Bigg Boss ಮನೆಯಲ್ಲಿ ಅತ್ತು, ಗೋಳಾಡಿದ ಧನರಾಜ್; ನಾಲ್ಕೇ ವಾರಕ್ಕೆ ಹೀಗಾದ್ರೆ ಹೇಗೆ? ಬಿಗ್ ಬಾಸ್ ಗೆ ಏಕೆ ಬರಬೇಕಿತ್ತು ನೆಟ್ಟಿಗರ ಪ್ರಶ್ನೆ

Written by Soma Shekar

Published on:

---Join Our Channel---

Bigg Boss : ಬಿಗ್ ಬಾಸ್ (Bigg Boss) ಮನೆಯಲ್ಲಿ ಧನರಾಜ್ (Dhanraj) ಅತ್ತು ಗೋಳಾಡಿದ್ದು, ಅವರ ನೋವನ್ನು ಕಡಿಮೆ ಮಾಡಲು ಮನೆ ಮಂದಿಯೆಲ್ಲಾ ಪ್ರಯತ್ನ ಮಾಡಿದ ಘಟನೆ ನಡೆದಿದೆ. ಆದರೆ ಇದನ್ನ ನೋಡಿದ ಮೇಲೆ ಸೋಶಿಯಲ್ ಮೀಡಿಯಾಗಳಲ್ಲಿ ಇದಕ್ಕೆ ಬಹುತೇಕ ನೆಟ್ಟಿಗರು ನೆಗೆಟಿವ್ ಆಗಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ ಎನ್ನುವುದು ಸಹಾ ನಿಜವಾಗಿದೆ.

ಹೌದು, ಬಿಗ್ ಬಾಸ್ (Bigg Boss Kannada 11) ನೀಡಿದ ಹೊಸ ಟಾಸ್ಕ್ ನಲ್ಲಿ ಮನೆಯೊಳಗೆ ಯಾರೇ ಬಂದರೂ, ಏನೇ ಹೊರತು ಕಂಡರೂ ಅದಕ್ಕೆ ಪ್ರತಿಕ್ರಿಯೆ ನೀಡದೇ ಗೆದ್ದರೆ ಮನೆಯವರ ಸಂದೇಶ ಸಿಗುತ್ತೆ, ಹಾಗೆ ಮಾಡದೇ ಪ್ರತಿಕ್ರಿಯೆ ಕೊಟ್ಟರೆ ಫೌಲ್ ಆಗಿ ಅಂತಹವರಿಗೆ ಸಂದೇಶ ಸಿಗೋದಿಲ್ಲ ಎನ್ನುವ ಎಚ್ಚರಿಕೆಯನ್ನು ಸಹಾ ನೀಡಿದ್ದಾರೆ.

ಟಾಸ್ಕ್ ನಲ್ಲಿ ಧನರಾಜ್ ಅವರ ಆಟ ಫೌಲ್ ಆದ ಕಾರಣ ಅವರಿಗೆ ಸಂದೇಶ ಸಿಗಲ್ಲ ಎನ್ನುವ ಕಾರಣಕ್ಕೆ ಧನರಾಜ್ ಸಿಕ್ಕಾಪಟ್ಟೆ ಭಾವುಕರಾಗಿ ಅತ್ತು ಗೋಳಾಡಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಹೊಸ ಪ್ರಶ್ನೆಯೊಂದನ್ನು ಮಾಡಲು ತೊಡಗಿದ್ದಾರೆ. ಕೆಲವೇ ದಿನಗಳ ಹಿಂದೆ ಫೋನ್ ಟಾಸ್ಕ್ ವೇಳೆ ಧನರಾಜ್ ಪತ್ನಿ ಜೊತೆ ಒಂದಷ್ಟು ಮಾತನಾಡಿದ್ದರು.

ಅದಾಗಿ ಇನ್ನೂ ಹೆಚ್ಚು ದಿನಗಳು ಕಳೆದಿಲ್ಲ ಆಗಲೇ ಮನೆಯವರ ಸಂದೇಶ ಸಿಗಲಿಲ್ಲವೆಂದು ಇಷ್ಟು ನೊಂದುಕೊಳ್ಳುವುದಾದರೆ ಬಿಗ್ ಬಾಸ್ ಗೆ ಏಕೆ ಬರಬೇಕಾಗಿತ್ತು. ನಾಲ್ಕು ವಾರದಲ್ಲಿ ಎರಡೆರಡು ಸಲ ಮನೆಯವರ ಸಂದೇಶ ಬೇಕು ಅನ್ನೋದಾದ್ರೆ ಇದೆಂತಾ ಬಿಗ್ ಬಾಸ್ ಆಟ ಆಗುತ್ತೆ, ಧನರಾಜ್ ಅವರದ್ದು ಯಾಕೋ ಅತಿಯಾಯ್ತು ಎಂದು ಹೇಳುತ್ತಿದ್ದಾರೆ.

Puttakkana Makkalu ಪುಟ್ಟಕ್ಕನ ಗೋಳು ನೋಡೋಕಾಗ್ತಿಲ್ಲ, ಕಡೆ ಪಕ್ಷ ಆ ಸತ್ಯ ಆದ್ರು ಹೇಳಿ ಅಂತ ವೀಕ್ಷಕರ ಅಸಮಾಧಾನ

Leave a Comment