Bigg Boss 11 : ಬಿಗ್ ಬಾಸ್ (Bigg Boss 11) ಮನೆಯಲ್ಲಿ ಮೋಕ್ಷಿತಾ ಪೈ (Mokshita Pai) ಮತ್ತು ತ್ರಿವಿಕ್ರಮ್ (Trivikram) ನಡುವೆ ಒಂದು ಮನಸ್ತಾಪ ಮೊದಲಿನಿಂದಲೂ ಇದೆ. ಆದರೆ ಅದು ಈಗ ನಾಲ್ಕನೇ ವಾರದಲ್ಲಿ ಜ್ವಾಲಾಮುಖಿಯಾಗಿ ಹೊರ ಬಿದ್ದಿದೆ. ಸದಾ ಶಾಂತವಾಗಿ ಇರ್ತಾ ಇದ್ದ ಮೋಕ್ಷಿತಾ ಅವರು ತ್ರಿವಿಕ್ರಮ್ ಮೇಲೆ ಫೈರ್ ಆಗಿದ್ದಾರೆ. ಇಬ್ಬರ ನಡುವೆ ದೊಡ್ಡ ಮಾತಿನ ಚಕಮಕಿಯೇ ನಡೆದಿದೆ.
ನಾಮಿನೇಷನ್ ಅಂತ ಬಂದಾಗ ತ್ರಿವಿಕ್ರಮ್ ಅವರ ಆಯ್ಕೆ ಮೋಕ್ಷಿತಾ ಆಗಿರ್ತಾರೆ. ಅಲ್ಲದೇ ಎಲಿಮಿನೇಟ್ ಆಗೋರಿಗೋ ಕೊಟ್ಟ ವಿಶೇಷ ಅಧಿಕಾರದಲ್ಲಿ ಮೋಕ್ಷಿತಾ ತ್ರಿವಿಕ್ರಮ್ ನ ನೇರವಾಗಿ ನಾಮಿನೇಟ್ ಮಾಡಿದ್ದಾರೆ. ತ್ರಿವಿಕ್ರಮ್ ಅವರಿಗೆ ಬೇಕಾಗಿರೋರನ್ನ ಉಳಿಸಿಕೊಳ್ತಿದ್ದಾರೆ ಎಂದು ಹೇಳಿದ್ದಾರೆ.
ಈಗ ಉಗ್ರಂ ಮಂಜು ಮತ್ತು ತ್ರಿವಿಕ್ರಮ್ ನಡುವೆ ನಡೆದಿದ್ದ ಮಾತುಕತೆಯ ವಿಚಾರವಾಗಿ ಮೋಕ್ಷಿತಾ ರಾಂಗ್ ಆಗಿದ್ದಾರೆ. ಈ ಹಿಂದೆ ತ್ರಿವಿಕ್ರಮ್ ಉಗ್ರಂ ಮಂಜುಗೆ ಅಣ್ಣ ಇವರೆಲ್ಲ 10 ವಾರಕ್ಕೆ ಬಂದವ್ರು. 10 ವಾರ ಇದ್ದು ಹೋಗ್ತಾರೆ ಅಂತ ಹೇಳಿದ್ದ ಮಾತು ಈಗ ಮೋಕ್ಷಿತಾಗೆ ಗೊತ್ತಾಗಿದೆ.
ನಾನು ಹತ್ತು ವಾರಕ್ಕೆ ಆಡೋಕೆ ಬಂದಿಲ್ಲ, ಅದನ್ನ ಡಿಸೈಡ್ ಮಾಡೋಕೆ ನೀವ್ಯಾರು? ನೀವು ಗೋಮುಖ ವ್ಯಾಘ್ರದ ತರ ಆಟ ಆಡ್ತಿದ್ದೀರಾ? ಯಾರು ಯಾರು ಈ ಮನೇಲಿ ಹತ್ತು ವಾರದವರು ಅಂತ ನೋಡೇ ಬಿಡ್ತೀನಿ ಅಂತ ತ್ರಿವಿಕ್ರಿಮ್ ಗೆ ಸವಾಲೆಸೆದ ಮೋಕ್ಷಿತಾ, ಇನ್ಮೇಲೆ ಆಟ ಶುರು ಅಂತ ಹೇಳಿದ್ದಾರೆ.