ನಾನು ಉತ್ತಮ ನಟಿಯಲ್ಲ ಎಂದು ಎಲ್ಲರ ಎದುರಲ್ಲೇ ಹಿಂಜರಿಕೆ ಇಲ್ಲದೇ ಹೇಳಿದ ನಟಿ Samantha

Written by Soma Shekar

Published on:

---Join Our Channel---

Samantha : ಒಂದಷ್ಟು ವೈಯಕ್ತಿಕ ಕಾರಣಗಳಿಂದ ಸ್ಟಾರ್ ನಟಿ ಸಮಂತಾ (Samantha) ಇತ್ತೀಚಿನ ವರ್ಷಗಳಲ್ಲಿ ಅಷ್ಟಾಗಿ ಸಿನಿಮಾಗಳಲ್ಲಿ ಸಕ್ರಿಯವಾಗಿಲ್ಲ. ಅಲ್ಲದೇ ನಟಿ ಈಗ ಸಿನಿಮಾಗಳ ಬದಲಾಗಿ ವೆಬ್ ಸಿರೀಸ್ ಗಳ ಕಡೆಗೆ ತಮ್ಮ ಗಮನವನ್ನು ಹರಿಸಿದ್ದಾರೆ. ಈಗಾಗಲೇ ಸಮಂತಾ ತಾನೊಬ್ಬ ಅದ್ಭುತ ನಟಿ ಎನ್ನುವುದನ್ನು ಸಾಬೀತು ಮಾಡಿದ್ದಾರೆ.

ಆದರೆ ಸಮಂತಾ ತಾವೇ ಸ್ವತಃ ತಾನೊಬ್ಬ ಉತ್ತಮ ನಟಿ ಎನ್ನುವುದನ್ನು ಒಪ್ಪಿಕೊಂಡಿಲ್ಲ. ಯೇ ಮಾಯ ಚೇಸಾವೋ ಸಿನಿಮಾ ಮೂಲಕ ಟಾಲಿವುಡ್ ಗೆ (Tollywood) ಎಂಟ್ರಿ ಕೊಟ್ಟ ಈ ನಟಿ ಎಲ್ಲಾ ಸ್ಟಾರ್ ನಟರ ಜೊತೆಗೆ ತೆರೆಯನ್ನು ಹಂಚಿಕೊಂಡು, ಬಹು ಬೇಡಿಕೆಯ ನಟಿಯಾಗಿ, ಸ್ಟಾರ್ ನಟಿಯಾಗಿ ಮಿಂಚಿದ್ದಾರೆ.

ಸಮಂತಾ, ನನ್ನ ಅರ್ಧ ಜೀವನದಲ್ಲಿ ನಾನು ಒಳ್ಳೆಯ ನಟಿಯಾಗಿರಲಿಲ್ಲ. ನಾನು ಈಗಲೂ ಸಹಾ ಒಳ್ಳೆಯ ನಟಿ ಅಲ್ಲ. ಇದು ನನ್ನ ಮೇಲೆ ಮಾತ್ರ ನಿರ್ಧಾರ ಆಗುತ್ತದೆಂದು ನಾನು ಹೇಳಲ್ಲ. ಸರಿಯಾದ ತಂಡ ಸಿಕ್ಕರೆ ಎಲ್ಲವೂ ಸರಿ ಆಗುತ್ತದೆ ಎನ್ನುವ ಮಾತುಗಳನ್ನು ಅವರು ಹೇಳಿದ್ದಾರೆ.

ಅಲ್ಲದೇ ಸಿನಿಮಾವೊಂದಕ್ಕೆ ತಾನು ನಟಿಸಲು ಆಗೋದೇ ಇಲ್ಲ ಎಂದು ಹೇಳಿದೆ. ಅಲ್ಲದೇ ನಾನೇ ನಾಲ್ಕು ಜನ ನಟಿಯರ ಹೆಸರನ್ನು ಸಹಾ ತಿಳಿಸಿದೆ. ಆದರೆ ಅವರು ಒಪ್ಪದೇ ನನ್ನಿಂದಲೇ ಆ ಪಾತ್ರವನ್ನು ಮಾಡಿಸಿದರು ಎಂದಿದ್ದಾರೆ ಸಮಂತಾ. ನಟಿ ಏನೇ ಹೇಳಿದರೂ ಅವರು ಅದ್ಭುತ ನಟಿ ಎನ್ನುವುದು ಈಗಾಗಲೇ ಸಾಬೀತಾಗಿದೆ.

Bigg Boss ಮೊದಲ ದಿನವೇ ಹನುಮಂತನಿಗೆ ನರಕ ತೋರಿಸಿದ ಮನೆ ಮಂದಿ; ಕ್ಯಾಪ್ಟನ್ ಕ್ಯಾನ್ಸಲ್ ಮಾಡಿ, ಗೋಗರೆದ ಹನುಮಂತ

Leave a Comment