Ram Gopal Varma : ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ತಮ್ಮ ವಿ ವಾ ದಾತ್ಮಕ ಹೇಳಿಕೆಗಳಿಂದಲೇ ಇತ್ತೀಚಿನ ದಿನಗಳಲ್ಲಿ ಸುದ್ದಿಯಾಗುತ್ತಿದ್ದಾರೆ. ಈಗ ಸಂದರ್ಶನವೊಂದರಲ್ಲಿ ಅವರು ತಾನು ಐಶ್ವರ್ಯ ರೈ (Aishwarya Rai) ಗರ್ಭಿಣಿ ಆದಾಗ ಬೇಸರದಿಂದ ನಟಿಗೆ ಒಂದು ದೀರ್ಘ ಮೆಸೆಜ್ ಮಾಡಿದ್ದಾಗಿ, ಅದಕ್ಕೆ ಐಶ್ವರ್ಯ ರೈ ಉತ್ತರ ಸಹಾ ನೀಡಿದ್ದರು ಎನ್ನುವ ಶಾಕಿಂಗ್ ಮಾತುಗಳನ್ನು ಹೇಳಿಕೊಂಡಿದ್ದಾರೆ.
ಅಂದವಾದ ಮಹಿಳೆ ಪ್ರೆಗ್ನೆಂಟ್ ಆಗೋದು ನಾನು ಸಹಿಸಲಾರೆ. ಅದ್ರಿಂದ ಮಹಿಳೆಯರಲ್ಲಿ ದೈಹಿಕ ಬದಲಾವಣೆ ಆಗುತ್ತೆ. ದೇವರು ಮಹಿಳೆಯರನ್ನು ಮಕ್ಕಳಿಗೆ ಜನ್ಮ ನೀಡಲು ಸೃಷ್ಟಿಸಿದ್ದಾನೆ ಎನ್ನುವುದು ಬ್ಯಾಡ್ ರಿಮೈಂಡರ್ ಆಗಿ ನೆನಪಾಗುತ್ತೆ. ಮಗು ಆದ ನಂತರ ಮಕ್ಕಳ ಪಾಲನೆ ಪೋಷಣೆ ಅಂತ ಹುಡುಗಿಯ ಜೀವನ ಇನ್ನೊಂದು ಪ್ರಪಂಚಕ್ಕೆ ಹೋಗುತ್ತೆ.
ಅದಕ್ಕೆ ನನಗೆ ಮಕ್ಕಳೆಂದರೆ ಆಗಲ್ಲ, ಮಕ್ಕಳು ಹೆಣ್ಣಿನ ಅಂದವನ್ನು ಹಾಳು ಮಾಡುತ್ತಾರೆ. ಇದೆಲ್ಲವನ್ನೂ ನಾನು ಬರೆದು ಐಶ್ವರ್ಯಗೆ ಮೆಸೆಜ್ ಮಾಡಿದ್ದೆ. ಈ ಮೆಸೆಜ್ ಗೆ ಐಶ್ವರ್ಯ ಪ್ರತಿಕ್ರಿಯೆಯನ್ನು ನೀಡಿದ್ದರು. ಆ ಮೆಸೆಜ್ ನಾನು ಆಕೆಯ ಅಂದಕ್ಕಾಗಿ ಕೊಟ್ಟ ಕಾಂಪ್ಲಿಮೆಂಟ್ ಹಾಗೂ ಆಕೆ ಹಾಗೇ ಇರಬೇಕೆಂದು ನಾನು ಬಯಸಿದ್ದು ಅವರಿಗೆ ಅರ್ಥವಾಗಿತ್ತು.
ಐಶ್ವರ್ಯ ತಮ್ಮ ಪ್ರತಿಕ್ರಿಯೆಯಲ್ಲಿ ಐ ಲವ್ ಯೂ ಟೂ ರಾಮು ಎಂದು ಹೇಳಿದ್ದರು ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ. ಅಂದವಾದ ಹುಡುಗಿಯರು ಮಕ್ಕಳಿಗೆ ಜನ್ಮ ಕೊಡಬೇಡಿ. ಮಕ್ಕಳಿಗೆ ಜನ್ಮಕೊಟ್ಟು ನಿಮ್ಮ ಅಂದವನ್ನು ಕಳೆದುಕೊಳ್ಳಬೇಡಿ ಎನ್ನುವುದೇ ನಾನು ಹುಡುಗಿಯರಿಗೆ ನೀಡುವ ಸಲಹೆ ಎಂದಿದ್ದಾರೆ.
ನಾನು ಉತ್ತಮ ನಟಿಯಲ್ಲ ಎಂದು ಎಲ್ಲರ ಎದುರಲ್ಲೇ ಹಿಂಜರಿಕೆ ಇಲ್ಲದೇ ಹೇಳಿದ ನಟಿ Samantha