Bigg Boss : ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss) ಅದ್ಯಾಕೋ ಆರಂಭದಿಂದಲೂ ಮನೆಯಲ್ಲಿ ನಡೀತೀರೋ ಜಗಳಗಳಿಂದಲೇ ಸುದ್ದಿಯಾಗುತ್ತಿದೆ. ಈಗ ಇವೆಲ್ಲವುಗಳ ನಡುವೆ ಮನೆಯ ಸ್ಪರ್ಧಿಯಾಗಿರುವ ಮೋಕ್ಷಿತಾ ಪೈ (Mokshita Pai) ಅವರು ತ್ರಿವಿಕ್ರಮ್ ಬಗ್ಗೆ ಹೇಳಿರುವ ವಿಚಾರವೊಂದು ಚರ್ಚೆಯ ವಿಷಯವಾಗಿ ಬದಲಾಗಿದೆ. ಬಿಗ್ ಬಾಸ್ ಮನೆಗೆ ಬರುವ ಸ್ಪರ್ಧಿಗಳು ಯಾರಯ ಎನ್ನುವುದು ಅಧಿಕೃತವಾಗಿ ಘೋಷಣೆ ಆಗುವುದು ಗ್ರ್ಯಾಂಡ್ ಓಪನಿಂಗ್ ದಿನ.
ಬಿಗ್ ಬಾಸ್ ಆರಂಭಕ್ಕೂ ಮೊದಲು ಒಂದಷ್ಟು ಸ್ಪರ್ಧಿಗಳ ಹೆಸರು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆದರೂ ಕೂಡಾ ಅದನ್ನು ಅಧಿಕೃತ ಎಂದು ಹೇಳಲಾಗುವುದಿಲ್ಲ. ಅದು ಮಾತ್ರವೇ ಅಲ್ಲದೇ ಬಿಗ್ ಬಾಸ್ ಮನೆಗೆ ಹೋಗುವ ಸ್ಪರ್ಧಿಗಳಿಗೂ ಸಹಾ ಯಾರೆಲ್ಲಾ ಅನ್ಯ ಸ್ಪರ್ಧಿಗಳಾಗಿ ಬರ್ತಾರೆ ಅನ್ನೋದು ಗೊತ್ತಿರೋದಿಲ್ಲ. ಇದು ಬಿಗ್ ಬಾಸ್ ಆಟದ ಬಹಳ ಮುಖ್ಯವಾದ ನಿಯಮವಾಗಿದೆ.
ಆದರೆ ತ್ರಿವಿಕ್ರಮ್ ಗೆ (Trivikram) ಬಿಗ್ ಬಾಸ್ ಮನೆಗೆ ಬರುವ ಸ್ಪರ್ಧಿಗಳ ಪಟ್ಟಿ ಮೊದಲೇ ಸಿಕ್ಕಿತ್ತಂತೆ. ಈ ಮಾತನ್ನು ಖುದ್ದು ಅವರೇ ಹೇಳಿದ್ದಾರೆ ಎನ್ನುವ ಆರೋಪ ಈಗ ಕೇಳಿ ಬಂದಿದ್ದು, ತ್ರಿವಿಕ್ರಮ್ ತಾನು ಲಿಸ್ಟ್ ಬಂದ್ಮೇಲೆ ಓಕೆ ಹೇಳಿದ್ದು ಎನ್ನುವ ಮಾತನ್ನು ತ್ರಿವಿಕ್ರಮ್ ಹೇಳಿದ್ದಾರೆನ್ನುವುದು ಈಗ ಕೆಲವರು ತ್ರಿವಿಕ್ರಮ್ ಮೇಲೆ ಮಾಡಿರುವ ಆರೋಪವಾಗಿದೆ.
ತ್ರಿವಿಕ್ರಮ್ ಈ ಮಾತು ಹೇಳಿದ್ದಾರೆ ಎನ್ನುವುದು ಗೌತಮಿ (Gowtami Jadhav) ಮತ್ತು ಮೋಕ್ಷಿತಾ ಅವರ ಆರೋಪವಾಗಿದೆ. ಒಂದು ವೇಳೆ ಈ ಮಾತು ನಿಜವೇ ಆದಲ್ಲಿ ತ್ರಿವಿಕ್ರಮ್ ಬಿಗ್ ಬಾಸ್ ಮನೆಯ ದೊಡ್ಡ ನಿಯಮವನ್ನೇ ಮುರಿದ ಹಾಗೆ ಆಗುತ್ತೆ. ಅದೇ ವೇಳೆ ಬಿಗ್ ಬಾಸ್ ಬಗ್ಗೆಯೂ ಅನುಮಾನ ಹುಟ್ಟಿಕೊಳ್ಳುತ್ತದೆ. ಈ ಬಗ್ಗೆ ವೀಕೆಂಡ್ ನಲ್ಲಿ ಕ್ಲಾರಿಟಿ ಸಿಗುತ್ತಾ ಕಾದು ನೋಡಬೇಕಾಗಿದೆ.
Bigg Boss Kannada ಹನುಮಂತನ ಗದರಿ ಟ್ರೋಲ್ ಆಗ್ತಿದ್ದಾರೆ ಮೋಕ್ಷಿತಾ; ಅಮಾಯಕನ ಮೇಲೆ ಕೋಪ ಅಗತ್ಯ ಇತ್ತಾ