Bigg Boss Kannada ಎಲ್ಲರ ಊಹೆ ನಿಜವಾಯ್ತು; ಅದೇ ಸ್ಪರ್ಧಿ ಮನೆಯಿಂದ ಹೊರಗೆ ಬಂದಾಯ್ತು, ಬಹಳಷ್ಟು ಜನಕ್ಕೆ ಖುಷಿ ಆಯ್ತು

Written by Soma Shekar

Published on:

---Join Our Channel---

Bigg Boss Kannada : ಬಿಗ್ ಬಾಸ್ (Bigg Boss Kannada) ಕನ್ನಡ ಸೀಸನ್ ಆರಂಭವಾಗಿ ನಾಲ್ಕು ವಾರಗಳು ಕಳೆದಿದೆ. ನಾಲ್ಕನೇ ವಾರದಲ್ಲಿ ದೊಡ್ಮನೆಯಿಂದ ಯಾರು ಹೊರಗೆ ಬರಲಿದ್ದಾರೆ ಎನ್ನುವುದಕ್ಕೆ ವೀಕ್ಷಕರು ಸಹಾ ಬಹಳ ಕುತೂಹಲದಿಂದ ಕಾಯುತ್ತಿದ್ದರು. ಕಳೆದ ವಾರ ಯಾವುದೇ ಎಲಿಮಿನೇಷನ್ ನಡೆದಿರಲಿಲ್ಲ. ಆದರೆ ನಾಲ್ಕನೇ ವಾರದಲ್ಲಿ ಮನೆಯಿಂದ ಒಬ್ಬರು ಹೊರ ಬಂದಿದ್ದಾರೆ.

ಆಟ ಮುಂದುವರೆಯುತ್ತಿದ್ದಂತೆ ಮನೆಯಿಂದ ಒಬ್ಬೊಬ್ಬರೇ ಬಿಗ್ ಬಾಸ್ (Bigg Boss) ಟ್ರೋಫಿಗೆ ದೂರವಾಗೋದು ಸಾಮಾನ್ಯ. ಈ ವಾರ ಮನೆಯಿಂದ ಹೊರಗೆ ಬರಲು ಭವ್ಯ, ಚೈತ್ರ, ಗೌತಮಿ, ಹಂಸ, ಮಂಜು, ಮಾನಸ, ಮೋಕ್ಷಿತಾ, ಶಿಶಿರ್ ಮತ್ತು ಗೋಲ್ಡ್‌ ಸುರೇಶ್ ನಾಮಿನೇಟ್ ಆಗಿದ್ದರು.

ಇವರುಗಳಲ್ಲಿ ಈ ವಾರ ಒಬ್ಬರು ಮನೆಯಿಂದ ಹೊರಗೆ ಬರುವುದು ಖಚಿತವಾಗಿದೆ. ಕೆಲವೊಂದು ಸುದ್ದಿಗಳ ಪ್ರಕಾರ ಈ ವಾರ ಮಾನಸ ಅವರು ಅತಿ ಕಡಿಮೆ ಓಟುಗಳನ್ನು ಪಡೆದಿದ್ದು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ ಎನ್ನಲಾಗಿದೆ. ಸೋಶಿಯಲ್ ಮೀಡಿಯಾಗಳಲ್ಲೂ ಅನೇಕರು ಮಾನಸ ಹೊರಗೆ ಬರಬೇಕೆಂದೇ ಹೇಳುತ್ತಿದ್ದರು.

ಬಿಗ್ ಬಾಸ್ ಮನೆಯಲ್ಲಿ ಮಾನಸ (Manasa) ಅವರು ಟಾಸ್ಕ್ ಅಥವಾ ಮನರಂಜನೆ ಎನ್ನುವುದಕ್ಕಿಂತ ಹೆಚ್ಚು ಸುದ್ದಿ ಮಾಡುತ್ತಿರುವುದು ಜಗಳಗಳಿಂದಲೇ ಆಗಿದೆ. ಮಾನಸ ಅವರು ತನ್ನದಲ್ಲದ ವಿಚಾರಗಳಲ್ಲೂ ಮಾತಿಗೆ ಮಾತು ಬೆಳೆಸುತ್ತಾರೆ ಎನ್ನುವುದು ಅನೇಕರ ಮಾತಾಗಿದೆ.

Leave a Comment