Bigg Boss ಮನೇಲಿ ಪೆದ್ದನ ತರ ಆಡೋದನ್ನ ನಿಲ್ಸು: ಹನುಮಂತನ ಮೇಲೆ ಸಿಟ್ಟಾದ ವೀಕ್ಷಕರು

Written by Soma Shekar

Published on:

---Join Our Channel---

Bigg Boss ಬಿಗ್ ಬಾಸ್ (Bigg Boss) ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ನೀಡಿರೋದು ಸರಿಗಮಪ ಸಿಂಗಿಂಗ್ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದ ಗಾಯಕ ಹನುಮಂತ (Hanumantha) ಹನುಮಂತ ಸರಿಗಮಪ ನಂತರ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಭರ್ಜರಿ ಬ್ಯಾಚುಲರ್ಸ್ ಹೀಗೆ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈಗ ಬಿಗ್ ಬಾಸ್ ಮನೆಯಲ್ಲಿ ಮುಗ್ಧನ ತರ ಆಡ್ತಿರೋದು ನೋಡಿ ಕೆಲವರು ಅನುಮಾನ ಪಡುತ್ತಿದ್ದಾರೆ.‌

ವೆಸ್ಟರ್ನ್ ಟಾಯ್ಲೆಟ್ ಬಳಕೆ ಮಾಡೋ ವಿಚಾರದಲ್ಲಿ ಧನರಾಜ್ (Dhanraj) ಸಹಾಯ ಪಡೆದ ಹನುಮಂತ ತಾನು ಅದ್ರ ಮೇಲೆ ಹತ್ತಿ ಕೂತ್ಕೊಂಡು ಯೂಸ್ ಮಾಡ್ತೀನಿ ಅಂದಿದ್ದಾನೆ. ನಂತರ ಸ್ವಿಮ್ಮಿಂಗ್ ಪೂಲ್ ಹತ್ರ ಬಂದು ನಾನು ಸ್ನಾನ ಮಾಡಬೇಕು ನೀವು ಒಳಗೆ ಹೋಗಿ ಅಂತ ಗೌತಮಿ ಮತ್ತು ಮೋಕ್ಷಿತಾಗೆ ಹೇಳಿದ್ದಾನೆ.

ಅಲ್ಲದೇ ಪೂಲ್ ನಲ್ಲಿ ಸ್ನಾನ ಮಾಡೋಕೆ ಸೋಪು ಮತ್ತು ಶ್ಯಾಂಪೂ ಸಹಾ ಕೇಳಿದ್ದಾನೆ. ಆಗ ಉಗ್ರಂ ಮಂಜು ಅದೆಲ್ಲಾ ಕೊಡಲ್ಲ, ಇಲ್ಲಿ ಸ್ವಲ್ಪ ಹೊತ್ತು ಆಡಿ ನಂತರ ಬಾತ್ ರೂಮ್ ಗೆ ಹೋಗಿ ಸ್ನಾನ ಮಾಡಿ ಅಂತ ವಿವರಿಸಿ ಹೇಳಿದ್ದಾರೆ. ಹನುಮಂತನ ಇಂತ ಮುಗ್ಧತೆ ನೋಡಿ ಅನೇಕರು ಅಸಮಾಧಾನ ಹೊರ ಹಾಕುತ್ತಿದ್ದಾರೆ.

ಈಗಾಗಲೇ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿರೋ ಹನುಮಂತನಿಗೆ ಇದೆಲ್ಲಾ ಗೊತ್ತೇ ಇಲ್ವಾ? ಇದೆಲ್ಲಾ ನಾವು ನಂಬಬೇಕಾ? ಹನುಮಂತ ನಿಜವಾಗ್ಲೂ ಇಷ್ಟೊಂದು ಮುಗ್ಧನಾ? ಅಂದ್ರೆ ಕೆಲವರು ಮಾತ್ರ ಹನುಮಂತ ಸ್ಮಾರ್ಟ್ ಮುಗ್ಧ ಎಂದು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ‌

Bigg Boss ನೀನು ಯಾವಳೇ ಡಿಸೈಡ್ ಮಾಡೋಕೆ? ಬಿಗ್ ಬಾಸ್ ಮನೇಲಿ ಐಶ್ವರ್ಯ ಮೇಲೆ ರೊಚ್ಚಿಗೆದ್ದ ಮಾನಸ

Leave a Comment