Bigg Boss ನೀನು ಯಾವಳೇ ಡಿಸೈಡ್ ಮಾಡೋಕೆ? ಬಿಗ್ ಬಾಸ್ ಮನೇಲಿ ಐಶ್ವರ್ಯ ಮೇಲೆ ರೊಚ್ಚಿಗೆದ್ದ ಮಾನಸ

Written by Soma Shekar

Published on:

---Join Our Channel---

Bigg Boss : ಬಿಗ್‌ ಬಾಸ್‌ (Bigg Boss) ಮನೆಯಲ್ಲಿ ನಾಮಿನೇಷನ್ ಎಂದರೆ ಸಾಕು ಅದು ಒಂದಷ್ಟು ಚರ್ಚೆಗಳಿಗೆ ಕಾರಣವಾಗುತ್ತದೆ. ಈಗಲೂ ಸಹಾ ಮನೆಯಲ್ಲಿ ನಾಮಿನೇಷನ್‌ ಪ್ರಕ್ರಿಯೆ ಹೊಸ ಕಿಚ್ಚನ್ನು ಹೊತ್ತಿಸಿದ ಹಾಗೆ ಕಾಣ್ತಿದೆ. ಮನೆ ಮಂದಿಯ ನಡುವೆ ನಾಮಿನೇಷನ್‌ ವಿಚಾರವಾಗಿ ಮತ್ತೆ ವಾಕ್ಸಮರ‌ ನಡೆದಿದೆ.‌ ಈ ವಾರ ಮನೆಯಿಂದ ಯಾರು ಹೋಗಬೇಕೆಂಬ ನಾಮಿನೇಷನ್ ನಡೆದಿದೆ.

ನಾಮಿನೇಷನ್ ವೇಳೆಯಲ್ಲಿ ಸ್ಪರ್ಧಿಗಳು ನೀಡಿದ ಕಾರಣಗಳು ಜಗಳಕ್ಕೆ ಕಾರಣವಾಗಿದೆ. ತಿವಿಕ್ರಮ್‌ ಹಾಗೂ ಐಶ್ವರ್ಯಾ (Aishwarya) ನಾಮಿನೇಷನ್ ಮಾಡುವಾಗ ಐಶ್ವರ್ಯಾ, ಮಾನಸ ಅವರು ಅಪ್ರಬುದ್ಧತೆಯಿಂದ ಇದ್ದಾರೆಂದು ಕಾರಣ ನೀಡಿ ನೇರವಾಗಿ ನಾಮಿನೇಟ್ ಮಾಡಿದ್ದಾರೆ.

ಐಶ್ವರ್ಯಾ ಕೊಟ್ಟ ಕಾರಣ ಕೇಳಿ ಮಾನಸ (Manasa) ಸಿಡಿದೆದ್ದಿದ್ದಾರೆ. “ನನ್ನ ಗುಣ ಡಿಸೈಡ್‌ ಮಾಡೋಕೆ ನೀನು ಯಾವಳೇ..” ಅಂತ ಅರಚಿದ್ದಾರೆ. ಇದಕ್ಕೆ ಐಶ್ವರ್ಯಾ ಪ್ರತಿಕ್ರಿಯೆ ಕೊಟ್ಟು ಅವಳು ಗಿವಳು ಏನು ಬೇಡ ಅಂಥ ಮಾತನಾಡ್ತಾ ಮುಂದೆ ಬಂದಿರೋದನ್ನ ಪ್ರೋಮೊದಲ್ಲಿ ತೋರಿಸಲಾಗಿದೆ.

ಇದೇ ನಾಮಿನೇಷನ್ ವೇಳೆಯಲ್ಲಿ ತ್ರಿವಿಕ್ರಮ್ ಮತ್ತು ಉಗ್ರಂ‌ ಮಂಜು ಅವರ ನಡುವೆ ಕೂಡಾ ಒಂದಷ್ಟು ಕೋಪದಿಂದ ಮಾತುಗಳು ವಿನಿಮಯ ಆಗಿದೆ. ಏಕೆಂದರೆ ನಾಮಿನೇಷನ್ ನಲ್ಲಿ ತ್ರಿವಿಕ್ರಮ್ ಮತ್ತು ಐಶ್ವರ್ಯ ಉಗ್ರಂ ಮಂಜು ಅವರ ಹೆಸರನ್ನ ಸಹಾ ತಗೊಂಡಿದ್ದಾರೆ.

Bigg Boss Kannada ಟಾರ್ಗೆಟ್ ಮಾಡಿದ್ರೆ ಬೀಳಿಸೋಕೆ ಎರಡು ನಿಮಿಷ ಸಾಕು; ಬಿಗ್ ಬಾಸ್ ಮನೇಲಿ ವಾಕ್ಸಮರ

Leave a Comment