Samantha : ಸಮಂತಾ (Samantha) ಮತ್ತು ನಾಗಚೈತನ್ಯ (Naga Chaitanya) ಅವರ ದಾಂಪತ್ಯ ಜೀವನವೊಂದು ಮುಗಿದ ಕಥೆ. ಪ್ರೀತಿಸಿ ಮದುವೆಯಾದ ಈ ಜೋಡಿ ಬೇರೆಯಾಗಿದ್ದು ದೊಡ್ಡ ಶಾಕ್ ನೀಡಿತ್ತು. ಯಾಕೆ ದೂರಾದರು ಅನ್ನೋದು ಗೊತ್ತಾಗಲೇ ಇಲ್ಲವಾದರೂ ನಾಗಚೈತನ್ಯ ಸದ್ಯಕ್ಕೆ ತಮ್ಮ ಎರಡನೇ ಮದುವೆ ಸಂಭ್ರಮದಲ್ಲಿ ಮದುವೆ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಶೀಘ್ರದಲ್ಲೇ ನಾಗಚೈತನ್ಯ ನಟಿ ಶೋಭಿತಾ ಧೂಳಿಪಾಳ ಜೊತೆಗೆ ವಿವಾಹವಾಗುತ್ತಿದ್ದಾರೆ. ಸಮಂತಾ ನಂತರ ನಟ ಶೋಭಿತಾ ಜೊತೆಯಲ್ಲಿ ಪ್ರೀತಿಯಲ್ಲಿ ಬಿದ್ದಿದ್ದಾರೆ.
ಶೋಭಿತಾ (Sobitha Dhulipala) ಮತ್ತು ನಾಗಚೈತನ್ಯ ಪ್ರೀತಿ ಈಗ ವಿವಾಹ ಬಂಧನವಾಗಿ ಬದಲಾಗಲಿದೆ. ಇವೆಲ್ಲವುಗಳ ನಡುವೆಯೇ ಸಮಂತಾ ನಾಗಚೈತನ್ಯ ಅವರಿಗೆ ಲೀಗಲ್ ನೋಟೀಸ್ ನೀಡಲಿದ್ದಾರೆನ್ನುವ ವಿಚಾರವೊಂದು ಈಗ ತೀವ್ರ ಕುತೂಹಲವನ್ನು ಮೂಡಿಸಿದೆ. ಇಷ್ಟಕ್ಕೂ ಯಾವ ಕಾರಣಕ್ಕೆ ಸಮಂತಾ ಇಂತಹುದೊಂದು ನಿರ್ಧಾರಕ್ಕೆ ಮುಂದಾಗಿದ್ದಾರೆ ತಿಳಿಯೋಣ.
ಈ ಹಿಂದೆ ಅಂದರೆ ವಿಚ್ಚೇದನಕ್ಕೂ ಮೊದಲು ನಾಗಚೈತನ್ಯ ಮತ್ತು ಸಮಂತಾ ಜೊತೆಯಾಗಿ ಒಂದು ಫ್ಲ್ಯಾಟ್ ಖರೀದಿ ಮಾಡಿದ್ದರು. ಅದರಲ್ಲಿ ಹೆಚ್ಚು ಹೂಡಿಕೆ ಮಾಡಿದ್ದವರು ಸಮಂತಾ ಎನ್ನಲಾಗಿದೆ. ಈಗ ಮದುವೆಯ ನಂತರ ನಾಗಚೈತನ್ಯ ಶೋಭಿತಾ ಜೊತೆಗೆ ಅದೇ ಫ್ಲ್ಯಾಟ್ ನಲ್ಲಿ ಇರೋದಕ್ಕೆ ಬಯಸಿದ್ದು, ಇದಕ್ಕೆ ಶೋಭಿತಾ ಒಪ್ಪಿಗೆಯನ್ನು ನೀಡಿಲ್ಲ ಎನ್ನಲಾಗಿದೆ.
ಆದರೂ ನಾಗಚೈತನ್ಯ ಆ ಫ್ಲ್ಯಾಟ್ ಅನ್ನು ತಮಗೆ ಜೋಡಿಯಾಗಲಿರುವ ಶೋಭಿತಾಗೆ ಉಡುಗೊರೆಯಾಗಿ ನೀಡಲು ಬಯಸಿದ್ದು, ಈ ಹಿನ್ನಲೆಯಲ್ಲಿ ಸಮಂತಾ ನಾಗಚೈತನ್ಯ ಅವರಿಗೆ ಲೀಗಲ್ ನೋಟೀಸ್ ಅನ್ನು ನೀಡುವ ಸಾಧ್ಯತೆಗಳಿವೆ ಎಂದೇ ಹೇಳಲಾಗುತ್ತಿದೆ. ಸಮಂತಾ ಈ ವಿಚಾರದಲ್ಲಿ ಹೇಗೆ ಪ್ರತಿಕ್ರಿಯೆ ನೀಡಲಿದ್ದಾರೆನ್ನುವುದು ಸದ್ಯಕ್ಕೆ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
Aishwarya Rai : ಬಚ್ಚನ್ ಫ್ಯಾಮಿಲಿಗೆ ಐಶ್ವರ್ಯ ಲೆಕ್ಕಕ್ಕೇ ಇಲ್ವಾ? ವದಂತಿಗಳ ನಡುವೆಯೇ ಐಶ್ವರ್ಯ ರೈಗೆ ಶಾಕ್