿ ಕಡೆಗೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಬಿಗ್ ಬಾಸ್ ಪ್ರೇಕ್ಷಕರಂತೂ ವೀಕೆಂಡ್ ಎಪಿಸೋಡ್ ಗಾಗಿ ಕಾಯುತ್ತಿರುತ್ತಾರೆ. ಈ ಸೀಸನ್ ಆರಂಭದಲ್ಲಿ ಕಿಚ್ಚ ಜಗದೀಶ್ ಅವರಿಗೆ ವೀಕೆಂಡ್ ನಲ್ಲಿ ಕ್ಲಾಸ್ ತಗೊಂಡಿದ್ರು. ಇದಕ್ಕೆ ಕಾರಣವಾಗಿದ್ದು ಜಗದೀಶ್ ಅವರು ಬಿಗ್ ಬಾಸ್ ನ ಕೆಣಕಿದ್ದು ಮಾತ್ರವೇ ಅಲ್ಲದೇ ಬಿಗ್ ಬಾಸ್ ಗೆ ಸವಾಲನ್ನು ಹಾಕಿದ್ದರು.
ಆಗ ವೀಕೆಂಡ್ ನಲ್ಲಿ ಬಿಗ್ ಬಾಸ್ ನ ಶನಿವಾರದ ಎಪಿಸೋಡ್ ಗೆ 8.8 TVR ಸಿಕ್ಕರೆ ಭಾನುವಾರದ ಎಪಿಸೋಡ್ ಗೆ 9.2 TVR ಸಿಕ್ಕಿ ಸದ್ದು ಮಾಡಿತ್ತು. ಆದರೆ ಈಗ ಅಂದರೆ ನಾಲ್ಕನೇ ವಾರಾಂತ್ಯದ ಶನಿವಾರದ ಎಪಿಸೋಡ್ ವೀಕ್ಷಣೆಯ ವಿಚಾರದಲ್ಲಿ ಕಿರುತೆರೆಯಲ್ಲಿ ಒಂದು ಹೊಸ ದಾಖಲೆಯನ್ನೇ ಬರೆದಿದೆ. ಹೌದು ಶನಿವಾರದ ಎಪಿಸೋಡ್ ಭರ್ಜರಿ ವೀಕ್ಷಣೆಯನ್ನ ಪಡೆದುಕೊಂಡಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಗೊಂಡ ಶನಿವಾರದ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ ಕರ್ನಾಟಕದ 15+ ವೀಕ್ಷಕರ ವಿಭಾಗದಲ್ಲಿ 12.3 TVR ಅನ್ನು ಪಡೆದುಕೊಂಡಿದೆ ಎಂದು ಬಾರ್ಕ್ ತಿಳಿಸಿದೆ ಎಂಬುದಾಗಿ ಕಲರ್ಸ್ ಕನ್ನಡ ಬಾಹಿನಿ ಈ ವಿಚಾರವನ್ನು ಶೇರ್ ಮಾಡಿಕೊಂಡಿದೆ. ಅಮ್ಮನ ಅಗಲಿಕೆಯ ದುಃಖದಲ್ಲಿದ್ದ ಕಿಚ್ಚ (Kichcha Sudeep) ಮೂರನೇ ವೀಕೆಂಡ್ ನಲ್ಲಿ ಹಾಜರಾಗಿರಲಿಲ್ಲ.
ಈಗ ನಾಲ್ಕನೇ ವೀಕೆಂಡ್ ನಲ್ಲಿ ಅವರು ಹಾಜರಾಗಿದ್ದು, ಒಂದಷ್ಟು ವಿಚಾರಗಳನ್ನು ಮಾತನಾಡಿದ್ದಾರೆ. ತಮ್ಮ ನೋವನ್ನು ಮರೆತು ಮನೆ ಮಂದಿಯ ಜೊತೆಗೆ ಮಾತನಾಡಿದ್ದು ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ. ಅಲ್ಲದೇ ಶನಿವಾರದ ಎಪಿಸೋಡ್ ನಲ್ಲಿ ಹನುಮಂತನಿಗೆ ಈ ಸೀಸನ್ ನ ಮೊದಲ ಕಿಚ್ಚನ ಚಪ್ಪಾಳೆ ಸಹಾ ಸಿಕ್ಕಿದ್ದು ಮತ್ತೊಂದು ವಿಶೇಷವಾಗಿತ್ತು.
BBK 11 : ಗೌತಮಿ ಹೆಸರಿಂದ ಎದ್ದ ಗಲಾಟೆ; ಚೈತ್ರ ಅನುಷಾ ಬಿಗ್ ಫೈಟ್, ಮತ್ತೆ ಸಮರಾಂಗಣವಾದ ಬಿಗ್ ಬಾಸ್ ಮನೆ