Bigg Boss ಮೊದಲ ದಿನವೇ ಹನುಮಂತನಿಗೆ ನರಕ ತೋರಿಸಿದ ಮನೆ ಮಂದಿ; ಕ್ಯಾಪ್ಟನ್ ಕ್ಯಾನ್ಸಲ್ ಮಾಡಿ, ಗೋಗರೆದ ಹನುಮಂತ

Written by Soma Shekar

Published on:

---Join Our Channel---

Bigg Boss : ಬಿಗ್​ ಬಾಸ್​ (Bigg Boss) ಕನ್ನಡ ಸೀಸನ್​ 11 ಕಾರ್ಯಕ್ರಮದ ನಾಲ್ಕನೇ ವಾರ ಆರಂಭವಾಗಿದೆ. ಈ ವಾರ ವೈಲ್ಡ್ ಕಾರ್ಡ್ ಎಂಟ್ರಿಯಾಗಿದ್ದು, ಗಾಯಕ ಹನುಮಂತ (Hanumanta) ಮನೆಯೊಳಗೆ ಬಂದಿದ್ದು, ಆತನಿಗೆ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಪಟ್ಟವನ್ನು ನೀಡಿದ್ದಾರೆ. ಈಗ ಮನೆಯಲ್ಲಿರುವ ಸ್ಪರ್ಧಿಗಳ ನಡುವೆ ಟಾಸ್ಕ್ ವೊಂದರ ವಿಚಾರವಾಗಿ ಹನುಮಂತನ ಮೇಲೆ ಅಸಮಾಧಾನ ಭುಗಿಲೆದ್ದಿದೆ.

ಬಿಗ್​ ಬಾಸ್​ ಮನೆಯ ಹೊಸ ಕ್ಯಾಪ್ಟನ್​ ಆಗಿರುವ ಹನುಮಂತನಿಗೆ ಬಿಗ್ ಬಾಸ್ ಟಾಸ್ಕ್​​ ಒಂದನ್ನು ನೀಡಿದ್ದಾರೆ. ಮನೆಯ ಸ್ಪರ್ಧಿಗಳನ್ನು ನಂಬರ್​ ಆಧಾರದಲ್ಲಿ ಅವರಿಗೆ ಸ್ಥಾನಗಳನ್ನು ನೀಡುವ ಟಾಸ್ಕ್ ಕೊಡಲಾಗಿದೆ. ಆದರೆ ಹನುಮಂತು ನೀಡಿರುವ ಸ್ಥಾನದ ಕುರಿತು ಸ್ಪರ್ಧಿಗಳ ನಡುವೆ ಅಸಮಾಧಾನದ ಅಲೆ ಎದ್ದಿದೆ.

ಚೈತ್ರಾ ಕುಂದಾಪುರ, ಭವ್ಯ ಗೌಡ, ಕೀರ್ತಿ ಧರ್ಮರಾಜ್​, ತ್ರಿವಿಕ್ರಮ್​ ಹೀಗೆ ಸಾಲು ಸಾಲಾಗಿ ಎಲ್ಲರೂ ಹನುಮಂತು​ ನೀಡಿದ ಸ್ಥಾನ ಗಳಿಂದಾಗಿ ಅಸಮಾಧಾನಗೊಂಡು ಸಿಟ್ಟಿಗೆದ್ದಿದ್ದಾರೆ. ತಮಗೆ ನೀಡಿದ ಸ್ಥಾನವನ್ನು ಯಾವ ಆಧಾರದಲ್ಲಿ ಕೊಟ್ಟೆ ಎಂದು ಪ್ರಶ್ನೆ ಮಾಡಿ ಆವೇಶವನ್ನು ಹೊರ ಹಾಕಿದ್ದಾರೆ.

ಮನೆಯವರ ಮಾತುಗಳನ್ನ ಕೇಳಿ ರೋಸಿ ಹೋದ ಹನುಮಂತ ಈ ರೀತಿ ಜಗಳ ಆಡ್ತೀರಾ ಅಂದ್ರೆ ನಾನು ಬರ್ತಾನೇ ಇರ್ಲಿಲ್ಲ. ನಾನು ಆಟದಲ್ಲಿ ಇಲ್ಲ, ಕ್ಯಾಪ್ಟನ್ ಕ್ಯಾನ್ಸಲ್ ಎಂದು ಹನುಮಂತ ಬಿಗ್ ಬಾಸ್ ಮುಂದೆ ಮನವಿಯನ್ನ ಮಾಡಿಕೊಂಡಿರುವುದು ಪ್ರೊಮೊದಲ್ಲಿ ಕಂಡಿದೆ.

Leave a Comment