Samantha : ಹನಿ ಬನಿ ವೆಬ್ ಸೀರೀಸ್ ನವೆಂಬರ್ ಏಳರಂದು ಅಮೆಜಾನ್ ಪ್ರೈಮ್ ನಲ್ಲಿ ಸ್ಟ್ರೀಮಿಂಗ್ ಆರಂಭ ಮಾಡಲಿದ್ದು, ಈ ಹಿನ್ನೆಲೆಯಲ್ಲಿ ಈ ವೆಬ್ ಸೀರೀಸ್ ನಲ್ಲಿ ನಾಯಕಿಯಾಗಿರುವ ಸಮಂತಾ ಜೊತೆಗೆ ನಿರ್ದೇಶಕರಾದ ರಾಜ್ ಮತ್ತು ಡಿಕೆ (Raj & DK) ಅವರ ಸಂದರ್ಶನಗಳು ನಡೆಯುತ್ತಿದೆ. ಸಂದರ್ಶನದ ಸಂದರ್ಭದಲ್ಲಿ ನಟಿ ಸಮಂತಾ ಎದುರಿಸಿದ ಸಂಕಷ್ಟಗಳನ್ನು ಕುರಿತಾಗಿ ನಿರ್ದೇಶಕರು ಒಂದಷ್ಟು ವಿಚಾರಗಳನ್ನು ತಿಳಿಸಿದ್ದಾರೆ.
ನಟಿ ಸಮಂತಾ (Samantha) ಕೂಡಾ ಪತ್ರಕರ್ತರ ಪ್ರಶ್ನೆಗಳಿಗೆ ತಾಳ್ಮೆ ಮತ್ತು ಸಂಯಮದಿಂದ ಉತ್ತರವನ್ನು ನೀಡಿದ್ದಾರೆ. ಈ ವೇಳೆ ಪತ್ರಕರ್ತರು ನಟಿಯ ಎರಡನೇ ವಿಚಾರವನ್ನು ಕೇಳಿದಾಗ, ಸಮಂತಾ ತುಂಬಾ ಪ್ರೀತಿಸಿ ಮದುವೆಯಾಗಿದ್ದ ವ್ಯಕ್ತಿಯಿಂದ ಈಗ ಬೇರೆಯಾಗಿದ್ದೇನೆ. ಎರಡನೇ ಮದುವೆ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ನನ್ನ ಜೀವನದಲ್ಲಿ ಯಾರೂ ಇರಬಾರದೆಂದು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.
ಸಂದರ್ಶನದಲ್ಲಿ ಸಮಂತಾ ಹೇಳಿದ ಮಾತುಗಳಿಗೆ ಸಾಕಷ್ಟು ಮೆಚ್ಚುಗೆಗಳು ಹರಿದು ಬರುತ್ತಿದೆ. ನಾಗಚೈತನ್ಯರಿಂದ (Nagachaitanya) ಬೇರೆಯಾದ ಮೇಲೆ ಕೆಲವೇ ವರ್ಷಗಳಲ್ಲಿ ನಾಗಚೈತನ್ಯ ಶೋಭಿತಾ ಧೂಳಿಪಾಳ ಜೊತೆಗೆ ಮದುವೆಗೆ ಸಿದ್ಧರಾಗಿದ್ದಾರೆ. ಆದರೆ ಪ್ರೀತಿ ಮತ್ತು ಮದುವೆಯನ್ನು ಮನಸ್ಸಿನಿಂದ ದೂರ ಮಾಡಲಾಗದೆ ಸಮಂತಾ ಇನ್ನೂ ಒಂಟಿಯಾಗಿ ಉಳಿದಿದ್ದಾರೆ.
ಸಮಂತಾ ಮಾನಸಿಕವಾಗಿ ಬಹಳ ಕುಗ್ಗಿ ಹೋಗಿದ್ದಾರೆ ಎಂದೆಲ್ಲಾ ನೆಟ್ಟಿಗರು ಕಾಮೆಂಟ್ ಗಳನ್ನು ಮಾಡುವ ಮೂಲಕ ಸಮಂತಾ ಬಗ್ಗೆ ಸಹಾನುಭೂತಿಯನ್ನು ಸೂಚಿಸಿದ್ದಾರೆ. ನಾಗಚೈತನ್ಯ ಮತ್ತು ಸಮಂತಾ ಯಾವ ಕಾರಣದಿಂದ ದೂರಾದರೆನ್ನುವ ವಿಚಾರ ಇಂದಿಗೂ ಹೊರ ಬಂದಿಲ್ಲ. ಈ ಬಗ್ಗೆ ನಾಗ ಚೈತನ್ಯ ಅಥವಾ ಸಮಂತಾ ಎಲ್ಲೂ ಮಾತನಾಡಿಲ್ಲ.
Bigg Boss ಮನೆಯಲ್ಲಿ ಕ್ಯಾಪ್ಟನ್ ಹನುಮಂತನ ಮೇಲೆ ತಿರುಗಿ ಬಿದ್ದ ಮೂವರು ಸ್ಪರ್ಧಿಗಳು; ನಾಮಿನೇಷನ್ ಹಚ್ಚಿದ ಕಿಚ್ಚು