Bigg Boss Kannada 11 ಕ್ಕೆ ಹನುಮಂತ ಗೆಸ್ಟಾ ಅಥವಾ ಕಂಟೆಸ್ಟಂಟಾ? ವೈಲ್ಡ್ ಕಾರ್ಡ್ ಎಂಟ್ರಿ ಗುಟ್ಟೇನು

Written by Soma Shekar

Published on:

---Join Our Channel---

Bigg Boss Kannada 11 : ಬಿಗ್ ಬಾಸ್ ಕನ್ನಡ ಸೀಸನ್ 11 ರ ಮನೆಯ (Bigg Boss Kannada 11) ಆಟ ರೋಚಕ ತಿರುವನ್ನ ಪಡೆದುಕೊಂಡಿದೆ. ಈ ವಾರ ಡಬಲ್ ಎಲಿಮಿನೇಷನ್ ನಂತರ ಆಟ ಶುರುವಾಗ ಮೂರನೇ ವಾರಾಂತ್ಯಕ್ಕೆ ಸ್ಪರ್ಧಿಯೊಬ್ಬರು ವೈಲ್ಡ್ ಕಾರ್ಡ್ (Wild Card Entry) ಎಂಟ್ರಿ ನೀಡಿದ್ದು ಮನೆ ಮಂದಿಗೆ ಅಚ್ಚರಿಯನ್ನು ಮೂಡಿಸಿದೆ.

ಹೌದು, ತನ್ನ ಹಾಡುಗಾರಿಕೆಯಿಂದಲೇ ಹೆಸರನ್ನು ಪಡೆದಿರುವ ಗಾಯಕ ಹನುಮಂತ (Hanumantha) ಈಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ವಾಹಿನಿ ಶೇರ್ ಮಾಡಿದ ಪ್ರೊಮೋ ಈಗ ಎಲ್ಲರ ಗಮನವನ್ನು ಸೆಳೆದಿದೆ. ಹನುಮಂತರ ಎಂಟ್ರಿಯೊಂದಿಗೆ ಹದಿನಾಲ್ಕು ಇದ್ದ ಸ್ಪರ್ಧಿಗಳ ಸಂಖ್ಯೆ ಈಗ ಹದಿನೈದಾಗಿದೆ.

ಇದಲ್ಲದೇ ಬಿಗ್ ಬಾಸ್ ಹನುಮಂತ ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಿ ಇರಲಿದ್ದಾರೆ ಎನ್ನುವ ಘೋಷಣೆ ಮಾಡಿದಾಗಂತೂ ಮನೆ ಮಂದಿಗೆ ಇನ್ನಷ್ಟು ಶಾಕ್ ಆಗಿದೆ. ಹನುಮಂತನ ಎಂಟ್ರಿ ಕೆಲವರಿಗೆ ಖುಷಿ ಕೊಟ್ರೆ ಇನ್ನೂ ಕೆಲವರಿಗೆ ಇದು ಅಚ್ಚರಿಯ ಜೊತೆಗೆ ಶಾಕ್ ಅನ್ನು ಸಹಾ ನೀಡಿದೆ ಅನ್ನೋದ್ರಲ್ಲಿ ಡೌಟೇ ಇಲ್ಲ.

ಹನುಮಂತ ಊಟ ಮಾಡುವಾಗ ಬಿಗ್ ಬಾಸ್ ಮಾತನಾಡಿಸಿದ್ದು, ಊಟ ಮಾಡುವಾಗ ಏನು ಮಾತಾಡಬೇಕಂತ ತಲೆ ಓಡಲ್ಲ ಇರಿ ಬಿಗ್ ಬಾಸ್ ಅಂತ ಹೇಳಿದ ಹನುಮಂತನ ಮುಗ್ಧತೆ ನೋಡಿ ಮನೆ ಮಂದಿ ನಕ್ಕಿದ್ದಾರೆ. ಹನುಮಂತ ಗೆಸ್ಟ್ ಅಥವಾ ಕಂಟೆಸ್ಟೆಂಟಾ‌ ಅನ್ನೋದನ್ನ ಕಾದು ನೋಡಬೇಕಾಗಿದೆ.

Leave a Comment