Bigg Boss Kannada : ಬಿಗ್ ಬಾಸ್ ಮನೆಯಲ್ಲಿ (Bigg Boss Kannada) ಐಶ್ವರ್ಯ ಕಣ್ಣೀರನ್ನು ಹಾಕಿದ್ದಾರೆ. ಐಶ್ವರ್ಯ ಬಿಗ್ ಬಾಸ್ ಮನೆಯಲ್ಲಿ ಈ ಹಿಂದೆ ಸಹಾ ಕಣ್ಣೀರನ್ನು ಹಾಕಿದ್ದರು. ಆದರೆ ಈ ಬಾರಿ ಅವರು ಕಣ್ಣೀರು ಹಾಕಿದ್ದು ಏಕೆ ಎನ್ನುವ ವಿಚಾರವನ್ನು ಈ ಹಿಂದೆ ಎಲ್ಲೂ ಸಹಾ ಹೇಳಿಕೊಂಡಿರಲಿಲ್ಲ. ಐಶ್ವರ್ಯ ಅವರು ಸಣ್ಣ ವಯಸ್ಸಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡಿದ್ದಾರೆ.
ಪಾಲಕರನ್ನು ಕಳೆದುಕೊಂಡ ದುಃಖ ಅವರನ್ನು ಸದಾ ಕಾಡುತ್ತಲೇ ಇದೆ. ಐಶ್ವರ್ಯ ಅವರು ತಮ್ಮ ಈಗಿನ ಅಳುವಿಗೆ ಕಾರಣವೇನೆಂದು ಹೇಳಿಕೊಂಡಿರಲಿಲ್ಲ. ನಂತರ ಶಿಶಿರ್ ಬಳಿ ಅವರ ಬಳಿ ಅದನ್ನ ರಿವೀಲ್ ಮಾಡಿದ್ದರು ಐಶ್ವರ್ಯ. ನನಗೆ ನನ್ನ ಹಳೆಯ ಬಾಯ್ ಫ್ರೆಂಡ್ ನೆನಪಿಗೆ ಬಂದು. ಬ್ರೇಕಪ್ ಆಗಿ ಆರು ತಿಂಗಳಾಯ್ತೆಂದು ಐಶ್ವರ್ಯ ಹೇಳಿದ್ದಾರೆ.
ನಂತರ ಶಿಶಿರ್ (Shishir) ಅವರು ಐಶ್ವರ್ಯ ಅವರನ್ನು ಸಮಾಧಾನ ಮಾಡಲು ಪ್ರಾರಂಭ ಮಾಡಿದರು. ಶಿಶಿರ್ ಪ್ರಯತ್ನ ಮಾಡಿದರೂ ಐಶ್ವರ್ಯ ಸಮಾಧಾನಗೊಳ್ಳಲಿಲ್ಲ. ನಿಮಗೆಲ್ಲಾ ಮನೆಯಿಂದ ಡ್ರೆಸ್ ಕಳಿಸ್ತಾರೆ ಆಗ ನನಗೆ ಒಂತರಾ ಆಗುತ್ತೆ. ಐಶ್ವರ್ಯ ಅವರಿಗೆ ಡ್ರೆಸ್ ಕಳಿಸೋದು ಅವರ ಸ್ನೇಹಿತರು ಎನ್ನಲಾಗಿದೆ.
ಅವರಿಗೆ ಮನೆಯಲ್ಲಿ ಯಾರೂ ಇಲ್ಲ. ಐಶ್ವರ್ಯ (Aishwarya) ಅವರು ಭಾವುಕರಾಗಿದ್ದನ್ನ ನೋಡಿದ ಶಿಶಿರ್ ಸಮಾಧಾನ ಮಾಡುತ್ತಾ, ನಾನು ಹೊರಗಡೆ ಹೋಗಿ ನಿನಗೆ ಬಟ್ಟೆ ಕಳಿಸ್ಲಾ ಅಂತ ಕೇಳಿದ್ದಾರೆ. ಈ ಮಾತಿಗೆ ಐಶ್ವರ್ಯ ಉತ್ತರ ಕೊಡ್ತಾ ಬೇಡ ಎಂದು ಹೇಳಿದ್ದಾರೆ.