Bigg Boss ನಲ್ಲಿ ನನ್ನಷ್ಟು ದುರಾದೃಷ್ಟವಂತರಿಲ್ಲ, ನೋವು ಹೊರ ಹಾಕಿದ ಚೈತ್ರಾ ಕುಂದಾಪುರ ಕೊಟ್ರು ಕಾರಣ

Written by Soma Shekar

Published on:

---Join Our Channel---

Bigg Boss : ಹಿಂದೂ ಫೈರ್ ಬ್ರಾಂಡ್ ಭಾಷಣ ಕಾರ್ತಿ ಎಂಬುದಾಗಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ಚೈತ್ರ ಕುಂದಾಪುರ (Chaithra Kundapura) ಬಿಗ್ ಬಾಸ್ ಗೆ ಬರುತ್ತಿದ್ದಾರೆ ಎಂದಾಗ ಬಹಳಷ್ಟು ಸುದ್ದಿಗಳಾಗಿತ್ತು. ಬಿಗ್ ಬಾಸ್ (Bigg Boss) ಮನೆಯಲ್ಲಿ ಕೂಡಾ ಅವರ ಹವಾ ಜೋರಾಗಿರುತ್ತೆ ಅಂತ ಜನ ನಿರೀಕ್ಷೆ ಮಾಡಿದ್ರು. ಆದರೆ ಜನ ಅಂದುಕೊಂಡಂತೆ ಏನು ಆಗಿಲ್ಲ. ಬಿಗ್ ಬಾಸ್ ಮನೆಯಲ್ಲಿ ಸ್ವತಃ ಚೈತ್ರಾ ಕುಂದಾಪುರ ಅವರೇ ಈ ಮನೆಯಲ್ಲಿ ನಾನೇ ದುರಾದೃಷ್ಟವಂತೆ ಎನ್ನುವ ಮಾತುಗಳನ್ನು ಹೇಳಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಒಂದರ ನಂತರ ಮತ್ತೊಂದು ಎನ್ನುವಂತೆ ಎದುರಾಗುತ್ತಿರುವ ಸೋಲು, ಅವಮಾನ ಅವರನ್ನು ಕುಗ್ಗಿಸಿದ ಹಾಗೆ ಕಾಣುತ್ತಿದೆ. ಬಿಗ್ ಬಾಸ್ ನೀಡಿದ ಟಾಸ್ಕ್ ಒಂದರಲ್ಲಿ ಅಪರಿಚಿತರು ಮನೆಗೆ ಬಂದಾಗ ಮನೆ ಮಂದಿ ಯಾವುದೇ ಪ್ರತಿಕ್ರಿಯೆ ನೀಡದಿದ್ದರೆ ಕುಟುಂಬದ ಸದಸ್ಯರಿಂದ ಬಂದಂತಹ ಪತ್ರಗಳು ಸಿಗುತ್ತವೆ ಎಂದು ತಿಳಿಸಿದ್ದರು. ಆದರೆ ಈ ವೇಳೆ ಚೈತ್ರಾ ಅವರ ಸರದಿ ನಡೆಯುವಾಗ ಮನೆ ಮಂದಿ ಕೊಟ್ಟ ರಿಯಾಕ್ಷನ್ ನಿಂದಾಗಿ ಚೈತ್ರ ಅವರಿಗೆ ಮನೆಯವರ ಸಂದೇಶ ಸಿಗಲಿಲ್ಲ.

ಇದರಿಂದ ಸಾಕಷ್ಟು ಬೇಸರ ಮಾಡಿಕೊಂಡು ಕಣ್ಣೀರನ್ನು ಹಾಕಿದ ಚೈತ್ರಾ ಕುಂದಾಪುರ ಅವರು ತ್ರಿವಿಕ್ರಮ್ ಜೊತೆ ಮಾತನಾಡುತ್ತಾ, ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ನನ್ನಂತಹ ಅನ್ ಲಕ್ಕಿ ಇನ್ತಾರೂ ಇಲ್ಲ. ಎರಡು ಸಲ ಕ್ಯಾಪ್ಟನ್ ಆಗೋ ಅವಕಾಶ ಕೈತನಕ ಬಂದು ತಪ್ಪಿ ಹೋಯಿತು. ಶನಿವಾರ ಬಂದ್ರೆ ಸುದೀಪ್ ಸರ್ ಹತ್ರ ಬೈಸಿಕೊಳ್ತೀನಿ. ಯೋಗರಾಜ್ ಭಟ್ ಬಂದ್ರು ಅವರ ಹತ್ರನು ಬೈಸಿಕೊಳ್ಳುತ್ತೇನೆ.

ಈಗ ಮನೆಯಿಂದ ಪತ್ರ ತಪ್ಪುತ್ತದೆ. ಇಲ್ಲಿ ಒಂದೇ ಸಲ ಕಳಪೆ ಕೊಟ್ಟಿರೋದು, ಅದು ಕೂಡಾ ನನಗೆ ಸಿಕ್ಕಿದೆ. ಇಲ್ಲಿ ನನಗಿಂತ ದುರಾದೃಷ್ಟವಂತರು ಬೇರೆ ಯಾರು ಕಾಣುತ್ತಿಲ್ಲಪ್ಪ ಎಂದು ತಮ್ಮ ಬೇಸರವನ್ನು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ಕೊಟ್ಟ ತ್ರಿವಿಕ್ರಮ್, ನೀವು ಕೇವಲ ತಪ್ಪುಗಳನ್ನು ಲೆಕ್ಕ ಮಾಡ್ತಾ ಇದ್ದೀರಾ. ಒಳ್ಳೆಯದನ್ನ ನೋಡ್ತಿಲ್ಲ. ನಿಮ್ಮನ್ನು ಎಲ್ಲರೂ ಹೊಗಳಿದ್ದಾರೆ. ಅದನ್ನ ನೀವು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ಒಳ್ಳೆಯದನ್ನ ನೆನಪಿಸಿಕೊಳ್ಳಬೇಕು ಅನ್ನೋ ಮಾತುಗಳನ್ನು ಹೇಳಿದ್ದಾರೆ.

Leave a Comment