Bigg Boss Kannada ಹನುಮಂತನ ಗದರಿ ಟ್ರೋಲ್ ಆಗ್ತಿದ್ದಾರೆ ಮೋಕ್ಷಿತಾ; ಅಮಾಯಕನ ಮೇಲೆ ಕೋಪ ಅಗತ್ಯ ಇತ್ತಾ

Written by Soma Shekar

Published on:

---Join Our Channel---

Bigg Boss Kannada : ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada) ರಲ್ಲಿ ಆರಂಭದಿಂದಲೂ ಬಹಳ ಮೌನವಾಗಿ, ಶಾಂತವಾಗಿ ಇದ್ದ ಮೋಕ್ಷಿತಾ ಪೈ (Mokshita Pai) ಅವರು ನಾಲ್ಕನೇ ವಾರದಲ್ಲಿ ವೈಲೆಂಟ್ ಆಗಿದ್ದಾರೆ. ಮನೆಯಲ್ಲಿ ತ್ರಿವಿಕ್ರಮ್ ಗೆ (Trivikram) ಈಗಾಗಲೇ ಸವಾಲನ್ನು ಸಹಾ ಹಾಕಿದ್ದಾರೆ. ಆದರೆ ಇವೆಲ್ಲವುಗಳ ನಡುವೆ ನಾಲ್ಕು ವಾರಗಳಿಂದಲೂ ಅಷ್ಟಾಗಿ ಟ್ರೋಲ್ ಆಗದ ಮೋಕ್ಷಿತಾ ಈಗ ಒಂದು ಮಾತಿನಿಂದಾಗಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ.

ಹಂಸ (Hamsa) ಹಾಗೂ ಮೋಕ್ಷಿತಾ (Mokshitha) ಅವರು ಬಾಟಮ್ ಟು ನಲ್ಲಿ ಇದ್ದಾರೆ ಅನ್ನೋದು ಘೋಷಣೆ ಆಗಿತ್ತು. ಈ ವೇಳೆ ಮೋಕ್ಷಿತಾ ತ್ರಿವಿಕ್ರಮ್ ಗೇಮ್ ಪ್ಲಾನ್ ಬಗ್ಗೆ ತನ್ನದೇ ಲೆಕ್ಕಾಚಾರ ಹಾಕಿ, ಯಾರೆಲ್ಲಾ ತನ್ನನ್ನ ಟಾರ್ಗೆಟ್ ಮಾಡಿದ್ದಾರೆಂದು ಆಲೋಚಿಸಿ ಸ್ವಲ್ಪ ಸಿಟ್ಟಿನಲ್ಲಿ ಇದ್ದರು. ಅಲ್ಲದೇ ಉಗ್ರಂ ಮಂಜು, ಮೋಕ್ಷಿತಾ ಮತ್ತು ಗೌತಮಿ ಅವರು ಒಂದು ಗಹನವಾದ ಚರ್ಚೆಯಲ್ಲಿ ತೊಡಗಿದ್ದರು.

ಈ ವೇಳೆ ಆಕಸ್ಮಿಕವಾಗಿ ಹನುಮಂತು ಅವರು ಮೂವರು ಚರ್ಚೆಯಲ್ಲಿ ತೊಡಗಿದ್ದ ಜಾಗಕ್ಕೆ ಬಂದರು. ಕೂಡಲೇ ಮೋಕ್ಷಿತಾ ಹನುಮಂತುನ ಗದರುತ್ತಾ, ಹನುಮಂತು ನಾವಿಲ್ಲಿ ಮಾತಾಡ್ತಾ ಇದ್ದೀವಿ ಆಮೇಲೆ ಬನ್ನಿ ಎಂದು ಬಿಟ್ಟರು. ಹನುಮಂತು (Hanumanta) ಕೂಡಾ ಸರಿ ಅಕ್ಕ ಅಂತಾನೇ ಹೇಳಿ ಅಲ್ಲಿಂದ ದೂರ ಹೊರಟು ಹೋದರು. ಮೋಕ್ಷಿತಾ ಅವರ ಈ ನಡೆ ಅನೇಕರಿಗೆ ಇಷ್ಟವಾಗಿಲ್ಲ.

ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಮೋಕ್ಷಿತಾ ಮಾಡಿದ್ದು ಖಂಡಿತ ಸರಿ ಇಲ್ಲ. ‌ಹೇಳೋದಕ್ಕೂ ಒಂದು ವಿಧಾನ ಇರುತ್ತೆ. ನಿಮ್ಮ ಅಸಮಾಧಾನ ಮತ್ತು ಸಿಟ್ಟನ್ನು ಇನ್ಯಾರ ಮೇಲೋ ಹೀಗೆ ತೋರಿಸೋದು ಸರಿಯಲ್ಲ. ಅಸಲಿಗೆ ಹನುಮಂತನ ಮೇಲೆ ಹಾಗೆ ರೇಗುವ ಅವಶ್ಯಕತೆಯೇ ಇರ್ಲಿಲ್ಲ ಎಂದೆಲ್ಲಾ ತಮ್ಮ ಅಸಮಾಧಾನವನ್ನು ಹೊರ ಹಾಕ್ತಿದ್ದಾರೆ.

Puttakkana Makkalu ಸ್ನೇಹ ಸಾವಾಯ್ತು, ಮುಂದೆ ಬೇರೆ ಪಾತ್ರಗಳು ಸೀರಿಯಲ್ ಬಿಟ್ರೆ ಆಗ ? ವೀಕ್ಷಕರ ಹೊಸ ಅನುಮಾನ

Leave a Comment