Yash Radhika : ರಾಕಿಂಗ್ ಸ್ಟಾರ್ ಯಶ್ ಮತ್ತು ಅವರ ಪತ್ನಿ ರಾಧಿಕಾ ಪಂಡಿತ್ (Yash Radhika) ಆಗಾಗ ಮಾದ್ಯಮಗಳ ಪ್ರಮುಖ ಸುದ್ದಿಗಳಲ್ಲಿ ಇರುತ್ತಾರೆ. ಈ ದಂಪತಿ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡುವ ಫೋಟೋಗಳು ಅಥವಾ ವೀಡಿಯೋಗಳು ಭರ್ಜರಿಯಾಗಿ ವೈರಲ್ ಆಗುತ್ತವೆ ಮತ್ತು ಅಭಿಮಾನಿಗಳ ಮೆಚ್ಚುಗೆಗಳನ್ನು ಸಹಾ ಪಡೆದುಕೊಳ್ಳುತ್ತವೆ.
ಇದೀಗ ರಾಧಿಕಾ ಮತ್ತು ಯಶ್ ದಂಪತಿ ತಮ್ಮ ಮಗ ಯಥರ್ವ್ (Yatharv) ಬರ್ತಡೇಯನ್ನು ಬಹಳ ಖುಷಿಯಿಂದ ಸಂಭ್ರಮಿಸಿದ್ದಾರೆ. ನಿನ್ನೆ ಯಥರ್ವ್ ಐದನೇ ವರ್ಷಕ್ಕೆ ಅಡಿಯಿಟ್ಟಿದ್ದು ರಾಧಿಕಾ ಅವರು ಮಗನಿಗೆ ಬಹಳ ವಿಶೇಷವಾಗಿ ಜನ್ಮದಿನದ ಶುಭಾಶಯವನ್ನು ಹೇಳಿದ್ದಾರೆ. ನಟಿಯು ಒಂದು ಸುಂದರ ವೀಡಿಯೋ ಶೇರ್ ಮಾಡಿಕೊಂಡು ವಿಶ್ ಮಾಡಿದ್ದಾರೆ.
ಮಗನ ಬರ್ತಡೇ ಸೆಲೆಬ್ರೇಷನ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಟಗರು ಬಂತು ಟಗರು ಹಾಡಿಗೆ ಸಖತ್ ಸ್ಟೆಪ್ ಗಳನ್ನು ಹಾಕಿ ಡ್ಯಾನ್ಸ್ ಮಾಡಿದ್ದಾರೆ. ರಾಧಿಕಾ ಸಹಾ ಮಗನನ್ನು ಎತ್ತಿಕೊಂಡು ಯಶ್ ಅವರಿಗೆ ಡ್ಯಾನ್ಸ್ ನಲ್ಲಿ ಸಾಥ್ ನೀಡಿದ್ದಾರೆ. ಪ್ರತಿವರ್ಷ ಸಹಾ ರಾಧಿಕಾ ಪಂಡಿತ್ ಅವರು ತಮ್ಮ ಮಕ್ಕಳ ಜನ್ಮದಿನವನ್ನು ಬಹಳ ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ.
ನಿನ್ನೆ ನಟಿ ರಾಧಿಕಾ ಪಂಡಿತ್ ಅವರು ಮಗನ ಕ್ಯೂಟ್ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದು, ಹ್ಯಾಪಿ ಬರ್ತ್ ಡೇ ಮೈ ಸನ್ಶೈನ್ ಎಂದು ರಾಧಿಕಾ ಪಂಡಿತ್ ಬರೆದು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆಗಳನ್ನು ನೀಡಿದ ಅನೇಕ ಮಂದಿ ಜನ್ಮದಿನದ ಶುಭಾಶಯವನ್ನು ತಿಳಿಸಿದ್ದಾರೆ.
Bigg Boss ಮನೇಲಿ ಬಿಗ್ ಫೈಟ್; ನಿಮ್ಮ ಯೋಗ್ಯತೆ ಏನು? 10 ರೂಪಾಯಿ ಹಾಕ್ತೀನಿ, ಉಗ್ರಂ ಮಂಜು ಮೇಲೆ ಭವ್ಯ ಫೈರ್